ಮಹಲಿಂಗಪುರ

ಆದಿಬಣಜಿಗ ಸಮಾಜದಿಂದ ಪ್ರತಿಭಟನೆ.

ಆದಿಬಣಜಿಗ ಸಮಾಜದಿಂದ ಪ್ರತಿಭಟನೆ.

ಮಹಾಲಿಂಗಪುರ17:  ಬೆಳಗಾವಿ ಸುವರ್ಣಸೌಧದ ಎದುರು ಡಿ. 23ರಂದು ರಾಜ್ಯ ಆದಿಬಣಜಿಗ ಸಮುದಾಯವನ್ನು ಗೆಜೆಟ್ ನಲ್ಲಿ ಸೇರಿಸುವ ಕುರಿತು ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಯುವ ನಗರ ಘಟಕದ ಅಧ್ಯಕ್ಷ ಮಹೇಶ ಚಿಂಚಲಿ ತಿಳಿಸಿದ್ದಾರೆ.  

ಈ ಪ್ರತಿಭಟನೆಗೆ ತಾಲೂಕಿನಲ್ಲಿರುವ ಆದಿ ಬಣಜಿಗ ಸಮಾಜದ ಬಂಧುಗಳು ಪ್ರತಿ ಮನೆಯ ಸದಸ್ಯರು ಬೆಳಗಾವಿ ಸುವರ್ಣಸೌಧಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. 

ಪ್ರತಿಭಟನೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತವು ಈಗಾಗಲೇ ಅವಕಾಶ ನೀಡಿದ್ದು, ಸುವರ್ಣಸೌಧದ ಎದುರು ಪೆಂಡಾಲ್ ನಂ. 6ರಲ್ಲಿ ಪ್ರತಿಭಟನೆಗೆ ಆಡಳಿತ ಅವಕಾಶ ನೀಡಿದೆ.  

ಬರುವ ಗುರುವಾರ ಬೆಳಿಗ್ಗೆ 9 ಕ್ಕೆಆದಿಬಣಜಿಗ ಸಮಾಜವನ್ನು ಗೆಜೆಟ್ ನಲ್ಲಿ ಸೇರಿಸಲು ಮನವಿ ಕೊಡಲು ನಮ್ಮ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ತಾಲ್ಲೂಕುಗಳಿಂದ ಆದಿಬಣಜಿಗ ಸಮಾಜ ಬಾಂಧವರು ಪ್ರತಿಭಟನೆಗೆ ಆಗಮಿಸುತ್ತಿದ್ದು, ನಮ್ಮ ತಾಲೂಕಿನಿಂದಲೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಕರೆ ನೀಡಿದ್ದಾರೆ.  

ಶತಮಾನಗಳಿಂದ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾದ ಸಮಾಜವನ್ನು ಮುಖ್ಯವಾಹಿನಿಗೆ ತರಲು ಮತ್ತು ಸಮಾಜದ ಪ್ರತಿಯೊಬ್ಬರಿಗೆ ಸರ್ಕಾರ ವಿಶೇಷ ಸವಲತ್ತು , ಶೈಕ್ಷಣಿಕ ,ಸಾಮಾಜಿಕ, ಆರ್ಥಿಕ ಸವಲತ್ತು, ಮೀಸಲಾತಿ ಸೌಲಭ್ಯ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುವ ಸಮಾಜ ಬಾಂಧವರು ಕೊರೋನಾ ಲಸಿಕೆ ಹಾಕಿಸಿಕೊಂಡ ಕುರಿತು ದೃಢೀಕರಣ ಪ್ರಮಾಣ ಪತ್ರ ತರುವಂತೆ ತಿಳಿಸಿದ್ದಾರೆ. 


ಸುದ್ದಿ ಓದಿ