ಗ್ರಾಮಸ್ಥರಿಗೆ ಸಮರ್ಕ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ನೀಡಿ : ಡಾ. ಶೈಲೇಂದ್ರ ಬೆಲ್ದಾಳೆ ಶಾಸಕರು
ಬೀದರ್ 18 : ದಕ್ಷಿಣಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ಅವಶ್ಯಕತೆ ಅತ್ಯಗತ್ಯವಾಗಿದ್ದು, ಇವು ಪ್ರಾಥಮಿಕ ಚಿಕಿತ್ಸೆ ಹಾಗೂ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಮುಖ ಪಾತ್ರ ವಹಿಸುತ್ತವೆ ಹೀಗಾಗಿ ಜನಸಂಖ್ಯೆ ಹೆಚ್ಚಿರುವ ಗ್ರಾಮಕ್ಕೊಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಚಾಲನೆ ನೀಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಓರಾದ್ (ಎಸ್) ಗ್ರಾಮದಲ್ಲಿ ?65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಗ್ರಾಮಸ್ಥರಿಗೆ ಸಮರ್ಕ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ದೊರಕುವ ಉದ್ದೇಶದಿಂದ ಈ ಕೇಂದ್ರ ನಿರ್ಮಾಣವಾಗುತ್ತಿದ್ದು, ಇದು ಗ್ರಾಮಾಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ ಎಂದರು.ಕಾಮಗಾರಿಯನ್ನು ಶೀಘ್ರವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಅಧಿಕಾರಿಗಳು ನಿಯಮಿತವಾಗಿ ಕಾಮಗಾರಿಯ ಮೇಲ್ವಿಚಾರಣೆ ನಡೆಸಿ ಸಮಯಕ್ಕೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಓರಾದ್ ಎಸ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟ ರೆಡ್ಡಿ. ಮುಖಂಡರಾದ ರಾಜ ರೆಡ್ಡಿ ಶಾಬಾದ, ಸಂಗ್ರಾಮ ಶೆಟಕಾರ, ಸೂರ್ಯಕಾಂತ ಶೇಡಂ, ನರಸಿಂಹ ರೆಡ್ಡಿ, ಹೇಮಾ ತುಕ್ಕಾರೆಡ್ಡಿ,ನಾಗಶೆಟ್ಟಿ ಚಟನಳ್ಳಿ, ಜಗನಾಥ ಚಟನಳ್ಳಿ, ಪರಮೇಶ ರೆಡ್ಡಿ, ವೀರಶೆಟ್ಟಿ ಶೇಡಂ, ಸಂತೋಷ ಜಗದಾಳೆ, ಶಿವಕುಮಾರ ಶೇಡಂ, ಸಿದ್ದಾರೂಢ, ನಾಗಶೆಟ್ಟಿ ಸಜ್ಜನಶೆಟ್ಟಿ, ಸೂರ್ಯಕಾಂತ ಹೂಗಾರ, ಅಶೋಕ ಗುಪ್ತಾ, ಮಾರುತಿ ನಾಗನಕೇರಾ, ಶಿವರಾಜ, ನಯೀಮ ಸೌದಾಗರ, ಪ್ರಭು, ಸಾಬೀರಮಯ್ಯಾ, ಇಶಾಮಿಯ್ಯಾ, ಚಮನ ಸೌದಾಗರ ಮತ್ತಿತರರು ಉಪಸ್ಥಿತರಿದ್ದರು.ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ ಸಿದ್ದಾ