ರಾಜ್ಯ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಬಳ್ಳಾರಿ ನವೆಂಬರ್ 05: ನಗರದ ಬೆಂಗಳೂರು ರಸ್ತೆಯ ಇಂಡಸ್ಟ್ರಿಯಲ್ ಏರಿಯಾದ ಹತ್ತಿರದ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಎ.ಐ.ಕೆ.ಎಸ್.ಸಿ.ಸಿ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಸರ್ಕಾರದ ರೈತವಿರೋಧಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ರೈತ-ಕೃಷಿ ಕಾರ್ಮಿಕರ ಸಂಘನೆಯ ಇ.ಹನುಮಂತಪ್ಪ ಮಾತನಾಡಿ, ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಜನತೆಯ ವಿರೋಧವನ್ನು ಲೆಕ್ಕಿಸದೆ ಕಾರ್ಪೋರೇಟ್ ಕಂಪನಿಗಳಿಗೆ ಕೃಷಿ ಭೂಮಿ ಧಾರೆ ಎರೆಯಲು ಮತ್ತೆ ಸುಗ್ರೀವಾಜ್ಞೆ ಹೊರಡಿಸಿರುವ ಬಿಜೆಪಿ ರಾಜ್ಯ ಸರ್ಕಾರದ ಕ್ರಮವನ್ನು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಬಳ್ಳಾರಿ ಜಿಲ್ಲಾ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಕರೋನಾ ಕಾಲದಲ್ಲಿ ರೈತರು, ಕೃಷಿಕೂಲಿಕಾರರ ಸಂಕಷ್ಟಗಳಿಗೆ ಸ್ಪಂದಿಸದೆ, ಇಡೀ ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ವಿದ್ಯುತ್ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ನಾಲ್ಕು ಹೊಸ ಕಾಂiÀÉ್ದು ಮಾಡಿರುವ ಬಿಜೆಪಿ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ನಾಲ್ಕು ಹೊಸ ಕಾಯ್ದೆಗಳನ್ನು ಅಂಗೀಕರಿಸಿ ಜಾರಿ ಮಾಡಲು ಹೊರಟಿರುವುದನ್ನು ದೇಶದ ಸುಮಾರು 300 ಕ್ಕೂ ಹೆಚ್ಚಿನ ರೈತ ಸಂಘಟನೆಗಳು ಇಂದು `ರಾಷ್ಟ್ರದ್ಯಂತ ರಸ್ತೆ ತಡೆ ಚಳುವಳಿ’ನಡೆಸಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯಲ್ಲಿ ವಿ.ಎಸ್.ಶಿವಶಂಕರ್ ಜಿಲ್ಲಾಧ್ಯಕ್ಷರು(ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ), ಆರ್ ಮಾಧವರೆಡ್ಡಿ ರಾಜ್ಯ ಕಾರ್ಯಾದ್ಯಕ್ಷ(ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ), ಸಂಗನಕಲ್ಲು ಕೃಷ್ಣಪ್ಪ ಜಿಲ್ಲಾ ಗೌರವಾಧ್ಯಕ್ಷರು(ಕರ್ನಾಟಕ ರಾಜ್ಯ ರೈತ ಸಂಘ), ಕರಿಯಪ್ಪ ಗುಡಿಮನಿ ರಾಜ್ಯಾಧ್ಯಕ್ಷರು(ಕರ್ನಾಟಕ ಜನಶಕ್ತಿ, ಮಾದಿಗರ ರಕ್ಷಣಾ ವೇದಿಕೆ) ಮತ್ತು ವಿವಿಧ ಸಂಘಟನೆಯ ಪದಾದಿಕಾರಿಗಳು ಮತ್ತು ಸದಸ್ಯರು ರೈತರು ಭಾಗವಹಿಸಿದ್ದರು.