ಸರಳವಾಗಿ ಗಣೇಶ ಚತುರ್ಥಿ ಆಚರಣೆ
ಬಳ್ಳಾರಿ 11: ಜಿಲ್ಲೆಯಾದ್ಯಂತ ಗಣೇಶನ ಹಬ್ಬ ಆಚರಣೆಯಿಂದ ನಡೆಯುತ್ತಿದ್ದು, ನಗರದ 10ನೇ ವಾರ್ಡ್ನ ಕಣೇಕಲ್ಲು ಬಸ್ ನಿಲ್ದಾಣ ಹತ್ತಿರವಿರುವ ರೈಸಿಂಗ್ ವಿನಾಯಕ ಮಿತ್ರಮಂಡಳಿ ವತಿಯಿಂದ 22ನೇ ವರ್ಷದಂದು ಸರಳವಾಗಿ ಗಣೇಶನ ಉತ್ಸವವನ್ನು ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಭಿನ್ನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ನಗರದ್ಯಾಂತ ಜನರ ಮೆಚ್ಚೆಗೆ ಪಡೆಯುತ್ತಿದೆ. ಈ ವರ್ಷವು ಗಣೇಶನು ಅಂಗೈಯಲ್ಲಿ ಕುಳಿತು ಭಕ್ತಾಧಿಗಳಿಗೆ ಆರ್ಶೀವಾದ ನೀಡುತ್ತಿರುವುದು ಆರ್ಕಷಕವಾಗಿದೆ. ಕೋವಿಡ್-19 ಪ್ರಯುಕ್ತ ಭಕ್ತಾಧಿಗಳು ಮುಖಗವಸು ತಪ್ಪದೇ ಹಾಕಿ ಬರಬೇಕು, ಸಾಮಾಜಿಕ ಅಂತರವನ್ನು ಕಾಪಾಡುವ ಮೂಲಕ ದರ್ಶನವನ್ನು ಪಡೆಯಬೇಕು ಎಂದು ರೈಸಿಂಗ್ ವಿನಾಯಕ ಮಿತ್ರಮಂಡಳಿಯ ಸದಸ್ಯರಾದ ರಂಜಿತ್, ದೀಪಕ್ ಮತ್ತು ರವಿ ಅವರು ಕೋರಿರುತ್ತಾರೆ. ಪ್ರತಿದಿನ ದೇವರಿಗೆ ಪೂಜೆ ನಡೆಯುತ್ತಿದ್ದು, ಭಕ್ತಾಧಿಗಳು ಆಗಮಿಸಿ ತನು, ಮನದಿಂದ ದೇವರ ಕೃಪೆಗೆ ಪಾತ್ರರಾಗಬೇಕು ಮತ್ತು ಸರ್ಕಾರ ಆದೇಶ ಹೊರಡಿಸಿರುವ ನಿಯಮಗಳ ಪ್ರಕಾರ ಗಣೇಶವನ್ನು ಆಚರಿಸಲಾಗುತ್ತದೆ. ಎಲ್ಲರೂ ಕೋವಿಡ್-19 ಲಸಿಕೆಯನ್ನು ತಪ್ಪದೇ ಹಾಕಿಸಿಕೊಂಡು ಮಹಾಂಮಾರಿ ರೋಗವನ್ನು ಹೋಗಲಾಡಿಸಬೇಕು ಎಂದು ಮಂಡಳಿಯ ಸದಸ್ಯರಾದ ಮುರಳಿ, ಹರೀಶ್ ಮತ್ತು ದಿನಿ ಅವರು ಹೇಳಿದ್ದಾರೆ.
ರೈಸಿಂಗ್ ಗೈಯ್ಸ್ ವಿನಾಯಕ ಮಿತ್ರಮಂಡಳಿಯ ಸದಸ್ಯರುಗಳಾದ ನಂದೀಶ್, ಕಿರಣ್, ಮುರಳಿ, ಗೋಪಿ, ಶಂಕರ್, ಭರತ್ ಕುಮಾರ್, ವೆಂಕಟೇಶ್, ಗಿರಿ, ತಿಪ್ಪೇಸ್ವಾಮಿ, ಚಂದ್ರ, ಅಂಜಿ, ಫಣಿ, ವಿನಯ್, ಸಂದೀಪ್, ವಿನಯ್ ಆರ್ಟ್ಸ, ಅನಿಲ್, ಕಾರ್ತಿಕ್, ಚಂದ್ರ, ಶಿವ ಸೇರಿದಂತೆ ಇತರರು.