ಮುದ್ದೆಬಿಹಾಲ್

ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ

ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ
ಮುದ್ದೇಬಿಹಾಳ ಪಟ್ಟಣದ ಸರಕಾರಿ ಆಸ್ಪತ್ರೇಯ ಆವರಣದ ಎದುರಿಗೆ ವಿಕಲಚೇತನರು ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನ

ಮುದ್ದೇಬಿಹಾಳ 24: ತಾಲೂಕಿನಲ್ಲಿ ಸುಮಾರು ಅಂಗವಿಕಲರು ಇದ್ದು, ಇವರು ಸೌಲಭ್ಯದಿಂದ ವಂಚಿತರಾಗಿದ್ದಾರೆ, ನಿಯಮದ ಪ್ರಕಾರ ತಿಂಗಳ ನಾಲ್ಕನೇಯ ಮಂಗಳವಾರ ವಿಕಲಚೇತನರ ಅರ್ಹತಾ ಪತ್ರಯನ್ನು ನೀಡಲು ವೈದ್ಯರು ಬರಬೇಕು, ಆದರೆ ಇಲ್ಲಿನ ವೈದ್ಯರ ಹಾಗೂ ಜಿಲ್ಲೇಯ ಆರೋಗ್ಯ ಇಲಾಖೆಯ ನಿರ್ಲಕ್ಷ್ಯತನಕ್ಕೆ ಇಲ್ಲಿನ ವಿಕಲಚೇತನರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಸಿಗುತ್ತಿಲ್ಲಾ ಎಂದು ತಾಲೂಕಾ ವಿಕಲಚೇತನರ ಒಕ್ಕೂಟದ ಜಿಲ್ಲಾದ್ಯಕ್ಷರಾದ ಎಸ್ ಕೆ ಘಾಟಿ ಆರೋಪಿಸಿದರು. 

ಸರಕಾರಿ ಆಸ್ಪತ್ರೆಯ ಎದುರಿಗೆ ವಿಕಲಚೇತನ ವಿವಿಧ ಸೌಲಭ್ಯಕ್ಕಾಗಿ  ಆಗ್ರಹಿಸಿ ನಡೆದ ಹೋರಾಟದಲ್ಲಿ ಮಾತನಾಡಿದರು. ತಾಲೂಕಿನ ವಿವಿಧ ಗ್ರಾಮೀಣ ಬಾಗಗಳಿಂದ ವಿಕಲಚೇತನರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ, ಆದರೆ ಇಲ್ಲಿನ ವ್ಯವಸ್ಥೇಯನ್ನು ನೋಡಿದರೆ ನಮ್ಮ ತಾಲೂಕಿನಲ್ಲಿ ಅಧಿಕಾರಿಗಳು ಇದ್ದಾರೋ ? ಇಲ್ಲವೋ ? ಎಂದು ಅನುಮಾನಿಸುತ್ತದೆ, ವಿಕಲಚೇತನರು ತಮ್ಮ ಅರ್ಹತಾ ಪತ್ರವನ್ನು ಕೇಳಲು ಬಂದರೆ  ನಮ್ಮ ಸಮಸ್ಯೆಗಳನ್ನು ಯಾರು ? ಪರಿಹರಿಸಲು ಸಾದ್ಯವಾಗುತ್ತಿಲ್ಲಾ, ಇದರಿಂದಾಗಿ ನಮ್ಮ ತಾಲೂಕಿನ ವಿಕಲಚೇತನರಿಗೆ ತೊಂದರೆಯಾಗುತ್ತಿದೆ ಆದರಿಂದ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಉಗ್ರವಾದ ಪ್ರತಿಬಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಇದೇ ವೇಳೆ ದಲಿತ ದೌರ್ಜನ್ಯ ಸಮಿತಿಯ ಸದಸ್ಯ ಬಸವರಾಜ ಪೂಜಾರಿ ಮಾತನಾಡುತ್ತಾ  ಸಿದ್ದಾಪೂರ, ಜಿಲ್ಲೇಯ ವಿಕಲಚೇತನರ ಪಟ್ಟಿಯನ್ನು ನೋಡಿದರೆ ನಮ್ಮ ತಾಲೂಕಿನಲ್ಲಿ ಬಹಳಷ್ಟು ಕಡಿಮೆ ಇದೆ,  ಇನ್ನೂ ಗ್ರಾಮೀಣ ಬಾಗಗಳಲ್ಲಿನ ವಿಕಲಚೇತನರಿಗೆ ಸಿಗುವಂತಹ ಮೂಲಸೌಲಭ್ಯಗಳು ಸಿಗುತ್ತಿಲ್ಲಾ,  ಇಂದು ತಿಂಗಳ ಮಂಗಳವಾರ  ವೈದ್ಯರು ಬರುತ್ತಾರೆಂದು ಅನೇಕ ವಿಕಲಚೇತನರು ಇಂದು ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ, ಇಲ್ಲಿ ನೋಡಿದರೆ ಯಾವದೇ ಅಧಿಕಾರಿಗಳು ಬಂದಿರುವದಿಲ್ಲಾ , ಮತ್ತು ಹಿರಿಯ ಅಧಿಕಾರಿಗಳೊಡನೆ ದೂರವಾಣಿ ಮುಖಾಂತರ ಕರೆ ಮಾಡಿ ಸಮಸ್ಯೆಗಳನ್ನು ಕೇಳಿದರೆ ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ, ಆದರಿಂದ ವಿಕಲಚೇತನರ ಸಮಸ್ಯೆಗಳನ್ನು ಇನ್ನೊಂದು ವಾರದಲ್ಲಿ ಬಗೆ ಹರಿಸದಿದ್ದರೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು  ಹೇಳಿದರು. ಇದೇ ಸಂಧರ್ಭದಲ್ಲಿ ದಲಿತ ಮುಖಂಡ ಹರೀಶ ನಾಟಿಕಾರ, ದೇವರಾಜ ಹಂಗರಗಿ, ಶರಣು ಮಾದರ , ನಾಗೇಶ ಅಮರಾವತಿ, ಉಮೇಶ ಜತ್ತಿ, ಪಾವಾಡೇಪ್ಪ ಚಲವಾದಿ, ವೀರಯ್ಯಾ ಹೀರೆಮಠ, ಸಂತು ಮಡಿವಾಳರ, ಎ ಪಿ ಕೊಡಗನೂರಇನ್ನೀತರರು ಇದ್ದರು. 

ಸುದ್ದಿ ಓದಿ