ಚಿಕ್ಕೋಡಿ

ಅಂಕಲಿ ಬ್ರಹ್ಮಕುಮಾರಿ ಕೇಂದ್ರದಲ್ಲಿ ರಕ್ಷಾ ಬಂಧನ ಸಂಭ್ರಮ

ಅಂಕಲಿ ಬ್ರಹ್ಮಕುಮಾರಿ ಕೇಂದ್ರದಲ್ಲಿ ರಕ್ಷಾ ಬಂಧನ ಸಂಭ್ರಮ

ಲೋಕದರ್ಶನ ವರದಿ 

ಮಾಂಜರಿ 27: ಸಮೀಪದ ಅಂಕಲಿ ಗ್ರಾಮದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ರಕ್ಷಾ ಬಂಧನ ಮಹೋತ್ಸವವನ್ನು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಗುರುವಾರ ದಿ. 27ರಂದು  ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರದ ಬಿ.ಕೆ. ಆರತಿ ಹಾಗೂ ಬಿ.ಕೆ. ಸವಿತಾ ಅವರು ಆಗಮಿಸಿದ್ದ ಸಹೋದರ-ಸಹೋದರಿಯರಿಗೆ ರಾಖಿ ಕಟ್ಟಿ, ಸಿಹಿ ಹಂಚುವ ಮೂಲಕ ಹಬ್ಬದ ಶುಭಾಶಯ ಕೋರಿದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಕೆ. ಆರತಿ ಅವರು ರಕ್ಷಾ ಬಂಧನವು ಪ್ರತಿಯೊಬ್ಬರ ಜೀವನದಲ್ಲಿ ಸಂತಸ ತರುವ ಪವಿತ್ರ ಹಬ್ಬವಾಗಿದೆ. ಪ್ರತಿಯೊಬ್ಬರೂ ತಮ್ಮ ಮನಸ್ಸು, ವಚನ ಮತ್ತು ಕರ್ಮಗಳಲ್ಲಿ ಶುದ್ಧತೆ ಹಾಗೂ ಪವಿತ್ರತೆಯನ್ನು ಅಳವಡಿಸಿಕೊಳ್ಳಬೇಕು. ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ನಮ್ಮ ಭಾರತ ಭೂಮಿಯನ್ನು ಸ್ವರ್ಗ ಭೂಮಿಯನ್ನಾಗಿ ಪರಿವರ್ತಿಸಲು ಶ್ರಮಿಸೋಣ ಎಂದು ಕರೆ ನೀಡಿದರು. 

ಬಳಿಕ ಮಾತನಾಡಿದ ಬಿ.ಕೆ. ಸವಿತಾ ಅವರು ಈ ಪವಿತ್ರ ದಿನದಂದು ಪ್ರತಿಯೊಬ್ಬರ ಮೇಲೆಯೂ ನಿರಾಕಾರ ಶಿವಬಾಬಾರ ಅಭಯ ಹಸ್ತ ಮತ್ತು ರಕ್ಷಣೆ ಸದಾ ಇರಲಿ ಎಂದು ಶುಭ ಹಾರೈಸಿದರು. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಹಾಗೂ ಅಮೂಲ್ಯವಾದ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮನೋಹರ ತೋರಸೆ ಮತ್ತು ಪೋಪಟ ಪವಾರ ಅವರನ್ನು ಸಂಸ್ಥೆಯ ವತಿಯಿಂದ ಶಾಲಾ ಹೊದಿಸಿ, ಗೌರವಿಸಿ ಸನ್ಮಾನಿಸಲಾಯಿತು. 


ಸುದ್ದಿ ಓದಿ