ಬಳ್ಳಾರಿ

ಪಠ್ಯದಲ್ಲಿ ಕಲೆ ವಿಷಯ ಪ್ರಕಟಿಸಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಿ

ಪಠ್ಯದಲ್ಲಿ ಕಲೆ ವಿಷಯ ಪ್ರಕಟಿಸಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಿ

ನಾಟಕ, ಸಮೂಹ ನೃತ್ಯ ಕಾರ್ಯಕ್ರಮದಲ್ಲಿ ಸಾಹಿತಿ ಟಿ.ಹೆಚ್‌.ಎಮ್‌. ಬಸವರಾಜ ಸಲಹೆ  

ಬಳ್ಳಾರಿ 04: ಪಠ್ಯ ಪುಸ್ತಕಗಳಲ್ಲಿ ಕಲೆಯ ವಿಷಯವನ್ನು ಪ್ರಾರಂಭಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೂ ಕಲೆ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದು   ಮತ್ತು ಬಳ್ಳಾರಿ ಕಲಾವಿದರ ತವರು ಆಗಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಸುಸಜ್ಜಿತವಾದ ರಂಗಮಂದಿರಗಳನ್ನು ನಿರ್ಮಿಸಬೇಕು ಎಂದು ಟಿ .ಹೆಚ್‌.ಎಂ. ಬಸವರಾಜ ಸರ್ಕಾರಕ್ಕೆ ವಿನಂತಿಸಿದರು.  

ನಗರದ ಹೊಂಗಿರಣ ಸಭಾಂಗಣದಲ್ಲಿ ಆದಿಶಕ್ತಿ ಕಲಾ ಟ್ರಸ್ಟ್‌  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಡಿ ಹಮ್ಮಿಕೊಂಡ ನಾಟಕ ಮತ್ತು ಸಮೂಹ ನೃತ್ಯವನ್ನು ಚಿತ್ರಪಟದ ಮೇಲೆ ನಾಟಕ ಎಂದು ಬರೆಯುವುದರ ಮೂಲಕ ವಿನೂತನವಾಗಿ ಉದ್ಘಾಟಿಸಿ ಮಾತನಾಡಿದ ಅವರು,  ಕಲಾವಿದರು ಅನುಭವಿಸುವ ಕಷ್ಟಗಳು ಬಹಳಷ್ಟಿವೆ. ಆ ಕಷ್ಟಗಳನ್ನು ನಿವಾರಣೆ ಮಾಡಲು ಸರಕಾರ ಮುಂದಾಗಬೇಕು.  ಗಡಿನಾಡಿನ ಕನ್ನಡ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು.  

ಕಲಾವಿದರು ಪ್ರಾಕ್ಟೀಸ್ ಮಾಡಲು ನಗರದಲ್ಲಿ ಎಲ್ಲಾ ಅನುಕೂಲತೆಗಳಿರುವ ಕಟ್ಟಡಗಳನ್ನು ನಿರ್ಮಿಸಿ ಕೊಡಬೇಕೆಂದು ಮತ್ತು ಬೇರೆ ಊರುಗಳಿಂದ ಬರುವ ಕಲಾವಿದರಿಗೆ ಅತಿಥಿಗೃಹವನ್ನು ನಿರ್ಮಿಸಿಕೊಡಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.  

ಇದಕ್ಕೂ ಮೊದಲು ಪ್ರಾರ್ಥನೆ ಗೀತೆಗೆ ಬಳ್ಳಾರಿಯ ಖ್ಯಾತ ಚಿತ್ರ ಕಲಾವಿದರಾದ ಶರಣಬಸವ ಮಲ್ಲಪ್ಪ ಹೆಮ್ಮಡಿಗೆಯವರು ಚಿತ್ರಪಟದ ಮೇಲೆ ಹಾಡು ಮುಗಿಯುವುದರೊಳಗೆ ಸರಸ್ವತಿ ಚಿತ್ರವನ್ನು ಬಿಡಿಸಿ ಎಲ್ಲರ ಪ್ರೀತಿಗೆ ಪಾತ್ರರಾದರು. ಇಂಥ ಪ್ರತಿಭಾವಂತರಿಗೆ ಮುಂದೆ ವೇದಿಕೆಗಳಲ್ಲಿ ಅವಕಾಶ ಕೊಡಬೇಕೆಂದು ಸಂಸ್ಕೃತಿ ಇಲಾಖೆಗೆ ಕೇಳಿಕೊಂಡರು.  

ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಡಾ. ಸುರೇಶ್ ಕುಮಾರ್ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು ಮತ್ತು ಚಿತ್ರಕಲಾ ವಿಧಾನ ಕಲೆಯನ್ನು ನೋಡಿ ಆಶ್ಚರ್ಯವಾಯಿತು ಎಂದು ಹೇಳಿದರು.  

ರಂಗಭೂಮಿ ಕಲಾವಿದೆ ವರಲಕ್ಷ್ಮಿ ಅವರು ರಂಗಭೂಮಿಯ ಬಗ್ಗೆ ಮಾತನಾಡಿದರು. 

 ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್‌.ಕೆ. ಮಂಜುನಾಥ್ ಅವರು ಮಾತನಾಡಿ,  ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ. ನನ್ನ ಮಗಳು ಕಲಾವಿದೆ ನಮ್ಮಂತಹ ವೈದ್ಯರಿಗೆ ಬಿಡುವಿನ ಸಮಯದಲ್ಲಿ ಇಂತಹ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತವೆ. ಕಾರಣ ಬಳ್ಳಾರಿಯಲ್ಲಿ ಈ ರೀತಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.  

ಡಾ. ಆರ್ ಕೆ ಮಂಜುನಾಥ್, ಡಾ. ಸುರೇಶ್ ಕುಮಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.  ನಂತರ ಜಿ.ತಿ​‍​‍್ೇರುದ್ರ​‍್ಪ ತಂಡದವರಿಂದ ದುರ್ಯೋಧನನ ಗರ್ವಭಂಗ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.  

ನಾಟಕದಲ್ಲಿ ದುರ್ಯೋಧನ ಪಾತ್ರವನ್ನು ಎಚ್ ಎಂ ಅಮರೇಶ್ , ಶಕುನಿ ಪಾತ್ರವನ್ನು ಹಂದ್ಯಾಳ್ ಪರಶುರಾಮ್, ಅಶ್ವತ್ಥಾಮ ಪಾತ್ರವನ್ನು ಬಸವರಾಜ್ ಸ್ವಾಮಿ ಜವಲಗೆರೆ, ಗಂಧರ್ವ ಪಾತ್ರವನ್ನು ಕುಮಾರ್ ಗೌಡ, ಭಾನುಮತಿ ಮತ್ತು ದ್ರೌಪದಿ ಪಾತ್ರವನ್ನು  ವೀಣಾ ಆದ್ದವಾನಿ, ಮೇಕಪ್ ಮರಳಿ ಕೃಷ್ಣ ಚಳ್ಳಕೆರೆ, ಹೆಚ್ .ಶೇಖರ​‍್ಪ ಕೊಟ್ಟೂರ್ ಕ್ಯಾಸಿಯೋ,  ವಿರೂಪಾಕ್ಷಪ್ಪ ದೇವಲಾಪುರ ತಬಲಾ, ಹಿತಶ್ರೀ ತಂಡದಿಂದ ಸಮೂಹ ನೃತ್ಯ ನಡೆದು ಪ್ರೇಕ್ಷಕರನ್ನು ರಂಜಿಸಿದವು. ಬೆಳಕು ಸೋಮು ಜಿತೇಂದ್ರ, ಏ ಎಮ್ ಪಿ ವೀರೇಶಯ್ಯ ಸ್ವಾಮಿ ಪ್ರಾಸ್ತಾವಿಕ ನುಡಿದರು .ರಂಗ ನಿರ್ದೇಶಕ ಕೆ ಜಗದೀಶ್ ಸ್ವಾಗತಿಸಿ ವಂದಿಸಿದರು.  ಆದಿಶಕ್ತಿ ಕಲಾ ಟ್ರಸ್ಟ್‌ ನ ವೀರೇಶ್ ಆಚಾರ್ ಅತಿಥಿ ಗಣ್ಯರನ್ನು ಸನ್ಮಾನಿಸಿದರು 

 ಶಿಕ್ಷಕ ಕಂಪ್ಲಿ ಬಸವರಾಜರವರು ನಿರೂಪಿಸಿದರು. ವೇದಿಕೆ ಮೇಲೆ ಚಿತ್ರಕಲಾವಿದ ಶರಣಬಸವ ಮಲ್ಲಪ್ಪ ಎಮ್ಮಡಗಿ, ರಂಗಜಂಗಮ ಸಂಸ್ಥೆಯ ಅಣ್ಣಾಜಿ ಕೃಷ್ಣಾರೆಡ್ಡಿ, ಮಕಸಂ ಗಂಗಣ್ಣ, ಸೂರ್ಯ ಕಲಾ ಟ್ರಸ್ಟ್‌ ಅಭಿಷೇಕ್, ಗಂಗಾ ತುಂಗಾ ಟ್ರಸ್ಟ್‌ ಟಿ. ನಾಗಭೂಷಣ, ಮಾತೃ ಮಹಿಳಾ ಮಂಡಳಿ ಪುಷ್ಪಾ, ಸುಮಾರೆಡ್ಡಿ, ಚಿಲಾರ್ ಸಾಬ್, ಸಂದೇಶ್ ಮತ್ತು ಯೋಗೀಶ್ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ