ಸರಕಾರದ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ಅವಶ್ಯಕ
ಶಿಗ್ಗಾವಿ 17: ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಜಾರಿಗೆ ತರಲು ಕ್ಷೇತ್ರದ ಮಾಜಿ ಶಾಸಕರು ಪ್ರಯತ್ನ ಪಡುತ್ತಲೇ ಇದ್ದರೂ ಇದಕ್ಕೆ ವಿಶೇಷ ಅಧಿಕಾರಿಗಳನ್ನು ಕಳುಹಿಸಿದಾಗ ಪುರಸಭೆಯ ಸದಸ್ಯರು ಸಮರ್ಕ ಮಾಹಿತಿ ಕೊಡುವಂತೆ ವಿರೋಧಿಸಿ ಯೋಜನೆ ತಡೆ ಹಿಡಿದಿರುವ ಕುರಿತು ಮಾಧ್ಯಮಗಳು ವರದಿ ಮಾಡಿದ್ದು ತದನಂತರ ಶಾಸಕರ ಕೊನೆಯ ಸಭೆಯಲ್ಲಿ ಅಧಿಕಾರಿಗಳಿಗೆ ಜೋರು ಧ್ವನಿಯಲ್ಲಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದು ಸಹ ವರದಿಯಾಗಿತ್ತು.
ಕೋಟಿ ಕೋಟಿ ವೆಚ್ಚದ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ಇಲ್ಲ ಯೋಜನಾ ಮಾಹಿತಿ ಇರುವ ಫಲಕವಿಲ್ಲ ಪ್ರಮುಖವಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಳೆಗಾಲವಿದ್ದರೂ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದು ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದೆ ಲಕ್ಷಾಂತರ ಹಣ ಖರ್ಚು ಮಾಡಿಸಿರುವ ರಸ್ತೆಗಳು ಚರಂಡಿಗಳು ಹಾಳಾಗುತ್ತಿದ್ದು ಇದರಿಂದ ಸರಕಾರದ ಹಣ ದುಪ್ಪಟ್ಟು ನಷ್ಟವಾಗುತ್ತದೆ ನಾಗರಿಕರಿಗೂ ವಾಹನ ಸವಾರರಿಗೂ ತೊಂದರೆ ಆಗುತ್ತಿದ್ದು ಪುರಸಭೆಯ ಮುಖ್ಯ ಅಧಿಕಾರಿಗಳು ಗಮನ ಹರಿಸಬೇಕು ಗೊತ್ತಿದ್ದು ಕಾಮಗಾರಿ ಮಾಡಿದರೆ ತಗಲುವ ನಷ್ಟವನ್ನು ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರ ಭರಿಸಬೇಕಾಗುತ್ತದೆ ಮಳೆಗಾಲವಿದ್ದರೂ ಕಾಮಗಾರಿ ಮಾಡುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಜನರ ದುಡ್ಡನ್ನು ಈ ರೀತಿ ವ್ಯಯ ಮಾಡುವುದು ಸರಿಯಲ್ಲ ಜೊತೆಗೆ ಈಗಾಗಲೇ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಮರ್ಕ ಪೈಪ್ ಲೈನ್ಗಳಿದ್ದು ಹೊಸಪೈಪ ಅಳವಡಿಸುವ ಅವಶ್ಯಕತೆ ಆದರೂ ಏನಿದೆ ? ಎಲ್ಲಾ ಮಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಇರುವ ರಸ್ತೆ ಚರಂಡಿಗಳು ಹಾಳಾಗದಂತೆ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಪುರಸಭೆ ನಾಮ ನಿರ್ದೇಶಕ ಸದಸ್ಯ ಮಂಜುನಾಥ ಮನ್ನಣ್ಣವರ ಮತ್ತು ನಾಮ ನಿರ್ದೇಶಕ ಸದಸ್ಯ ಚಂದ್ರು ಕೊಡ್ಲಿವಾಡ ಮನವಿ ಮಾಡಿದ್ದಾರೆ.