ಬಳ್ಳಾರಿ

ಸಿರುಗುಪ್ಪ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಪ್ರತಿಭಟನೆ

ಸಿರುಗುಪ್ಪ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ 15: ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿ ವತಿಯಿಂದ ಬಳ್ಳಾರಿ- ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಇಂದು ಕೋಳೂರು ಕ್ರಾಸ್ ಬಳಿ ಪ್ರತಿಭಟನೆ ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.  

ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತರಾದ ಚೇತನ್ ಅವರು ಜನವರಿ 15 ರ ಒಳಗೆ ರಸ್ತೆಯ ಎಲ್ಲಾ ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿದರು.  

ನಂತರ ಎಸ್‌ಯುಸಿಐ ಗ್ರಾಮೀಣ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎ.ದೇವದಾಸ್ ಅವರು ಮಾತನಾಡುತ್ತಾ, ಬಳ್ಳಾರಿ ನಗರದಿಂದ ಸಿರುಗುಪ್ಪ ನಗರಕ್ಕೆ ಮಾರ್ಗ ಕಲ್ಪಿಸುವ ರಾಷ್ಟ್ರೀಯ  ಹೆದ್ದಾರಿ  150/ಎ ರಸ್ತೆಯು ಹೆಜ್ಜೆ ಹೆಜ್ಜೆಗೆ ಕುಣಿಗಳಿಂದ ತುಂಬಿ ಹೋಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.  ಈ ಮಾರ್ಗದಲ್ಲಿ ಬರುವ ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ಸೋಮಸಮುದ್ರ, ಕೋಳೂರು ಕ್ರಾಸ್, ಸಿಂದಿಗೇರಿ ಮತ್ತು ಬೈಲೂರು  ಗ್ರಾಮಗಳ ಜನತೆ ದಿನಂಪ್ರತಿ ಈ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ಗಮನಿಸುತ್ತಾ ಭಯಭೀತರಾಗಿದ್ದಾರೆ ಈ ರಸ್ತೆಯು ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದೆ.  ಸಂಜೆ 7 ಗಂಟೆ ನಂತರ ಬಾರಿ ಗಾತ್ರದ ಲಾರಿ ಮತ್ತು ಇತರೆ ವಾಹನಗಳು ಪ್ರಕಾಶಮಾನವಾದ ಲೈಟುಗಳನ್ನು ಹಾಕಿಕೊಂಡು ಸಂಚರಿಸುವಾಗ, ಎದುರುಗಡೆ ಬರುವ ದ್ವಿಚಕ್ರ ವಾಹನಗಳ ಸವಾರರಿಗೆ ದಾರಿ ಕಾಣದೆ ಕುಣಿಗಳಲ್ಲಿ  ಬಿದ್ದು ಅಸಂಖ್ಯಾತ ಅಪಘಾತಗಳು ಆಗುತ್ತಲೇ ಇವೆ.  ಅನೇಕ ಮುಗ್ಧ ಜನತೆ ಸುರಕ್ಷತೆ ರಹಿತ ರಸ್ತೆಯಲ್ಲಿ ಅಪಘಾತಗಳಿಗೆ ಬಲಿಯಾಗಿದ್ದಾರೆ. ಎಲ್ಲವನ್ನು ಸಹ ಪ್ರತಿನಿತ್ಯ ಗಮನಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವಾಗಲಿ,  ಸರ್ಕಾರವಾಗಲಿ ಇದುವರೆಗೂ ರಸ್ತೆಯನ್ನು ದುರಸ್ತಿಗೊಳಿಸಿದಿರುವುದು ಖಂಡನಾರ್ಹವಾಗಿದೆ. ಈ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಸ್ತೆಯನ್ನು ಆದಷ್ಟು ಬೇಗ ದೋಸ್ತಿಗೊಂಡಿರುವುದನ್ನು ಕ್ರಮ ತೆಗೆದುಕೊಳ್ಳಬೇಕು. ನಂತರ ತ್ವರಿತವಾಗಿ ಈ ರಸ್ತೆಯನ್ನು ನಿರ್ಮಿಸಲು ಈಗ ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತು ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಸುತ್ತಮುತ್ತ ಗ್ರಾಮಗಳ ಜನತೆ ದೊಡ್ಡಮಟ್ಟದ ಹೋರಾಟಕ್ಕೆ ಸಿದ್ಧರಾಗುತ್ತಾರೆ ಎಂದು ಎಚ್ಚರಿಸಿದರು.  

ಪ್ರತಿಭಟನೆಯಲ್ಲಿ ಕೋಳೂರು ಪಂಪಾಪತಿ ಮತ್ತು ಗುರಳ್ಳಿ ರಾಜ  ಜಗದೀಶ್ ನೆಮಕಲ್ಲು, ಸದಸ್ಯರಾದ ಈ ಹನುಮಂತಪ್ಪ, ಬಸಣ್ಣ, ನಿಂಗರಾಜ್, ಪಿ ಬಸವರಾಜ್ ದಮ್ಮುರು, ಸದಾನಂದ, ನಡವಳ ಈರಣ್ಣ ಮುಖಂಡರು ಇತರರು ಆಗಮಿಸಿದ್ದರು. 


ಸುದ್ದಿ ಓದಿ