ಮಹಲಿಂಗಪುರ

ದಿಢೀರ್ ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ

ದಿಢೀರ್ ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ

 ! ಅವೈಜ್ಞಾನಿಕ ಕ್ರಮ ಹಿಂದೆ ಪಡೆಯದಿದ್ದರೆ ಉಗ್ರ ಹೋರಾಟ. 

ಮಹಾಲಿಂಗಪುರ 14 : ಪ್ರಸಕ್ತ ತಿಂಗಳಲ್ಲಿ ದೀಡೀರ್ ಎರಡು ಪಟ್ಟು ವಿಧ್ಯುತ್ ಬಿಲ್ಲ್‌ ಹೆಚ್ಚಳ ಕುರಿತು ಸ್ಥಳೀಯ ನಾಗರಿಕ ಹಿತರಕ್ಷಣಾ ಸಮಿತಿ ಬುಧವಾರ ಮುಂಜಾನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿತು.  

 ವಿವಿಧ ವಾರ್ಡಗಳಿಂದ ಮಹಿಳೆಯರನ್ನೊಳಗೊಂಡು ಆಗಮಿಸಿದ ಜನತೆಯೊಂದಿಗೆ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಹಲಗೆ ವಾದನದೊಂದಿಗೆ ಜೋಡು ರಸ್ತೆ, ನಡುಚೌಕಿ, ಜವಳಿ ಬಾಜಾರ ಮತ್ತು ಗಾಂಧಿ ಸರ್ಕಲ್ ಮಾರ್ಗವಾಗಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿತು.  

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ, ಕಳೆದ ಭಾಜಪ ಸರ್ಕಾರ ತಂದಿರುವ ನೂರಾರು ಅಭಿವೃದ್ಧಿ ಯೋಜನೆಗಳನ್ನು ಯಾವುದೋ ನೆಪ ಮಾಡಿಕೊಂಡು ಪ್ರಸ್ತುತ ಸರ್ಕಾರ ಸ್ತಗಿತಗೊಳಿಸಿದೆ. ಇದೆ ರೀತಿಯಾಗಿ ಈ ವಿಧ್ಯುತ್ ಬಿಲ್ಲ್‌ ಹೆಚ್ಚಳ ಯೋಜನೆಯನ್ನು ಕೂಡ ತಡೆ ಹಿಡಿದು ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಬೇಕೆಂದು ರಾಜ್ಯ ಸರ್ಕಾರವನ್ನು ತೀವ್ರತರವಾಗಿ ಒತ್ತಾಯಿಸಿದರಲ್ಲದೆ ಬರುವ ದಿನಗಳಲ್ಲಿ ವಿಧ್ಯುತ್ ಹೊರೆ ತಪ್ಪಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಡಳಿತವನ್ನು ಎಚ್ಚರಿಸಿದರು. 

ಹಸಿರು ಸೇನೆ ರೈತ ಸಂಘ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ನಿರಂತರವಾಗಿ ಇದೇ ರೀತಿ ವಿದ್ಯುತ್ ಬಿಲ್ ಹೆಚ್ಚಳ ಕಾಣುತ್ತಾ ಹೋದರೆ ರೈತ, ಕೂಲಿ ಕಾರ್ಮಿಕ, ನೇಕಾರರಲ್ಲದೆ ಮಧ್ಯಮ ಮತ್ತು ಬಡ ಜನತೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಈ ಯೋಜನೆಯಲ್ಲಿ ಆಗಿರುವ ಅವೈಜ್ಞಾನಿಕ ಕ್ರಮಗಳನ್ನು ತೆಗೆಯಲು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿ ಮುಂದಿನ ದಿನಗಳಲ್ಲಿ ದುಪ್ಪಟ್ಟು ಏರುತ್ತಿರುವ ವಿದ್ಯುತ್ ಬಿಲ್ ತಡೆಯುವಲ್ಲಿ ಸರ್ಕಾರವೇನಾದರೂ ವಿಫಲವಾದಲ್ಲಿ ಒಗ್ಗಟ್ಟಿನಿಂದ ನಮ್ಮ ಹಕ್ಕು ನಮ್ಮ ನ್ಯಾಯಕ್ಕಾಗಿ ಹೋರಾಡೋಣವೆಂದು ಪಟ್ಟಣದ ಸಾರ್ವಜನಿಕರಿಗೆ ಈ ಮೂಲಕ ಕರೆ ನೀಡಿದರು.  

ಪಟ್ಟಣದ ಹಿರಿಯ ನಾಗರಿಕ ಎಸ್ ಡಿ. ತಿಪ್ಪಾ ಮಾತನಾಡಿ ಸರ್ಕಾರಗಳು ಜನತೆಗೆ ಅವಶ್ಯಕತೆ ಇರುವ ಯೋಜನೆಗಳನ್ನು ಮಾಡಬೇಕೆ ವಿನಃ ಜನ ವಿರೋಧಿ ಶಾಸನಗಳನ್ನು ಮಾಡಬಾರದು ಎಂದು 5 ಭಾಗ್ಯಗಳ ಕುರಿತಾಗಿ ಆಗುವ ದುಷ್ಪರಿಣಾಮಗಳನ್ನು ಸಭೆಯಲ್ಲಿ ತಿಳಿಸುವುದರೊಂದಿಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ದುಪ್ಪಟ್ಟು ಏರುತ್ತಿರುವ ವಿಧ್ಯುತ್ ಬಿಲ್ಲ್‌ ಕಡಿಮೆಗೊಳಿಸಿ ಬೆಲೆ ಏರಿಕೆಯ ಈ ದಿನಗಳಲ್ಲಿ ಇದೂ ಕೂಡ ಜನತೆಗೆ ಮಾಸಲಾರದ ಗಾಯದ ಕ್ರಮವಾಗಿದೆ ಎಂದರು. 

ಮಾಜಿ ಪುರಸಭಾ ಅಧ್ಯಕ್ಷ ಜಿ ಎಸ್‌.ಗೊಂಬಿ ಮನವಿಯ ಪ್ರತಿಯಲ್ಲಿರುವ ವಿಷಯವನ್ನು ಸಾರ್ವಜನಿಕರೆದುರು ಓದಿ ಹೇಳುತ್ತ ಸಮಿತಿ ಅಧ್ಯಕ್ಷ ಶೇಖರ ಅಂಗಡಿ ಸೇರಿದಂತೆ ಪಟ್ಟಣದ ನಾಗರೀಕರ ಪರವಾಗಿ ಹೆಸ್ಕಾಂ ಅಧಿಕಾರಿಗಳಾದ ಎಇಇ ಸುರೇಶ ಮುರಗೋಡ ಮತ್ತು ಮುಖ್ಯಾಧಿಕಾರಿ ಜಗದೀಶ ಈಟಿ ಆವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ವಿದ್ಯುತ್ ಶಾಖಾಧಿಕಾರಿ ರಾಜೇಶ ಬಾಗೋಜಿ ಹಾಗೂ ಶ್ರೀರಾಂ ಪತ್ತಾರ, ಆರ್ ಎಸ್‌. ಸರಿಕರ್ ಇದ್ದರು. 

ಪ್ರತಿಭಟನೆಯಲ್ಲಿ ಮಹಾಲಿಂಗಪ್ಪ ಕೋಳಿಗುಡ್ಡ, ಅಶೋಕ ಅಂಗಡಿ, ಚೆನ್ನಪ್ಪ ರಾಮೋಜಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಗುರುಲಿಂಗಯ್ಯ ಮಠಪತಿ, ಮಹಾಲಿಂಗಪ್ಪ ಲಾತೂರ, ಹಣ್ಮಂತ ಜಮಾದಾರ, ಚಂದ್ರಶೇಖರ್ ಗೊಂದಿ, ತಿಪ್ಪಣ್ಣ ಬಂಡಿವಡ್ಡರ, ಬಸವರಾಜ ಪರೀಠ, ಶ್ಯಾಮ ನದಾಫ, ಸಲಿಂ ಸೌದಾಘರ, ವೀರಭದ್ರ ಮುಗಳ್ಯಾಳ, ಮಡಿವಾಳ ಸರ್, ಎ ಎಸ್‌.ಓಸ್ವಾಲ್, ಮಲ್ಲಪ್ಪ ಚಿಚಖಂಡಿ, ಮಲ್ಲಪ್ಪ ಕುಂದ್ರಾಳ, ಗಂಗಪ್ಪ ದಿನ್ನಿಮನಿ,ಮಹಾದೇವ ಶ್ಯಾವಂತ, ಬಸು ಹೋಳಗಿ ಮಹಾಲಿಂಗಪ್ಪ ಶಿವನಗಿ ನಾಗಲಿಂಗ ಬಡಿಗೇರ, ಗಂಗಪ್ಪ ಮೇದಾರ, ಬಸು ಮಡಿವಾಳ, ಚನ್ನಮಲ್ಲ ಯರಗಟ್ಟಿ ಇನ್ನೂ ಅನೇಕರಿದ್ದರು.


ಸುದ್ದಿ ಓದಿ