ಮಹಲಿಂಗಪುರ

ಮಹಾಲಿಂಗಪುರದ ಪೂರ್ವಿ ಅಂಗಡಿ -ಅತ್ಯುತ್ತಮ ಆಟಗಾರ್ತಿಯಾಗಿ ಆಯ್ಕೆ

ಮಹಾಲಿಂಗಪುರದ ಪೂರ್ವಿ  ಅಂಗಡಿ -ಅತ್ಯುತ್ತಮ ಆಟಗಾರ್ತಿಯಾಗಿ ಆಯ್ಕೆ

ರಾಷ್ಟ್ರಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ 

ಮಹಾಲಿಂಗಪುರ: ಮಹಾರಾಷ್ಟ್ರದ ಎಲ್ಲೋರಾದಲ್ಲಿ ಇದೆ ಅ.29ರಂದು ನಡೆದ 2ನೇ ರಾಷ್ಟ್ರಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕದ ಮಹಿಳಾ ತಂಡ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದು 2ನೇ ಬಾರಿ ಚಾಂಪಿಯನ್ ಆಗಿದೆ. ಇದೇ ಪಂದ್ಯದಲ್ಲಿ ಮಹಾಲಿಂಗಪುರದ ಕೆಎಲ್ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ್ ಅಂಗಡಿ ಅವರ ಪುತ್ರಿ ಪೂರ್ವಿ  ಅಶೋಕ ಅಂಗಡಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉತ್ತರ ಕರ್ನಾಟಕದ ಏಕೈಕ ಆಟಗಾರ್ತಿಯಾಗಿದ್ದು, ಸ್ಪರ್ಧೆಯಲ್ಲಿ ಪಂದ್ಯದ ಅತ್ಯುತ್ತಮ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.ನವೆಂಬರ್ 17 ಮತ್ತು 18 ರಂದು ಸಿಂಗಾಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ  ಭಾಗವಹಿಸಲಿದ್ದಾಳೆ 

ಸುದ್ದಿ ಓದಿ