ಪೂರ್ಣಗೊಂಡಿಲ್ಲದ ರಸ್ತೆ ಕಾಮಗಾರಿ ಕ್ರಮಕ್ಕೆ ಸಾರ್ವಜನಿಕ ಆಗ್ರಹ
ಮುದ್ದೇಬಿಹಾಳ 18: ಪಟ್ಟಣದ ಆಲಮಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸಂಗಮೇಶ್ವರ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿ ಎರಡು ತಿಂಗಳ ಹಿಂದೆ ನಡೆದಿದ್ದು ಇಲ್ಲಿವರೆಗೂ ಪೂರ್ಣಗೊಂಡಿಲ್ಲ ಕೇವಲ ಸಿಸಿ ರಸ್ತೆ ಕಾಮಗಾರಿ 200 ಮೀಟರ್ ಮಾತ್ರವಿದ್ದು ಕೆಲಸ ವಿಳಂಬವಾಗಿರುವುದಕ್ಕೆ ಕಾರಣ ಏನು ಎಂಬುದು ಸಂಗಮೇಶ್ವರ ನಗರದ ಜನಸಾಮಾನ್ಯರಿಗೆ ಗೊತ್ತಾಗುತ್ತಿಲ್ಲ ಸದಸ್ಯರಿಂದ ಕಾಮಗಾರಿಯ ವಿಳಂಬವು ಅಥವಾ ಗುತ್ತಿಗೆದಾರರ ವಿಳಂಬವು ಇಲ್ಲವೇ ಪುರಸಭೆ ಅಧಿಕಾರಿಗಳ ವಿಳಂಬವು ಗೊತ್ತಾಗುತ್ತಿಲ್ಲ ಕೂಡಲೇ ಅಧಿಕಾರಿಗಳು ರಸ್ತೆಯ ಪರಿಶೀಲನೆಗೆ ಮುಂದಾಗಬೇಕು. ಈ ರಸ್ತೆಯ ಮುಖಾಂತರ ಹಲವಾರು ದ್ವಿಚಕ್ರವಾಹನಗಳು ಓಡಾಡುತ್ತಿದ್ದಂತೆ ಜನಸಾಮಾನ್ಯರಿಗೆ ಮುಖ್ಯ ರಸ್ತೆಯಾಗಿದೆ, ಕೂಡಲೇ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.