ಮಹಲಿಂಗಪುರ

ಶುದ್ಧ, ತಂಪಾದ ನೀರು ಪೂರೈಸುತ್ತಿರುವುದು ಶ್ಲಾಘನೀಯ:ಹಿಟ್ಟಿಮಠ

ಶುದ್ಧ, ತಂಪಾದ ನೀರು ಪೂರೈಸುತ್ತಿರುವುದು ಶ್ಲಾಘನೀಯ:ಹಿಟ್ಟಿಮಠ

ಮಹಾಲಿಂಗಪುರ ; ಹಸಿದವನಿಗೆ ಅನ್ನ ಕೊಡುವುದು ಎಷ್ಟು ಶ್ರೇಷ್ಠವೋ ಅಷ್ಟೆ ಬಾಯಾರಿದವರಿಗೆ ನೀರು ಕೊಡುವುದೂ ಕೂಡಾ ಅಷ್ಟೆ ಶ್ರೇಷ್ಠ ಕಾರ್ಯವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯರ ಮಹಾಂತೇಶ ಹಿಟ್ಟಿಮಠ ಹೇಳಿದರು.  

ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರೀರಾಮ ಸೇನಾ ಸಂಘಟನೆ ಅಡಿ ಸಾರ್ವಜನಿಕ ಅರವಟಿಗೆ ಉದ್ಘಾಟಿಸಿ ಮಾತನಾಡಿದರು. ಬಿಸಿಲಿನ ಬೇಗೆಗೆ ಬಸವಳಿದ ಜನತೆಗೆ ಶ್ರೀರಾಮ ಸೇನಾ ಕಾರ್ಯಕರ್ತರು ಪಟ್ಟಣದ ಕೆಲವು ಕಡೆಗಳಲ್ಲಿ ಸಾರ್ವಜನಿಕರಿಗಾಗಿ ಅರವಟಿಗೆಗಳನ್ನು ಇಟ್ಟು ಶುದ್ಧ ಹಾಗೂ ತಂಪಾದ ನೀರು ಪೂರೈಸುತ್ತಿರುವುದು ಶ್ಲಾಘನೀಯ ಕಾರ್ಯ ಮತ್ತು ಇತರೆ ಸಂಘಟನೆಗಳಿಗೆ ಇದು ಮಾದರಿಯಾಗಲಿ ಎಂದರು. 

 ಈ ಸಂದರ್ಭದಲ್ಲಿ ಪಿ.ಎಸ್‌.ಐ ವಿಜಯ ಕಾಂಬಳೆ, ಪುರಸಭೆ ಸದಸ್ಯರಾದ ರಾಜು ಚಮಕೇರಿ, ಚನಬಸು ಯರಗಟ್ಟಿ, ಮುಖ್ಯಾಧಿಕಾರಿ ಎಚ್‌.ಎಸ್‌. ಚಿತ್ತರಗಿ, ಶಿವಾನಂದ ಅಂಗಡಿ, ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ನಾಗರಾಜ ಭಜಂತ್ರಿ, ಬಸವರಾಜ ಗಿರಿಸಾಗರ, ಧರ್ಮರಾಜ ಪೂಜಾರಿ, ಆನಂದ ನೂಲಿ, ಶ್ರೀನಿವಾಸ ಬಂಡಿವಡ್ಡರ, ಬಸವರಾಜ ಮೇದಾರ, ಪರಶುರಾಮ ಸಣ್ಣಕ್ಕಿ, ವಿನಾಯಕ ಲೋಹಾರ, ರಾಜು ಬಂಡಿವಡ್ಡರ, ಕಲ್ಮೇಶ ತೊಲಗಿ, ಬಸವರಾಜ ಭಜಂತ್ರಿ, ಮಹಾಂತೇಶ ಪಾತ್ರೋಟ್, ಸೈಯದ ಪೂಜಾರಿ, ಅರ್ಜುನ ಪವಾರ, ಚಂದ್ರು ಸೇರಿದಂತೆ ಹಲವರು ಇದ್ದರು.  


ಸುದ್ದಿ ಓದಿ