ಬೆಳಗಾವಿಯಲ್ಲಿ ಮಳೆರಾಯನ ಆರ್ಭಟ : ನೀರಿನಿಂದ ತುಂಬಿ ಹರಿದ ಹಳ್ಳಕೊಳ್ಳಗಳು : ಜನಜೀವನ ಅಸ್ತವ್ಯಸ್ತ

ಬೆಳಗಾವಿಯಲ್ಲಿ ಮಳೆರಾಯನ ಆರ್ಭಟ : ನೀರಿನಿಂದ ತುಂಬಿ ಹರಿದ ಹಳ್ಳಕೊಳ್ಳಗಳು : ಜನಜೀವನ ಅಸ್ತವ್ಯಸ್ತ

ಬೆಳಗಾವಿ : ನಗರ ಸೇರಿದಂತೆ ಬೆಳಗಾವಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದ ಕೆಲವಡೆ ರಸ್ತೆಗಳಲ್ಲಿ ಮತ್ತು ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ರಸ್ತೆ ಸಂಚಾರ ಅಸ್ತವ್ಯಸ್ತತೆ ಯಾದ ಘಟನೆ ನಡೆದಿದೆ. 


  ಕಳೆದ ಕೆಲವು‌ದಿನಗಳಿಂದ ಸುಡು ಬಿಸಿಲಿನ ತಾಪಮಾನ ದಿಂದ ಬೆಂದು ಹೋಗಿದ್ದ ಜನರು ಇಂದು ಸಂಜೆ ಸುರಿದ ಮಳೆಯ ತಂಪನೆ ಗಾಳಿಯಿಂದ ನಿಟ್ಟುಸಿರು ಬಿಡುವಂಥತಾಯಿತು.

   ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ಮಳೆರಾಯನ ಆಗಮನದಿಂದ ಬೆಳಗಾವಿ ನಗರ ಸೇರಿದಂತೆ  ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ‌ ಮಳೆಯ ಆರ್ಭಟ ದಿಂದ ಪ್ರಮುಖ  ರಸ್ತೆಗಳಲ್ಲಿ ನೀರು ತುಂಬಿ ಹರಿದ ಕಾರಣ ರಸ್ತೆ ಸಂಚಾರಕ್ಕೆ ಕೆಲವೆಡೆ ಅಡಚಣಿ ಉಂಟಾಗಿತ್ತು. ಕೆಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿದವು. 

ಸುದ್ದಿ ಓದಿ