ರೈತರ ಭೂಮಿ ಹಿಂದಿರುಗಿಸುವಂತೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ
ಹಗರಿಬೊಮ್ಮನಹಳ್ಳಿ 19: ತಾಲೂಕಿನ ವರದಾಪುರ ಗ್ರಾಮದಲ್ಲಿ ಉಕ್ಮಿಣಿ ರಾಮ ಕಾರ್ಖಾನೆ ಮಾಲೀಕರು ವರದಾಪುರ ಹಾಗೂ ಮರಬ್ಬಿಹಾಳು ಕಂದಾಯ ಗ್ರಾಮದ ರೈತರ ಕೃಷಿ ಭೂಮಿಯನ್ನು ಕಾರ್ಖಾನೆ ಉದ್ದೇಶಕ್ಕಾಗಿ ಖರೀದಿಸಿದ್ದು ಈಗಾಗಲೇ 15ವರ್ಷ ಕಳೆದಿವೆ, ನೀಡಿದ ಭರವಸೆಯಂತೆ ಮೂಲಭೂತ ಸೌಲಭ್ಯವು, ಕುಟುಂಬಕ್ಕೊಂದು ನೌಕರಿಯು ಇಲ್ಲವಾಗಿದ್ದು ಕೃಷಿಕರ ಭೂಮಿಯನ್ನು ಹಿಂದಿರುಗಿಸುವಂತೆ ಅನಿರ್ದಿಷ್ಠಾವಧಿ ಧರಣಿ ಎರಡನೇ ದಿನ ಮುಂದುವರೆಯಿತು.
ಧರಣಿ ನಿರತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ ಉಕ್ಮಿಣಿ ರಾಮ ಕಾರ್ಖಾನೆ ಮಾಲೀಕರು ಕೃಷಿಕರ ಭೂಮಿಯನ್ನು ಖರೀದಿ ಮಾಡಿದ್ದು ಕಾರ್ಖಾನೆ ಸ್ಥಾಪಿಸಲು ಹಾಗೂ ಭೂಮಿ ನೀಡುವ ಕುಟುಂಬಗಳಿಗೆ ಆಸರೆಯಾಗಿಸುವಂತೆ ಕುಟುಂಬದ ಸದಸ್ಯರೋರ್ವರಿಗೆ ಕಾರ್ಖಾನೆಯಲ್ಲಿ ನೌಕರಿ ನೀಡುವ ಭರವಸೆಯನ್ನು ಹುಸಿಗೊಳಿಸಿದ್ದಲ್ಲದೇ ಜಮೀನನ್ನು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ನೊಂದಣಿ ಮಾಡಿಸಿದ್ದಾರೆ ಇದರ ಜೊತೆ ರೈತರ ಬೆನ್ನಿಗೆ ಚೂರಿಹಾಕಲು ಭೂಮಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಮೂಂದಾಗಿರುವುದು ನಿಜಕ್ಕೂ ರೈತರನ್ನು ಮೋಸಗೊಳಿಸಿದಂತಾಗುತ್ತದೆ ಹಾಗಾಗಿ ಖರೀದಿಸಿದ ರೈತರ ಭೂಮಿಯನ್ನು ಹಿಂದಿರುಗಿಸಬೇಕು ಅಲ್ಲಿಯವರೆಗೆ ಈ ಅನಿರ್ಧಿಷ್ಠಾವಧಿ ಧರಣಿ ಮುಂದುವರೆಯಲಿದೆ , ಇಡೀ ಕರ್ನಾಟಕದಲ್ಲಿ ಕೆಡಿಇಬಿ ಮತ್ತು ಖಾಸಗಿಯಿಂದ ಪಡೆದ ಭೂಮಿಗಳಿರಬಹುದು ಅವು ಕಾರ್ಖಾನೆ ಮಾಡುವುದಾಗಿ 50ಸಾವಿರ ಎಕರೆ ಭೂಮಿ ರೈತರಿಂದ ದೋಚಿದ ಪ್ರಕರಣಗಳು ಇವೆ, ಖರೀದಿ ಮಾಡಿದ ಉದ್ದೇಶ ಈಡೇರದಿರುವುದು ಫ್ರಥಮವಾಗಿ ಜಿಲ್ಲಾಡಳಿತ ಅರಿತು ರೈತರ ಭೂಮಿಯನ್ನು ಉಳಿಸಬೇಕು, ಕೃಷಿಯೇತರರು ಭೂಮಿಯನ್ನು ಖರೀದಿ ಮಾಡುವಂತೆ ಮಾಡಲಾಗಿದೆ ಇದಕ್ಕೆ ರಾಜ್ಯ ರೈತ ಸಂಘ ಖಂಡಿಸುತ್ತದೆ ಕೂಡಲೇ ಇದನ್ನು ಪರಿಹರಿಸುವಂತೆ ಕಿಡಿಕಾರಿದರು.
ಸಾಮಾಜಿಕ ಹೋರಾಟಗಾರ ರವಿ ಮಾತನಾಡಿ ರುಕ್ಮಿಣಿ ರಾಮ ಖರೀದಿ ಮಾಡಿದ ಜಮೀನಿನಲ್ಲಿ ಅಲ್ಪ ಪ್ರಮಾಣದಲ್ಲಿ ಕಾರ್ಖಾನೆ ಮಾಡಿ ಉಳಿದ ಜಮೀನನ್ನು ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ, ಕೂಡಲೇ ಇದಕ್ಕೆ ಸಂಭಂಧಸಿದ ಇಲಾಖೆಯವರು ನಡೆಯುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದರು.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಗೋಣಿಬಸಪ್ಪ ಮಾತನಾಡಿ ಮೂವತ್ತು ಕುಟುಂಬಗಳ ಐವತ್ತು ಎಕರೆ ಜಮೀನನ್ನು 12 ವರ್ಷಗಳ ಹಿಂದೆ ರುಕ್ಮಿಣಿ ರಾಮ ಕಂಪನಿ ಖರೀದಿ ಮಾಡಿದ್ದಾರೆ ಹಾಗೂ ಗ್ರಾಮಗಳ ಮೂಲಭೂತ ಸೌಲಭ್ಯ ಮತ್ತು ಮಕ್ಕಳ ಶೈಕ್ಷಣಿಕ ಭವಿಷ್ಯದ ಆಸೆಯನ್ನು ಮುಂದಿಟ್ಟು ಇಂದು ಆ ಭೂಮಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡುತ್ತಿದ್ದಾರೆ, ಫ್ರಥಮವಾಗಿ ನಾಮ ಫಲಕ ಹಾಕಲಾಗಿದೆ ಎರಡನೆಯದಾಗಿ ಪಾದಯಾತ್ರೆ ಮಾಡಿ ಮನವಿ ನೀಡಿದ್ದೆವು ಆದರೂ ಜಗ್ಗದೇ ಇರುವುದರಿಂದ ಇಂದು ಧರಣಿ ನಿರತರಾಗಿದ್ದೆವೆ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರ ಭೂಮಿಯನ್ನು ಹಿಂದುರಿಗಿಸಬೇಕು ಕಾರ್ಖಾನೆ ಮಾಡುವುದಾಗಿ ಭರವಸೆ ನೀಡಿದವರು ಇಂದು ವಚನಭ್ರಷ್ಟರಾಗಿದ್ದಾರೆ ಗ್ರಾಮಸ್ಥರಲ್ಲಿ ಕ್ಷಮೆ ಕೇಳುವುದರ ಜೊತೆ ಖರೀದಿ ಮಾಡಿದ ಕುಟುಂಬಗಳ ಸದಸ್ಯರೊಬ್ಬರಿಗೆ ಪ್ರತಿ ಮಾಹೆ 40ಸಾವಿರ ವೇತನದಂತೆ ಇಲ್ಲಿಯವರೆಗೆ ವೇತನ ಪಾವತಿ ಮಾಡುಬೇಕು ಖಾರ್ಖಾನೆ ಸ್ಥಾಪನೆ ಮಾಡುಬೇಕು ಇಲ್ಲವಾದರೆ ಪ್ರಾಣ ಬಿಟ್ಟರೂ ಭೂಮಿ ಬಿಡೆವು ಎಂದು ಘೋಷವಾಕ್ಯ ಕೂಗಿದರು.
ಈ ಸಂಧರ್ಭದಲ್ಲಿ ಕಮಿಟಿಯ ಗೌರವಾಧ್ಯಕ್ಷ ಕೋಲ್ಕರ್ ಹನುಮಂತಪ್ಪ, ಹನ್ಸಿ ದೇವರಾಜ್, ನೀಲಕಂಠಪ್ಪ, ಎಂ.ನಾಗೇಂದ್ರ, ಎಸ್.ಹುಲುಗಪ್ಪ, ನಾಗಭೂಷಣ, ರಾಮಪ್ಪ, ಇಬ್ರಾಹಿಂ, ಹೆಚ್.ಹನುಮಂತಪ್ಪ, ಅಂಜಿನಪ್ಪ, ಬರಮಪ್ಪ, ಟಿ.ಶೋಭ, ಶಿವಮ್ಮ, ಭಾಗ್ಯಲಕ್ಷ್ಮೀ,ಲಕ್ಷ್ಮೀದೇವಿ, ಸುನೀತಾ, ಶಾರದ, ಶಾಂತಮ್ಮ ಸೇರಿದಂತೆ ಇನ್ನು ಮುಮತಾದ ರೈತ ಮುಖಂಡರು ಧರಣೀಯಲ್ಲಿ ಭಾಗವಹಿಸಿದ್ದರು.