ಮಹಲಿಂಗಪುರ

ಕೃಷಿ ಕಾಯ್ದೆಗಳ ರದ್ಧತಿಗಾಗಿ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನೆ

ಕೃಷಿ ಕಾಯ್ದೆಗಳ ರದ್ಧತಿಗಾಗಿ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನೆ

ಮಹಾಲಿಂಗಪುರ 25 : ಕೇಂದ್ರ ಸರ್ಕಾರ ಮಾಡಿರುವ ಮಾರಕ ಕೃಷಿ ಕಾಯ್ದೆಗಳ ರದ್ದತಿಗಾಗಿ ಸೋಮವಾರ ವಿವಿಧ ಸಂಘಟನೆಗಳೊಂದಿಗೆ ರಾಜ್ಯ ಸರ್ಕಾರದ ಮನವರಿಕೆಗಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ತಿಳಿಸಿದರು.  

ಶುಕ್ರವಾರ ಮುಂಜಾನೆ ಪಟ್ಟಣದ ದಲಾಲ ವರ್ತಕರ ಸಂಘದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಕೃಷಿ ಕಾಯ್ದೆ ಅನುಸಾರ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿಯ ಪ್ರಸ್ತುತ ಪ್ರತಿ ಶತ 80ರಷ್ಟು ಆರ್ಥಿಕತೆ ಕುಗ್ಗಿ ಹೋಗಿದೆ. 

 ಹೀಗೆಯೇ ಕ್ರಮೇಣ ಬೆಲ್ಲದ ವ್ಯಾಪಾರಾದಿಯಾಗಿ ಎಲ್ಲ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ಮುಂದುವರೆದದ್ದೆ ಆದರೆ ರಾಜ್ಯದ ಎಲ್ಲ ಮಾರುಕಟ್ಟೆಗಳು ದಿವಾಳಿ ಹಂತಕ್ಕೆ ತಲುಪಿ, ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಮತ್ತು ಕಾರಕೂನರು ಬೀದಿಪಾಲಾಗುತ್ತಾರೆ. ಆದ್ದರಿಂದ ಈ ಕಾನೂನುಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಜನತೆಗೆ ನೆರವಾಗಬೇಕು ಎಂದರು.  

ಅ.28ರಂದು ಸೋಮವಾರ ಕಿರಾಣಿ ವರ್ತಕರ ಸಂಘ, ಸ್ಟೇಷನರಿ, ರೈತ ಸಂಘ ಇನ್ನಿತರ ಸಂಘಟನೆಗಳು ಮಹಾಲಿಂಗಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಪುರಸಭೆ ಕಚೇರಿಗೆ ಆಗಮಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀಶೈಲ ನುಚ್ಚಿ ತಿಳಿಸಿದರು.  

ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಉಪಾಧ್ಯಕ್ಷ ಬಾಳು ಮಾಳವದೆ, ಕಾರ್ಯದರ್ಶಿ ಎಸ್ ಆಯ್‌.ನುಚ್ಚಿ, ಕಿರಾಣಿ ಸ್ಟೋರ್ಸ್‌ ಅಧ್ಯಕ್ಷ ಅಶೋಕ ಅಂಗಡಿ, ಜಿ ಜಿ.ಹುಬ್ಬಳ್ಳಿ,ಬಸವರಾಜ ಬಟಕುರ್ಕಿ, ಅಶೋಕ ಓಸ್ವಾಲ, ಚಂದ್ರು ಸಂಶಿ, ಚಂದ್ರಶೇಖರ್ ಗೊಂದಿ, ನಿಜಗುಣಿ ಷಣ್ಮುಖ ಮುಂತಾದವರಿದ್ದರು. 


ಸುದ್ದಿ ಓದಿ