ಮಹಲಿಂಗಪುರ

ಮಹಾಲಿಂಗಪುರ ನಿಲ್ದಾಣದಲ್ಲಿ ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಮಹಾಲಿಂಗಪುರ ನಿಲ್ದಾಣದಲ್ಲಿ ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ.


ಮಹಾಲಿಂಗಪುರ 18: ಬಸ್‌್‌ಗಳ ಕೊರತೆ ಹಾಗೂ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರದೆ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಗುರುವಾರ ಕೆಲ ಕಾಲ ನಿಲ್ದಾಣದಲ್ಲಿ ಬಸ್ಸುಗಳನ್ನು ತಡೆದು, ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿ, ಆಗುತ್ತಿರುವ ಲೋಪವನ್ನು ಶೀಘ್ರವಾಗಿ ಸರಿಪಡಿಸಲು ಸ್ಥಳೀಯ ನಿಯಂತ್ರಕರ ಮೂಲಕವಾಗಿ, ಜಿಲ್ಲಾ ಸಾರಿಗೆ ಮುಖ್ಯಾಧಿಕಾರಿಗಳಿಗೆ ಮನವಿ ಅರ​‍್ಿಸಿದರು. 

ಮಹಾಲಿಂಗಪುರ ದಿಂದ ಪ್ರತಿದಿನ ಬೆಳಗ್ಗೆ ಸಮಯ 6.30, 6.45 ,7.15ರ ಸರಿಯಾದ ಸಮಯಕ್ಕೆ ರಬಕವಿ- ಬನಹಟ್ಟಿ ಮಾರ್ಗವಾಗಿ ಜಮಖಂಡಿಗೆ ಹಾಗೂ 07.00ಗಂಟೆಗೆ ಗೋಕಾಕ್, ಜಮಖಂಡಿ, ವಿಜಯಪುರ ಬಸ್ಸುಗಳು ಸಂಚರಿಸಬೇಕು. ಇದರಿಂದ ಸರಿಯಾದ ವೇಳೆಗೆ ಶಾಲಾ-ಕಾಲೇಜುಗಳಿಗೆ ತಲುಪಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಈ ಮುಂಚೆ ಮನವಿ ಸಲ್ಲಿಸಲಾಗಿಯೂ ಇನ್ನುವರೆವಿಗೂ ನಮಗೆ ಆಗುತ್ತಿರುವ ತೊಂದರೆಯ ಕೂಗಿಗೆ ಸ್ಪಂದಿಸುತ್ತಿಲ್ಲ. ಇದೇ ರೀತಿ ನಿರ್ಲಕ್ಷ ಧೋರಣೆ ಮುಂದುವರೆದಿದ್ದಾದರೆ ವಿದ್ಯಾರ್ಥಿಗಳಿಂದ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದರು. 

ಇತ್ತೀಚಿನ ದಿನಗಳಲ್ಲಿ ಬಸ್ ಗಳು ಅರ್ಧಗಂಟೆಗೂ ಮಿಕ್ಕಿ ವಿಳಂಬವಾಗಿ ಬಸ್ ನಿಲ್ದಾಣಕ್ಕೆ ಬರುತ್ತಿರುವುದು ಮತ್ತು ಕೆಲವು ಸ್ಥಗಿತಗೊಂಡಿರುವುದರಿಂದಲೂ ತೊಂದರೆಯಾಗಿ, ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಸರಿಯಾದ ಸಮಯಕ್ಕೆ ಬಸ್ ಗಳನ್ನು ಓಡಿಸಿ ಮತ್ತು ಇರುವ ಕೊರತೆಯನ್ನೂ ನೀಗಿಸಿ, ಸುಮಾರು 280 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ನೂರಾರು ವಿದ್ಯಾರ್ಥಿಗಳು ಸಾಂಗ್ಲಿ, ಮಿರಜ್, ಜಮಖಂಡಿ, ವಿಜಯಪುರ ಕಡೆಗಳಿಗೆ ಹೋಗುವ ಬಸ್ಸುಗಳನ್ನು ತಡೆದು ಪ್ರತಿಭಟಿಸಿದರು.  

ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶೇಖರ ಅಂಗಡಿ, ಧುರೀಣ ಮಲ್ಲಪ್ಪ ಸಿಂಗಾಡಿ ಹಾಗೂ ರಕ್ಷಣಾ ವೇದಿಕೆಯ ಶಿವಾನಂದ ಮಾಲಬಸರಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಬೆಂಬಲಿಸಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಲ್ಲಿ ನಾವೂ ಸಹ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಆಕ್ರೋಶಿತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಪರವೂರಿಗೆ ಹೋಗಲು ಪರದಾಡುತ್ತಿದ್ದ ಪ್ರಯಾಣಿಕರ ಬಸ್ಸುಗಳಿಗೆ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಇದಕ್ಕೆ ತಪ್ಪಿದಲ್ಲಿ ವಿದ್ಯಾರ್ಥಿಗಳು ಜೊತೆಗೂಡಿ ಮಹಾಲಿಂಗಪುರ ಮಾರ್ಗವಾಗಿ ಚಲಿಸುವ ಎಲ್ಲ ಬಸ್ಸುಗಳನ್ನು ನಿಲ್ದಾಣದಲ್ಲಿಯೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಶೇಖರ್ ಅಂಗಡಿ ಸಾರಿಗೆ ಇಲಾಖೆಯನ್ನು ಎಚ್ಚರಿಸಿದರು.  

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಅರವಿಂದ ಮಾವರ್ಕರ್, ಹನುಮಂತ ಬಿರಾಜ, ಅರುಣ ಮುಕುಂದ, ಶಿವಲಿಂಗ ತಿಮ್ಮಾಪುರ, ಗುರುಕಿರಣ ಉಳ್ಳಾಗಡ್ಡಿ, ಸಂದೀಪ ಸೂರಗೊಂಡ, ಅಭಿಷೇಕ ಘೋರೆ​‍್ಡ, ಮಹಾಲಿಂಗ ಮೋದಿ, ಪ್ರಶಾಂತ ನ್ಯಾಮಗೌಡ, ಚೇತನ್ ಗೌಡರ, ಅಸ್ಲಂ, ಪವನ್ ಶಿರವಿ ವಿದ್ಯಾರ್ಥಿನಿಯರಾದ ವಾಸುದೇವಿ ಎಸ್‌.ಎಂ, ಕವಿತಾ ಪಾಲಭಾವಿ, ರೂಪಾ ದೇವರಮನಿ, ವೈಷ್ಣವಿ ದೇಶಪಾಂಡೆ, ಪೂಜಾ ಪೋಳ, ಸತ್ಯವ್ವ ಪಾಟೀಲ್, ವೈಷ್ಣವಿ ನುಚ್ಚಿ, ಪ್ರೇರಣಾ ಕುರಿ ಇನ್ನು ಮುಂತಾದವರಿದ್ದರು. 


ಸುದ್ದಿ ಓದಿ