ಮಹಲಿಂಗಪುರ

ಉಪಕಾರ ಸ್ಮರಿಸಿ ಜೀವನ ಪಾವನ ಮಾಡಿಕೊಳ್ಳಿ : ಶಿವಕುಮಾರಶ್ರೀ

ಉಪಕಾರ ಸ್ಮರಿಸಿ ಜೀವನ ಪಾವನ ಮಾಡಿಕೊಳ್ಳಿ : ಶಿವಕುಮಾರಶ್ರೀ

ಮಹಾಲಿಂಗಪುರದ ಸಿದ್ದರೂಢ ಮಠಕ್ಕೆ ಶ್ರೀಗಳಿಂದ ಉತ್ತರಾಧಿಕಾರಿ ನೇಮಕ 

ಮಹಾಲಿಂಗಪುರ 02: ಜೀವಸಂಕುಲದಲ್ಲಿ ಮಾನವ ಜನ್ಮಕ್ಕೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಅದನ್ನು ಅರಿತುಕೊಂಡು ಅರ್ಥಪೂರ್ಣ ಬದುಕಿಗಾಗಿ ಅರಿವಿನ ಅವಶ್ಯಕತೆ ಇದೆ. ಉಪಕಾರವನ್ನು ಪಡೆದವರು ಜೀವನವಿಡಿ ಅದನ್ನು ಮರೆಯಬಾರದು. ಉಪಕಾರ ಸ್ಮರಣೆ ಇದ್ದರೆ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅದನ್ನು ಎದುರಿಸುವ ಧೈರ್ಯ ಇರುತ್ತದೆ. ಇಲ್ಲದಿದ್ದರೆ ಪಾಪಪ್ರಜ್ಞೆ ನಮ್ಮನ್ನು ಕಾಡುತ್ತದೆ. ಹಾಗಾಗಿ ಅಪಕಾರ ಮಾಡದೆ ಸಾಧ್ಯವಾದಷ್ಟು ಉಪಕಾರವನ್ನು ಮಾಡುವುದು ಶ್ರೇಯಸ್ಕರ ಎಂದು ಬಿದರಿನ ಚಿದಂಬರಾಶ್ರಮದ ಸದ್ಗುರು ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. 

 ನಗರದ ಬನಶಂಕರಿ ದೇವಸ್ಥಾದ ಸಾಂಸ್ಕೃತಿಕ ಭವನದಲ್ಲಿ ನಡೆಯುತ್ತಿರುವ ಸುವರ್ಣ ವೇದಾಂತ ಪರಿಷತ್ ಬ್ರಹ್ಮಲಿನ ಸದ್ಗುರು ಬಸವಾನಂದ ಮಹಾಸ್ವಾಮಿಗಳು 50 ನೇ ಪುಣ್ಯಾರಾಧನೆ ಹಾಗೂ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳ 80 ನೇ ವಧಂರ್ತಿ ಮಹೋತ್ಸವ ಕಾರ್ಯಕ್ರಮದ ಕೊನೆಯ 5ನೇ ದಿನದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ಕರುಣಿಸಿ ಬದುಕಿನಲ್ಲಿ ಸುಖ ಸಮೃದ್ಧಿ, ಶಾಂತಿ ಸಂಪತ್ತು ಬೇಕು. ಆದರೆ ಆ ಸಂಪತ್ತಿನಿಂದ ಶಾಶ್ವತವಾದ ಸುಖ ಸಿಗದು. ಗುರುವಿನಿಂದ ಜ್ಞಾನವನ್ನು ಸಂಪಾದಿಸಿಕೊಂಡು ಬಾಳುವುದು ಶ್ರೇಯಸ್ಕರ. ಫಲವಿತ್ತ ರೆಂಬೆ, ಗೋನೆ ಹೊತ್ತ ಬಾಳೆ, ತೆನೆ ಹೊತ್ತ ದಂಟು ಬಾಗುತ್ತದೆ. ಆದರೆ ಏನು ಇಲ್ಲದ ಈ ಭಂಡ ದೇಹ ಬೀಗುತ್ತದೆ. ನಾನು ನನ್ನದು ನನ್ನಿಂದಲೇ ಎಂಬ ಅಂಹಕಾರದ ಬಿಗುವಿಕೆಯಿಂದ ನಮ್ಮ ಬೆಲೆ ಕಡಿಮೆಯಾಗುತ್ತದೆ. ಆದರೆ ಸಮರ್ಥ ಗುರುವಿನ ಮಾರ್ಗದರ್ಶನದಿಂದ ಮಾತ್ರ ಮಾನವ ಜನ್ಮ ಸರಿದಾರಿಯಲ್ಲಿ ಸಾಗುತ್ತದೆ ಎಂದರು. 

ನಂತರ ಮಾತನಾಡಿದ ಪೂರ್ಣಾನಂದಾಶ್ರಮ ಕಾಡರಕೊಪ್ಪದ ಸದ್ಗುರು ದಯಾನಂದ ಸರಸ್ವತಿ ಮಹಾಸ್ವಾಮಿಗಳು ದೇವರು ನಮ್ಮಲ್ಲಿ ಇದ್ದು ಪ್ರತಿಯೊಂದು ಕೃತಿ ಮಾಡುತ್ತಾರೆ, ಆದರೆ ಅಹಂಕಾರರೂಪಿ ಅಜ್ಞಾನದಿಂದ ನಮಗೆ ಪ್ರತಿಯೊಂದು ಕೃತಿಯನ್ನು ನಾವೇ ಮಾಡುತ್ತೇವೆ ಎಂದು ಅನಿಸುತ್ತದೆ. ತಿಳಿದುಕೊಳ್ಳಿ, ಆತ್ಮವನ್ನು ನಮ್ಮಿಂದ ಬೇರೆ ಮಾಡಿದರೆ, ಆಗ ದೇವರೇ ಎಲ್ಲ ಮಾಡುತ್ತಾರೆ. ಆನಂದಿಂದ ಇರಲು ಸರಳ ಮಾರ್ಗ ಎಂದರೆ ನಮ್ಮಿಂದ ಆಗುವ ತಪ್ಪುಗಳ ಆಳಕ್ಕೆ ಹೋಗಿ ಹೋಗಲಾಡಿಸುವ ಪ್ರಯತ್ನ ಮಾಡುವುದು. ಅಹಂಕಾರದಿಂದ ವ್ಯಕ್ತಿ ಜೀವನದಲ್ಲಿ ಸತತವಾಗಿ ದುಃಖಿ ಆಗುತ್ತಾನೆ ಇದನ್ನು ಹೋಗಲಾಡಿಸಲು ಗುರುವಿನ ಉಪಕಾರ ಸ್ಮರಣೆ ಮಾಡಿದರೆ, ಪಾಪಕರ್ಮಗಳು ಕಡಿಮೆಯಾಗಿ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. 

ಉತ್ತರಾಧಿಕಾರಿ ನೇಮಕ : ಸ್ಥಳೀಯ ಬ್ರಾಹ್ಮವಿದ್ಯಾಶ್ರಮ ಸಿದ್ದಾರೂಢ ಮಠದ ಈಗಿರುವ ಸಹಜಾನಂದ ಸ್ವಾಮೀಜಿ ಅವರಿಗೆ 80 ವರ್ಷವಾಗಿದ್ದರಿಂದ ಅವರು ಆಶ್ರಮಕ್ಕೆ ಒಬ್ಬ ಉತ್ತರಾಧಿಕಾರಿ ನೇಮಕ ಅವಶ್ಯವಾಗಿತ್ತು. ಸಹಜಾನಂದ ಸ್ವಾಮೀಜಿ ಆವರ ಅಪೇಕ್ಷೆಯಂತೆ ನಗರದ ಯುವಕ ಚಂದ್ರು ಕದ್ದಿಮಣಿಯನ್ನು ಈಗಾಗಲೇ ಅವರನ್ನು ಅಧ್ಯಾತ್ಮ ಅಭ್ಯಾಸಕ್ಕೆ ಕಾಡರಕೊಪ್ಪದ ದಯಾನಂದ ಸರಸ್ವತಿ ಆವರ ಬಳಿ ಅಭ್ಯಾಸ ಮಾಡುತ್ತಿದ್ದು. ಅವರಿಗೆ ಸಿದ್ದಾನಂದ ಭಾರತಿ ಎಂದು ನಾಮಕರಣ ಮಾಡಿ ಉತ್ತರಾಧಿಕಾರಿಯಾಗಿ ನೇಮಕ ಮಾಡಿ ಬಿದರಿನ ಚಿದಂಬರಾಶ್ರಮದ ಶಿವಕುಮಾರ ಸ್ವಾಮಿಗಳು ಘೋಷಿಸಿ ನೂತನ ಉತ್ತರಾಧಿಕಾರಿ ಸ್ವಾಮೀಜಿ ಅವರನ್ನು ವೇದಿಕೆಯ ಮೇಲಿದ್ದ ಪೂಜ್ಯರು ಬಾಲಕನಿಗೆ ರುದ್ರಾಕ್ಷಿ ಕೀರೀಟ ತೊಡಿಸಿ ಆಶೀರ್ವದಿಸಿ ಹರಿಸಿದರು. 

ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಅನುಭವಾಮೃತವನ್ನು ಕರುಣಿಸಿದ ಮಹಾತ್ಮಾರಿಗೆ, ತನು ಮನ ಧನ ಅರ​‍್ಿಸಿದ ಮಹನೀಯರಿಗೆ ಹಳೆಯ ವಿದ್ಯಾರ್ಥಿಗಳಿಗೆ ನಗರದ ಗಣ್ಯ ಮಾನ್ಯರಿಗೆ ಪತ್ರಕರ್ತರನ್ನು ಹಲವು ವಿಧ ಸೇವೆ ಒದಗಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಸ್ಲಿಂ ಬಂಧುಗಳು ವೇದಿಕೆಯ ಮೇಲಿನ ಪೂಜ್ಯರನ್ನು ಸನ್ಮಾನಿಸಿ ನಗರ ಭಾವೈಕ್ಯತೆ ಮೆರೆದರು. 

ಸ್ವಾಮೀಜಿಗಳಾದ ಸಹಜಾನಂದ , ನಿರ್ಭಯಾನಂದ, ಜಗದೀಶ್ವರ, ನಿರೂಪಾದಿಶ್ವರ, ಗುರುನಾಥ, ರಾಮಚಂದ್ರ ಮೇತ್ರೆ, ಗಣೇಶಾನಂದ, ಲಕ್ಷ್ಮೀತಾಯಿ, ಸದಾಶಿವ ಗುರೂಜಿ, ಸಿದ್ದರಾಮ ಶಿವಯೋಗಿ, ಶಾಮಾನಂದ ಪೂಜಾರಿ ಸೇರಿ ಹಲವು ಮಹಾತ್ಮರು ಈ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಸಾಕ್ಷಿಯಾದರು.ಮುಖಂಡರಾದ ಡಾ. ಬಿ ಡಿ ಸೊರಗಾಂವಿ, ಮಲ್ಲಪ್ಪಾ ಭಾವಿಕಟ್ಟಿ, ಸಿ ಬಿ ಪಟ್ಟಣಶೆಟ್ಟಿ ಬಸವರಾಜ ಢಪಾಳಾಪುರ, ಸಿ ಎಂ ಕಟಗಿ, ಲಕ್ಕಪ್ಪ ಚಮಕೇರಿ, ಅಲ್ಲಪ್ಪಾ ಗುಂಜಿಗಾಂವಿ, ಪ್ರಭು ಬೆಳಗಲಿ, ಕೆ ಸಿ ಚಿಂಚಲಿ, ಎಂ ಪಿ ಅಂಗಡಿ, ಎಸ್ ಕೆ ಗಿಂಡೆ ಸೇರಿ ಸಾವಿರಾರು ಭಕ್ತರು ಸಾಕ್ಷಿಯಾದರು. 

ಸದ್ಗುರು ಸದನ ಉದ್ಘಾಟನೆ : ಸಿದ್ದಾರೂಢ ಬ್ರಾಹ್ಮವಿದ್ಯಾಶ್ರಮದಲ್ಲಿ ಪಿರಾಮಿಡ್ ಮಾದರಿಯಲ್ಲಿ ನಿರ್ಮಿಸಿರುವ ಸದ್ಗುರು ಸದನ ಜ್ಞಾನಮಂದಿರವನ್ನು ಬುಧವಾರ ಬಿದರಿನ ಚಿದಂಬರಾಶ್ರಮ ಸಿದ್ದಾರೂಢ ಮಠದ ಶಿವಕುಮಾರ್ ಸ್ವಾಮೀಜಿ ಉದ್ಘಾಟಿಸಿದರು. 

ಹಿಪ್ಪರಗಿಯ ಮಾಹಾಂತಯ್ಯಾ ಹಿರೇಮಠ ಜಂಬಗಿಯ ಅಡವೇಶ ಶಾಸ್ತ್ರೀಗಳು ಕೆಂಪವಾಡದ ಪ್ರಸನ್ನ ಶಾಸ್ತ್ರೀಗಳು ಹೋಮ ಹವನ ನಡೆಸಿದರು. 

ಭಕ್ತರಿಗೆ ಸದಾಶಿವ ಇಂಗಳಗಿ ಸಹೋದರರು ಮಹಾಪ್ರಸಾದದ ವ್ಯವಸ್ಥೆ ಮಾಡಿಸಿದ್ದರು. ಕಾರ್ಯಕ್ರಮವನ್ನು ಬಿದರಿನ ಗಣೇಶಾನಂದರು ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ