ಸ್ಮಶಾನದ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಜವಳಗಿ
ಹಿಂದೂ ಸಂಘಟನೆಗಳಿಂದ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯ
ಮಹಾಲಿಂಗಪುರ 26: ಪಟ್ಟಣದ ಹಿಂದೂ ರೂದ್ರಭೂಮಿಯ ಸ್ವಚ್ಛತೆಗೆ ಪುರಸಭೆಯ ಜೊತೆಗೆ ಇಲ್ಲಿ ಅಂತ್ಯ ಸಂಸ್ಕಾರ ನಡೆಸುವ ಸಕಲ ಹಿಂದೂ ಸಮಾಜಗಳು ಮತ್ತು ಸಾರ್ವಜನಿಕರ ಸಹಕಾರ ಬಹಳ ಅಗತ್ಯವಿದೆ ಎಂದು ಪುರಸಭೆ ಸದಸ್ಯ ರವಿ ಜವಳಗಿ ಹೇಳಿದರು.
ನಿರಂತರ ಎರಡು ದಿನಗಳ ಕಾಲ ಶನಿವಾರ ಮತ್ತು ಭಾನುವಾರ ಹಿಂದೂ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಿಂದೂ ರುದ್ರಭೂಮಿಯು ಸುತ್ತಮುತ್ತಲಿನ ಸಾರ್ವಜನಿಕರು ಬಯಲು ಶೌಚಕ್ಕಾಗಿ ಬಳಸುತ್ತಿರುವದರಿಂದ ಇಲ್ಲಿ ಸ್ವಚ್ಛತೆಯು ಮರೀಚಿಕೆಯಾಗಿ, ಇಲ್ಲಿನ ಅಂತ್ಯಸಂಸ್ಕಾರಕ್ಕೆ ಬಂದವರು ಪುರಸಭೆ ಮತ್ತು ಪಟ್ಟಣದ ಹಿರಿಯರನ್ನು, ಜನಪ್ರತಿನಿಧಿಗಳು ಬೈದು ಹೋಗುವಂತಾಗಿದೆ. ಪುರಸಭೆಯ ಅಧಿಕಾರಿಗಳು ಅವ್ಯವಸ್ಥೆಯನ್ನು ನೋಡಿ, ಮತ್ತು ಸಿಬ್ಬಂದಿಯು ಸ್ವಚ್ಛತೆಯ ಕಾರ್ಯದಲ್ಲಿ ಭಾಗಿಯಾದರು. ಸ್ವಚ್ಛತೆಯ ಕಡೆಗೆ ಪುರಸಭೆಯ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಸಾರ್ವಜನಿಕರು ಸಹ ಸ್ಮಶಾನದಲ್ಲಿ ಬಯಲು ಶೌಚಕ್ಕೆ ಬರುವದನ್ನು ನಿಲ್ಲಿಸಿ ಸಹಕಾರ ನೀಡಿದಾಗ ಮಾತ್ರ ನಿರಂತರವಾಗಿ ಹಿಂದೂ ರುದ್ರಭೂಮಿಯ ಸ್ವಚ್ಛತೆ ಕಾಣಲಿದೆ ಎಂದರು.
ಮುಂಜಾನೆ 6 ರಿಂದ 9ಗಂಟೆಯವರೆಗೆ ಸಂಘಟನೆಗಳಿಂದ ಸ್ವಚ್ಛತೆ ಕಾರ್ಯ ನಡೆಯಿತು. ಹಿರಿಯ ಆರೋಗ್ಯ ನೀರೀಕ್ಷಕ ಎಂ.ಎಂ.ಮಗಳ ಖೆಡ ಸ್ಮಶಾನಕ್ಕೆ ಭೇಟಿ ನೀಡಿ ಪುರಸಭೆಯ ಸಿಬ್ಬಂದಿಯಿಂದ ಅಲ್ಲಿನ ಚರಂಡಿ ಸ್ವಚ್ಛತೆ ಮಾಡಿಸಿದರು. ಅಭಿ ಲಮಾಣಿ, ಶಿವಾನಂದ ಕಲಮಡಿ, ಹಣಮಂತ ನಾವಿ, ಆನಂದ ಬಂಡಿಗಣಿ, ರಾಘು ಪವಾರ, ದಾನೇಶ ಡೊಂಬರ, ಸಂತೋಷ ಹಜಾರೆ, ಚನ್ನು ಆರೇಗಾರ, ಬಸವರಾಜ ಮುರಾರಿ, ಶಿವಾನಂದ ಹುಣಶ್ಯಾಳ, ಜಿ.ಎಸ್.ಗೊಂಬಿ, ಚಂದ್ರಶೇಖರ ಮೋರೆ, ರಾಘು ಶಿರೋಳ, ವಿಶಾಲ ಪತ್ತಾರ, ಮಹಾಲಿಂಗ ಅವಟಗಿ, ಅನೀಲ ಖವಾಸಿ ರಾಘು ಗರಘಟಿಗಿ, ಅರ್ಜುನ ಪವಾರ್ ಮಂಜು ಭಾವಿಕಟ್ಟಿ, ಮಂಜು ಗೊಂಬಿ, ಶ್ರೀನಿಧಿ ಕುಲಕರ್ಣಿ ಸೇರಿದಂತೆ ಅನೇಕ ಕಾರ್ಯಕರ್ತರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.