ಮಹಲಿಂಗಪುರ

ಮಳೆಯ ಅವಾಂತರ, ಶಾಸಕ ಸವದಿ ಭೇಟಿ: ಪರೀಶೀಲನೆ

ಮಳೆಯ ಅವಾಂತರ, ಶಾಸಕ ಸವದಿ ಭೇಟಿ:  ಪರೀಶೀಲನೆ

ಮಹಾಲಿಂಗಪುರ:  ಕಳೆದೆರಡು ದಿನಗಳಲ್ಲಿ ಸಂಭವಿಸಿದ ಬಿರುಸಾದ ಗಾಳಿ ಮತ್ತು ಭಾರಿ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದು, ಮಂಗಳವಾರ ರಾತ್ರಿ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ  ಸ್ಥಳೀಯ ಬಸವೇಶ್ವರ ವೃತ್ತದಲ್ಲಿರುವ ವಿರುಪಾಕ್ಷಯ್ಯ ಮಸಗುಪ್ಪಿಮಠ ಅವರ ಮೊಬೈಲ್ ಅಂಗಡಿ, ಸಿದ್ದಪ್ಪ ಹಡಪದ ಅವರ ಕ್ಷೌರದ ಅಂಗಡಿ, ಬಂದೇನವಾಜ್ ಯಾದವಾಡರ ಕೃಷಿ ಪಂಪ್ ಸೆಟ್ ರಿಪೇರಿ ಮತ್ತು ಗ್ಯಾಸ್ ಒಲೆ ಅಂಗಡಿ, ಗುಲಾಬ್ ನದಾಫ್ ಅವರ ಮೊಬೈಲ್ ಮತ್ತು ರೇಡಿಯಮ್ ಅಂಗಡಿ ಸುಟ್ಟು ಭಾರಿ ನಷ್ಟವಾಗಿದ್ದು ಗುರುವಾರ ಶಾಸಕ ಸಿದ್ದು ಸವದಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು.  

ಸದರಿ ಅಂಗಡಿಗಳಿಂದಲೇ ತಮ್ಮ ಹಾಗೂ ಕುಟುಂಬದ ಜೀವನ ನಡೆಯುತ್ತಿತ್ತು ಆದರೆ ಆಕಸ್ಮಿಕವಾಗಿ ಸಂಭವಿಸಿದ ಸಿಡಿಲಿನಿಂದ ತುಂಬಾ ನಷ್ಟವಾಗಿ ಈಗ ದುಡಿಮೆ ಇಲ್ಲದೆ ಪರಿತಪಿಸುತಿದ್ದೇವೆ ಕಾರಣ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಶಾಸಕರಲ್ಲಿ ಮನವಿ ಮಾಡಿದರು.  

ಮನವಿಗೆ ಸ್ಪಂದಿಸಿದ ಶಾಸಕ ಸಿದ್ದು ಸವದಿ ಮಾತನಾಡಿ, ಸ್ಥಳೀಯ ಪಿ ಎಸ್‌ಐ ಅವರಿಗೆ ಸೂಕ್ತ ತನಿಖೆ ಕೈಗೊಂಡು ಶೀಘ್ರದಲ್ಲಿ ವರದಿ ಸಲ್ಲಿಸಲು ತಿಳಿಸುತ್ತೇನೆ ಹಾಗೂ ಸಿಡಿಲಿನಿಂದ ಹಾನಿ ಸಂಭವಿಸಿದ್ದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಪರಿಹಾರ ಒದಗಿಸಲು ಅವಕಾಶವಿದ್ದು ಶೀಘ್ರ ತನಿಖೆ ಮಾಡಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. 

ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಶಿವಾನಂದ ಅಂಗಡಿ, ಪುರಸಭಾ ಸದಸ್ಯ ರಾಜು ಚಮಕೇರಿ, ಜಮೀರ್ ಯಕ್ಸಂಬಿ, ಮಹೇಶ ಜಿಡ್ಡಿಮನಿ, ಶಾಸಕರ ಆಪ್ತ ಸಹಾಯಕ ಬಸವರಾಜ ಮಡಿವಾಳರ ಇತರರಿದ್ದರು.  ಸಂತ್ರಸ್ತರಾದ ವಿರೂಪಾಕ್ಷಯ್ಯ ಮಸುಗುಪ್ಪಿಮಠ 2 ಲಕ್ಷ, ಸಿದ್ದಪ್ಪ ಹಡಪದ 1 ಲಕ್ಷ, ಬಂದೇನವಾಜ್ ಯಾದವಾಡ 4 ಲಕ್ಷ, ಗುಲಾಬ್ ನದಾಫ್ 2.50 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿಸಿದರು.  




ಸುದ್ದಿ ಓದಿ