ರಾಘವೇಂದ್ರ ರಾಯರ ಆರಾಧನಾ ಮಹೋತ್ಸವ ಆರಂಭ
ಮಹಾಲಿಂಗಪುರ: ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಆ. 31 ರಿಂದ ಸೆ. 2 ರವರೆಗೆ ಮೂರು ದಿನ ವಿಜೃಂಭಣೆಯಿಂದ ನಡೆಯಲಿದೆ ಎಂದು ವ್ಯವಸ್ಥಾಪಕ ಮುರಳಿಧರ ಹುಲಿ ಆಚಾರ್ಯ ತಿಳಿಸಿದರು.
ಗುರುವಾರ ಪೂರ್ವಾರಾಧನೆ, ಶುಕ್ರವಾರ ಮಧ್ಯಾರಾಧನೆ, ಶನಿವಾರ ಉತ್ತರಾರಾಧನೆ, ಶುಕ್ರವಾರ ಹಾಗೂ ಶನಿವಾರ ಬೆಳಗ್ಗೆ 11:30 ಕ್ಕೆ ರಥೋತ್ಸವ ಜರುಗುವುದು, ನಿತ್ಯ ಬೆಳಿಗ್ಗೆ 5 ರಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಧ್ಯಾಹ್ನ ನೈವೇದ್ಯ, ಅಲಂಕಾರ ಹಸ್ತೋದಕ ಮಹಾಮಂಗಳಾರತಿ, ತೀರ್ಥ ಪ್ರಸಾದ, ಸಾಯಂಕಾಲ ಸ್ವಸ್ತಿ ವಾಚನ ಮಹಾಮಂಗಳಾರತಿ ,ಸತ್ಯನಾರಾಯಣ ಪೂಜೆ, ನೆರವೇರುತ್ತದೆ, ವಿಶೇಷ ಪೂಜೆ, ಮಹಾಪಂಚಾಮೃತ, ವಿಶೇಷ ಅಲಂಕಾರ, ಭಜನೆ, ಪಲ್ಲಕ್ಕಿ ಉತ್ಸವ, ಅಷ್ಟೋತ್ತರ, ತುಳಸಿ ಅರ್ಚನೆ, ಪ್ರವಚನ, ಮಹಾಪ್ರಸಾದ ಜರುಗುವುದು ಎಂದು ತಿಳಿಸಿದರು.
ಸದಸ್ಯರಾದ ಶ್ರೀಪಾದ ಗುಂಡಾ, ಡಿ.ಎಸ್.ಕುಲಕರ್ಣಿ, ಶಿವಾನಂದ ಚವಲಗಿ, ಹುಚ್ಚೇಶ ವಡ್ಡರ, ಶ್ರೀನಿವಾಸ ಗುಂಡಾ, ಪ್ರಕಾಶ ತಾಳಿಕೋಟಿ, ರಾಜು ತಾಳಿಕೋಟಿ, ಆನಂದ ಗುಂಡಾ, ಪ್ರಕಾಶ ತಾಳಿಕೋಟಿ ಇದ್ದರು