ಮಹಲಿಂಗಪುರ

ಪುರಪ್ರವೇಶ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು : ಅಡವಿಸಿದ್ಧರಾಮ ಸ್ವಾಮೀಜಿ

ಪುರಪ್ರವೇಶ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು : ಅಡವಿಸಿದ್ಧರಾಮ ಸ್ವಾಮೀಜಿ

ಮಹಾಲಿಂಗಪುರ 09: ಶ್ರೀ ಶಿವಲಿಂಗೇಶ್ವರರ ತಪೋಭೂಮಿ, ಅನುಷ್ಠಾನ, ಪವಾಡ ಸ್ಥಳಗಳಾದ ಮುನ್ನೂರು ಕಿಮೀ ದೂರದ ಗುಲ್ಬರ್ಗಾದ ಹಿರೇಸಾವಳಗಿ, ಕಲ್ಲೊಳ್ಳಿ, ತುಬಚಿ, ಸಾವಳಗಿ, ಖಾನಟ್ಟಿಗಳಿಂದ ಆರದ ಪಂಜಿನ ಜ್ಯೋತಿ, ಶಿವಲಿಂಗೇಶ್ವರ ಲಿಂಗ, ಬಸವಣ್ಣ, ಕಳಸಗಳನ್ನು ವಿವಿಧ ವಾದ್ಯಮೇಳಗಳೊಂದಿಗೆ 6 ನೂರು ಕುಂಭ, 5 ನೂರು ಆರತಿ, 1 ಕಿಮೀಗೂ ಅಧಿಕ ಉದ್ದದ ಜನಸಾಗರದೊಂದಿದೆ ಪುರಪ್ರವೇಶ ಮಾಡಿಸಿದ್ದು ಸೈದಾಪುರ ಗ್ರಾಮದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು, ರಬಕವಿಬನಹಟ್ಟಿಯ ತಾಲೂಕಿನಲ್ಲಿಯೇ ಅತೀ ದೊಡ್ಡ ಕಾರ್ಯಕ್ರಮ ಎಂದು ಶಿವಾಪುರದ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ಧರಾಮ ಸ್ವಾಮೀಜಿ ಹೇಳಿದರು. 

ಸಮೀಪದ ಸೈದಾಪುರ ಗ್ರಾಮದಲ್ಲಿ ಶಿವಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಲಿಂಗಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ಜರುಗಿದ ಶಿವಲಿಂಗೇಶ್ವರ ಲಿಂಗ, ಬಸವಣ್ಣ, ಕಳಸ ಪುರ​‍್ರವೇಶ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಶಿವಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣದ ದಿನವಾದ ಬುಧವಾರದವರೆಗೆ ನಿತ್ಯ ಸಂಜೆ ಪ್ರತಿ ಮನೆಯ ಮುಂದೆ ರಂಗೋಲಿ ಹಾಕಿ, ದೀಪಗಳನ್ನು ಬೆಳಗಿಸಿ, ಬುಧವಾರ ಸೈದಾಪುರ ಮತ್ತೊಂದು ಅಯೋಧ್ಯೆಯಾಗಬೇಕು, ಮತ್ತೊಂದು ರಾಮೋತ್ಸವವಾಗಬೇಕೆಂದರು. 

ಬಬಲಾದಿ ಮೂಲ ಸಂಸ್ಥಾನ ಮಠದ ಸಿದ್ಧರಾಮಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬಬಲಾದಿ ಸದಾಶಿವ ಮುತ್ಯಾ ಅವರು ಸಿದ್ಧಿ ಸಾಧನೆಗಾಗಿ ತೀರ್ಥ (ಹೆಂಡ) ಸೇವಿಸಿದರು, ಅವರ ಹೆಸರು ಹೇಳಿಕೊಂಡು ಹೆಂಡ ಸೇವಿಸುವ ನೀವು ಯಾವ ಸಿದ್ಧಿ ಪುರುಷರು ಆದ್ದರಿಂದ ಅವರ ಹೆಸರಲ್ಲಿ ಯಾರೂ ಹೆಂಡ ಕುಡಿಯಬೇಡಿ ಎಂದ ಅವರು ಜಗತ್ತು ಹದಗೆಟ್ಟಿಲ್ಲ, ಮನಸ್ಸುಗಳು ಹದಗೆಟ್ಟಿವೆ, ದೃಷ್ಠಿ ಹದಗೆಟ್ಟಿದೆ, ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಮಡದಿ ಜೊತೆ ಮೋಜು ಮಸ್ತಿ ಮಾಡುತ್ತಾ ಯೌವನ ಮತ್ತು  ಧನಮದದಿಂದ ಹೆಣ್ಣು, ಮಣ್ಣಿಗಾಗಿ ಬಡಿದಾಡುವ ‘ನಾ’‘ನಾ’ ಎನ್ನುವ ಶ್ವಾನಗಳು ಏನನ್ನೂ ಗಳಿಸಲಾರವು, ಭಗವಂತನ ನಾಮಸ್ಮರಣೆ, ಹೆತ್ತವರ ಆಜ್ಞೆ ಪಾಲನೆಯಿಂದ ಸಾಧು ಸತ್ಪುರುಷರಾಶೀರ್ವಾದದಿಂದ ಜೀವನದ ಸರ್ವ ಕಂಟಕಗಳೂ ದೂರವಾಗುತ್ತವೆ ಎಂದರು. 

ಕೆಎಂಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ಮಾತನಾಡಿ, ಸೈದಾಪುರದಲ್ಲಿ ಯುವಕರು ಇಂದು ಅತ್ಯಂತ ಶ್ರೇಷ್ಠ ಕಾರ್ಯ ಹಮ್ಮಿಕೊಂಡಿದ್ದು,  ಇದು ಮುಂದುವರಿಯಲಿ ಎಂದರು. 

ಚಿಕ್ಕಪಡಸಲಗಿಯ ಶಿವರುದ್ರಯ್ಯ ಕಲ್ಯಾಣಯ್ಯ ಬಬಲಾದಿಮಠ, ಮಾತೆ ಬಸಮ್ಮ ಕುಂದರಗಿ, ನಿಜಗುಣಯ್ಯ ಬಸಯ್ಯ ಹಿರೇಮಠ, ಈರಯ್ಯ ಮಠಪತಿ, ಮಹಾಂತಯ್ಯ ಮಠಪತಿ ವೇದಿಕೆ ಮೇಲಿದ್ದರು. 

ಶಿವಲಿಂಗೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಮುರಿಗೆಪ್ಪ ಗುಣದಾಳ, ಗ್ರಾಪಂ ಸದಸ್ಯ ಮಲ್ಲಪ್ಪ ಕೌಜಲಗಿ, ಪಿಕೆಪಿಎಸ್ ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ, ಮುತ್ತಪ್ಪ ಭೀ.ನಾಯಕ, ಮಹಾದೇವ ಗುಣದಾಳ, ಶಿವಲಿಂಗ ಸತ್ಯಪ್ಪ ಪಾಶ್ಚಾಪುರ, ಅರ್ಜುನ ಪಾಶ್ಚಾಪುರ, ಮಂಜು ಪಾಶ್ಚಾಪುರ,ಮಹಾಲಿಂಗ ಪಾಶ್ಚಾಪುರ,ಮಲ್ಲಪ ನಿ.ಪಾಶ್ಚಾಪುರ, ಮಹಾದೇವ ಪಾಶ್ಚಾಪುರ,ಕಲ್ಲಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ಪಾಶ್ಚಾಪುರ, ಶಿವಲಿಂಗ ಮುಗಳಖೋಡ, ಸಿದ್ಧಪ್ಪ ಪಾಶ್ಚಾಪುರ,ರಮೇಶ ಚಿಂಚಲಿ, ಶಿವಪ್ಪ ಮಹಾಲಿಂಗ ಪಾಶ್ಚಾಪುರ, ಪರಮಾನಂದ ಉಳ್ಳಾಗಡ್ಡಿ, ಶಂಕರ ಪಾಶ್ಚಾಪುರ, ಗುರುಪಾದ ಗುಣದಾಳ, ಆನಂದ ಕೇತಗೌಡ, ನಾಗಪ್ಪ ಕೇತಗೌಡ, ಬಸವರಾಜ ಮುತ್ತಪ್ಪಗೋಳ, ಪುಂಡಲೀಕಪ್ಪ ಕೌಜಲಗಿ, ಶಿವಪ್ಪ ಹೋಳ್ಕರ,ಮಹಾಲಿಂಗಪ್ಪ ಬಾಯಪ್ಪಗೋಳ, ಬಾಳನಾಯಕ ನಾಯಕ ಮತ್ತು ಶಿವಲಿಂಗೇಶ್ವರ ಸೇವಾ ಮಂಡಳಿ ಸದಸ್ಯರು ಮತ್ತು ಹಿರಿಯರು ಇತರರಿದ್ದರು.   

ರೇಖಾ ಬಿರಾದಾರ ಮಂಗಲ ಹಾಡಿದರು,  ಶಿವಪುತ್ರ​‍್ಪ ತಬಲಾ ನುಡಿಸಿದರು. ಸೈದಾಪುರ ಹಾಲು ಉತ್ಪಾದಕರ ಸಂಘದ ನಿರ್ದೇಶಕ ರಾಮನಗೌಡ ಪಾಟೀಲ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. 


ಸುದ್ದಿ ಓದಿ