ಇಸ್ಲಾಂ ಧರ್ಮ ಗುರು ಮುಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ: ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ
ಮಹಾಲಿಂಗಪುರ 31: ವಿಶ್ವಕ್ಕೆ ಶಾಂತಿದೂತರಾಗಿ ಬಂದ ಹಜರತ ಮುಹಮ್ಮದ್ ಪೈಗಂಬರ್(ಸ) ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕಾರ್ಯವನ್ನು ಸ್ವಾಮಿಜಿ ಮಾಡಿದ್ದು ದೇಶದ ಶಾಂತಿ ಕದಡುವ ಹುನ್ನಾರವಾಗಿದೆ ಇಂತಹವರನ್ನು ಬಂಧಿಸಿ ನ್ಯಾಯದ ಅಂಗಕ್ಕೆ ಬೆಲೆ ನೀಡಬೇಕೆಂದು ಮೌ.ಮಾಹಿರುಲ್ ಖಾದ್ರಿ ಹೇಳಿದರು.
ಶನಿವಾರ ಮುಂಜಾನೆ ಪಟ್ಟಣದ ಅಂಜುಮನ್ ಕಮಿಟಿ ವತಿಯಿಂದ ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಶಾಂಪಾಂಚಲೆ ಗ್ರಾಮದಲ್ಲಿ ರಾಮಗಿರಿ ಮಹಾರಾಜ ಇಸ್ಲಾಂ ಧರ್ಮ ಗುರುಗಳಾದ ಹಜರತ್ ಮುಹಮ್ಮದ್ ಪೈಗಂಬರ್ ಅವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಮುಸಲ್ಮಾನ್ ಬಾಂಧವರು ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಮುದಾಯ ಎಲ್ಲವನ್ನೂ ಸಹಿಸುತ್ತದೆ ಆದರೆ ಪೈಗಂಬರ್ ಸಾಹೇಬ್ ರಿಗೆ ಆಗುವ ಅವಹೇಳನ ಮಾತ್ರ ಸಹಿಸುವುದಿಲ್ಲ.ಇದಕ್ಕೆ ಸಮುದಾಯ ಎಂತಹುದೇ ತ್ಯಾಗಕ್ಕೂ ಸಿದ್ಧವಿದೆ. ತಪ್ಪಿತಸ್ಥ ಆರೋಪಿಯನ್ನು ತಕ್ಷಣ ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಖಾರಿ.ಅಸ್ಲಂ ಹಾಗೂ ಸಯ್ಯದ್ ನದಾಫ ಮಾತನಾಡಿ ಸಾವಿರಾರು ಜಾತಿ, ಜನಾಂಗಗಳ ಅಡಿಯಲ್ಲಿರುವ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿ. ಈ ವ್ಯವಸ್ಥೆಯನ್ನೇ ಬುಡುಮೇಲು ಮಾಡಲು ದೇಶದಲ್ಲಿರುವ ವಿಚ್ಛಿದ್ರಕಾರಿ ಶಕ್ತಿಗಳು ಹವನಿಸುತ್ತಿವೆ.ಇಂತಹುಗಳಿಗೆ ಆಸ್ಪದ ನೀಡದೆ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿರುವುದು ಅವಶ್ಯವಾಗಿದೆ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಮುಂಜಾನೆ ಸೇರಿದ ಮುಸ್ಲಿಂ ಬಾಂಧವರು, ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಪುರಸಭೆ ಆವರಣಕ್ಕೆ ಆಗಮಿಸಿ ಪುರಸಭೆ ವ್ಯವಸ್ಥಾಪಕರಾದ ಎಸ್ ಎನ್. ಪಾಟೀಲ ಮೂಲಕ ಘಣವೆತ್ತ ರಾಷ್ಟ್ರಪತಿಗಳಿಗೆ ತಲುಪುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಅಂಜುಮನ್ ಕಮಿಟಿ ಅಧ್ಯಕ್ಷ ಸಜನಸಾಬ ಪೆಂಡಾರಿ, ಮುಸ್ತಾಕ್ ಚಿಕ್ಕೋಡಿ, ನಬಿ ಯಕ್ಸಂಬಿ, ಜಮೀರ ಯಕ್ಸಂಬಿ, ನದಾವಲಸಾಬ ನಗಾರ್ಚಿ, ಅಬ್ದುಲಗಫೂರ ಆಲಗೂರ, ನಜೀರ್ ಝಾರೆ, ಮೇಹಬೂಬ ನಾಗನೂರ, ಫಾರೂಕ್ ಪಕಾಲಿ, ಸಿರಾಜ್ ಪೆಂಡಾರಿ, ಗನಿ ನನದಿ, ಬಂದೆನವಾಜ ಸಿಂದಗಿ, ಯಾಸೀನ್ ಮಾಲದಾರ, ಶಿಕಂದರ ಮೋಪಗಾರ, ಮೋದಿನ್ ತಟಗಾರ, ರಾಜು ಐನಾಪೂರ, ಮುಬಾರಕ್ ಅಲ್ಲಾಖಾನ, ಯಾಸೀನ್ ಬಳಗಾರ, ಹಾಪೀಜ್ ಆಬೀದ್, ಯುನೂಸ್ ಬೀಳಗಿ, ಲಾಲಸಾಬ ಪಠಾಣ, ಕಮಾಲ್ ತರಕಾರ ಇನ್ನೂ ಅನೇಕರಿದ್ದರು.