ಮಹಲಿಂಗಪುರ

ಮಾರುತಿ ಸಿನಿಪ್ಲೇಕ್ಸ್ನಲ್ಲಿ ಪುನೀತರಾಜಕುಮಾರ್ ಅವರ ಜನ್ಮದಿನಾಚರಣೆ

ಮಾರುತಿ ಸಿನಿಪ್ಲೇಕ್ಸ್ನಲ್ಲಿ ಪುನೀತರಾಜಕುಮಾರ್  ಅವರ ಜನ್ಮದಿನಾಚರಣೆ

ಮಹಾಲಿಂಗಪುರ: ಅತ್ಯಾಧುನೀಕ ಸೌಲಭ್ಯಗಳೊಂದಿಗೆ ನವೀಕರಣಗೊಂಡ ಪಟ್ಟಣದ ಮಾರುತಿ ಸಿನಿಪ್ಲೇಕ್ಸ್ ಚಿತ್ರಮಂದಿರದಲ್ಲಿ ಶುಕ್ರವಾರ ಪವರ್ಸ್ಟಾರ್ಪುನೀತರಾಜಕುಮಾರ್  ಅವರ ಜನ್ಮದಿನಾಚರಣೆ ಆಚರಿಸಲಾಯಿತು.

ಚಿತ್ರಮಂದಿರದ ಮಾಲೀಕರಾದ ಶ್ರೀಶೈಲ ಕೋಳಿಗುಡ್ಡ ಅವರು ಪುನೀತ್ ಭಾವಚಿತ್ರಯುಳ್ಳ 5ಕೆಜಿ ಬೃಹತ್ ಗಾತ್ರದ ಕೇಕ್ ಕತ್ತರಿಸಿ, ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜನ್ಮ ದಿನಾಚರಣೆ ಆಚರಿಸಿದರು.

 ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿನಿರಸಿಕರ ಅಭಿಲಾಷೆ ಮತ್ತು ನಮ್ಮ ತಂದೆಯವರ ಆಶೆಯಂತೆ ಹಳೆಯ ಚಿತ್ರಮಂದಿರವನ್ನು ಇಂದಿನ ಅತ್ಯಾಧುನೀಕ ಮಲ್ಟಿಪ್ಲೇಕ್ಸ್ ಮಾದರಿಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಹಣ ಖರ್ಚು  ಮಾಡಿ ಚಿತ್ರಮಂದಿರವನ್ನು ಸಂಪೂರ್ಣ ನವೀಕರಣಗೊಳಿಸಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತ್ಯಾಧುನೀಕ ಸೌಲಭ್ಯಯುಳ್ಳ ಮಾದರಿ ಸಿನಿಮಾ ಮಂದಿರ ಇದಾಗಿದ್ದು. ನವೀಕರಗೊಂಡ ನಂತರ ಮೊದಲ ಹೊಸಚಿತ್ರವಾಗಿ ಶುಕ್ರವಾರದಿಂದ ಉಪೇಂದ್ರ, ಸುದೀಪ್, ಶಿವಣ್ಣ ಅಭಿನಯದ ಕಬ್ಜ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಚಿತ್ರರಸಿಕರು, ಕಲಾಭಿಮಾನಿಗಳು ಕುಟುಂಬ ಸಮೇತ ಆಗಮಿಸಿ ಪ್ರೋತ್ಸಾಹಿಸಬೇಕೆಂದರು. 

ಚಿತ್ರಮಂದಿರ ಮಾಲೀಕರಾದ ಸುಮಿತ್ರಾ ಬಸಪ್ಪ ಕೋಳಿಗುಡ್ಡ, ಅಶ್ವೀನಿ ಶ್ರೀ.ಕೋಳಿಗುಡ್ಡ, ಶಿವಾನಂದ ಕೋಳಿಗುಡ್ಡ, ಪ್ರೀಯಾಂಕ ಶಿ. ಕೋಳಿಗುಡ್ಡ, ಗಣ್ಯರಾದ ರಾಜು ತಾಳಿಕೋಟಿ, ರಾಜು ಡಾಂಗೆ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಪುನೀತ್ ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಪ್ರತಾಪ್ ಗೌಡಪ್ಪಗೋಳ, ನಟರಾಜ ಸಬಕಾಳೆ, ಪತ್ರಕರ್ತ ಚಂದ್ರಶೇಖರ ಮೋರೆ, ಮ್ಯಾನೇಜರ್ ಶಿವಾನಂದ, ಯಲ್ಲಪ್ಪ ಪಾಟೀಲ, ರಾಜು ನಾವ್ಹಿ, ಶ್ರೀಶೈಲ ಪೂಜೇರಿ ಸೇರಿದಂತೆ ಹಲವರು ಇದ್ದರು.


ಸುದ್ದಿ ಓದಿ