ಮಹಲಿಂಗಪುರ

ಪೆಟ್ರೋಲ್ , ಡೀಸೆಲ್ ದರ ಏರಿಕೆ ಕ್ರಮ ಖಂಡಿಸಿ ಪ್ರತಿಭಟನೆ

ಪೆಟ್ರೋಲ್ , ಡೀಸೆಲ್ ದರ ಏರಿಕೆ ಕ್ರಮ ಖಂಡಿಸಿ ಪ್ರತಿಭಟನೆ

ಮಹಾಲಿಂಗಪುರ 14: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರೆ ನೀಡಿರುವ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕ್ರಮ ಖಂಡಿಸಿ ತೇರದಾಳ ಮತಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮೀಪದ ಬನಹಟ್ಟಿ ಪಟ್ಟಣದ ಶಿವಪೂಜಿ ಪೆಟ್ರೋಲ್ ಬಂಕ್ ಎದುರಿಗೆ ಸೋಮವಾರ ಪ್ರತಿಭಟನೆ ನಡೆಸಿದರು. 

ಈ ಪ್ರತಿಭಟನೆಯ ಮುಂದಾಳತ್ವ ವಹಿಸಿದ, ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಪಕ್ಷದ ಬೆಳಗಾವಿ ಘಟಕದ ಉಪಾಧ್ಯಕ್ಷ ಹಾರೂನ್ ಬೇವೂರ ಮಾತನಾಡಿ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಿತಿಮೀರಿದ್ದರಿಂದ, ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿ ಕೂಲಿ ಕಾರ್ಮಿಕರು, ಬಡವರು, ಮಧ್ಯಮವರ್ಗದವರು, ವ್ಯಾಪಾರಸ್ಥರಲ್ಲದೇ ಎಲ್ಲ ಸಾರ್ವಜನಿಕರು, ಎರಡು ತಿಂಗಳಿನಿಂದ ಕೊರೋನಾ ತಂದ ಅವಾಂತರದಿಂದ ಕೆಲಸವಿಲ್ಲದೆ ಹಣಕಾಸಿನ ತೊಂದರೆಗೆ ಸಿಲುಕಿ ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರ್ಧಕ್ಕಿಂತ ಹೆಚ್ಚಿನ ತೆರಿಗೆ ಹೇರುವ ಮೂಲಕ ಸಾರ್ವಜನಿಕರ ಸಂಕಷ್ಟಕ್ಕೂ ಕಾರಣರಾಗಿ ಎರಡೂ ಸರ್ಕಾರಗಳು ಇವರ ಸಹಾಯಕ್ಕೆ ಇನ್ನುವರೆವಿಗೂ ಧಾವಿಸದೆ ಜನವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿವೆ ಇದು ಖಂಡನೀಯ. ಇನ್ನು ಜನತೆಯ ತಾಳ್ಮೆಯನ್ನು ಪರೀಕ್ಷಿಸಬೇಡಿ ಅವರು ರೊಚ್ಚಿಗೇಳುವ ಮುಂಚೆ ಇಂಧನ ಹಾಗೂ ದಿನನಿತ್ಯ ಅಗತ್ಯ ಆಹಾರ ಸಾಮಗ್ರಿಗಳ ಬೆಲೆ ಇಳಿಸಬೇಕೆಂದು ಈ ಮೂಲಕ ಸರ್ಕಾರಗಳಿಗೆ ಒತ್ತಾಯಿಸಿದರು. 

ಹಾರೂನ್ ಸಾಂಗ್ಲಿಕರ್, ಮೌಲಾಸಾಬ್ ಜಮಾದಾರ್, ಹುಜೇಫಾ ಮುಲ್ಲಾ, ಸಾಧಿಕ್ ಜಕಾತಿ, ಇರ್ಷಾದ್ ಬಿಜಾಪುರ್, ಅಬ್ದುಲ್ ಕೊನ್ನೂರ್, ರಂಜಾನ್ ಸಾಬ್ ಕೊರಬು, ಈಸಾ ಜಕಾತಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ