ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು

ಮಳೆಯ ಅವಾಂತರ : ನದಿಯಂತಾದ  ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು

ಸಂಕೇಶ್ವರ : ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಅನೆಕಲ್ಲು ಮಿಶ್ರಿತ ಗಾಳಿ ಮಳಿಗೆ ಅವಾಂತರ ಸೃಷ್ಟಿ ಯಾಗಿದ್ದು, ಗಿಡ‌ಮರಗಳು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಅಲ್ಲದೆ ಗೋಟೂರು ಗ್ರಾಮದ ಬಳಿಯ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿದಲ್ಲಿ ಮಳೆಯ ನೀರು ಅಕ್ಷರಶಃ ನದಿಯಂತೆ ಭಾಸವಾದಂತೆ ಕಂಡು ಬಂದಿದೆ. ಈ ನೀರಿನಲ್ಲಿ ಕೆಲವು ಕಾರ ಸೇರಿದಂತೆ ವಾಹನಗಳು ಸಿಲುಕಿ ಚಾಲಕರು, ಪ್ರಯಾಣಿಕರು ಪರದಾಡುವಂತೆ ಆಗಿದೆ.


        ಮಂಗಳವಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾದ ಅನೆಕಲ್ಲು ಮಿಶ್ರಿತ ಗಾಳಿ ಮಳೆಗೆ ರಸ್ತೆಗಳು ತುಂಬಿ ಹರಿದು ಕೆಲ ಅಂಗಡಿ ಮನೆಗಳಿಗೂ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಕೆಲವು ಮನೆಗಳಿಗೆ ಅನೆಕಲ್ಲು ಮಳೆಯಿಂದ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. 


    ಮಂಗಳವಾರ ರಾತ್ರಿ  8 ಗಂಟೆಯ ಸುಮಾರಿಗೆ ಪ್ರಾರಂಭವಾದ ಮಳೆಯು 1.5 ತಾಸುಗಳಲ್ಲಿ ದೊಡ್ಡ ಅವಾಂತರ ಸೃಷ್ಟಿ ಮಾಡಿದೆ. 

ಸುದ್ದಿ ಓದಿ