ಅಲ್ಪ ಸಂಖ್ಯಾತರ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 04 : ಅಲ್ಪ ಸಂಖ್ಯಾಂತರ ಮೇಲಿನ ದಾಳಿಗಳನ್ನು ಖಂಡಿಸಿ ಸಂವಿಧಾನ ಬಧ್ಧ ರಕ್ಷಣೆ ನೀಡಲು ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳನ್ನು ಸಮಗ್ರ ಅಭಿವೃಧ್ಧಿಗೆ ಒತ್ತಾಯಿಸಿ,ಮತ್ತು ವಿವಿಧ ಬೇಡಿಕೆಗಳಿಗಾಗಿ ಬಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ತಾಲೂಕು ಕಚೇರಿ ಹತ್ತಿರ ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕಾಯದರ್ಶಿ ಮಾಳಮ್ಮ ಮಾತನಾಡಿ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ತಮ್ಮ ಧ್ವೇಷವನ್ನು ಮುಂದುವರೆಸುವುದರ ಭಾಗವಾಗಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಮತ್ತು ಅವುಗಳನ್ನು ಪ್ರಚುರಿಸುವ ಕಾರ್ಯವನ್ನು ಮೂಂದುವರೆಸಿವೆ, ಅಂತಹ ಸುಳ್ಳುಗಳನ್ನು ನಿಜವೆಂದು ಬಿಂಬಿಸುವ ಮೂಲಕ ಕಾನೂನನ್ನು ಕೈಗೆತ್ತಿಕೊಂಡು ದಾಳಿ ನಡೆಸುವ ದುಷ್ಕೃತ್ಯದಲ್ಲಿ ತೊಡಗಿವೆ ಇಂತಹ ಶಕ್ತಿಗಳಿಗೆ ರಾಜ್ಯದಲ್ಲಿ ಕಾನೂನಿನ ಭಯವಿಲ್ಲದಂತಾಗಿದ್ದು ತಾವೇ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬಂತೆ ವರ್ತಿಸುತ್ತಿದ್ದು ಪುಂಡಾಟಿಕೆ ಹೆಚ್ಚಾಗುತ್ತಿದೆ, ರಾಜಕೀಯ ಲಾಭಕ್ಕಾಗಿ ಸಂವಿಧಾನ ಬಧ್ಧವಾಗಿ ನಡೆದುಕೊಳ್ಳಬೇಕಿದ್ದ ಸರ್ಕಾರ, ಪೋಲೀಸ್ ಇಲಾಖೆ, ಸ್ಥಳೀಯ ಆಡಳಿತ ಒತ್ತಡಕ್ಕೊಳಗಾಗಿ ನಡೆದುಕೊಳ್ಳುತ್ತಿದ್ದು, ಇತ್ತಿಚಿನ ದಿನಗಳಲ್ಲಿ ತುಮಕೂರು, ಕೋಲಾರ, ಕೊಡಗು, ಮಂಗಳೂರು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಸಂವಿಧಾನದ ಮೇಲಿನ ದಾಳಿ ಎಂದು ಪರಿಗಣಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಿಪಿಐ(ಎಂ) ಆಗ್ರಹಿಸುತ್ತಾ ಒತ್ತಾಯಿಸುತ್ತದೆ ಎಂದರು.
ಎಸ್.ಜಗನ್ನಾಥ್ ಮಾತನಾಡಿ ದೇಶದ ಅಲ್ಪ ಸಂಖ್ಯಾತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪರಿಸ್ಥಿತಿಗಳ ಕುರಿತು ಭಾರತ ಸರ್ಕಾರ ನೇಮಿಸಿದ್ದ ಡಾ.ರಾಜೇಂದ್ರ ಸಾಚಾರ್ ಸಮಿತಿಯು ಪರಿಸ್ಥಿತಿಯನ್ನು ತಿಳಿಸಿದ್ದು ಇದರ ಬಗ್ಗೆ ಚಿಂತನೆ ನಡೆಸಿ ಸುಧಾರಿಸುವ ಬದಲಾಗಿ ಮುಸ್ಲಿಂ ಅಲ್ಪಸಂಖ್ಯಾತ ಮಕ್ಕಳ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ತಡೆದಿರುವುದನ್ನು ಪಕ್ಷ ಖಂಡಿಸುತ್ತದೆ, ದಲಿತ ಹಾಗೂ ಅಲ್ಪಸಂಖ್ಯಾತರ ಆಹಾರದ ಹಾಗೂ ಬದುಕುವ ಹಕ್ಕುಗಳ ಮೇಲಿನ ತಿದ್ದುಪಡಿ 2020ನ್ನು ತಕ್ಷಣ ನಿಲ್ಲಿಸಬೇಕು ಎಂದರು.
ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಿ ಅವರ ಮೇಲಿನ ಕೋಮು ಹಿಂಸಾಚಾರವನ್ನು ನಿಲ್ಲಿಸಲು, ಪುಂಡಾಟಿಕೆ ಗುಂಪುಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು, ಕೋಮು ಧ್ವೇಷದ ಹಿಂಸಾಚಾರದಲ್ಲಿ ಹಿಂಸೆಗೊಳಗಾದವರಿಗೆ ಸೂಕ್ತ ಪರಿಹಾರ , ಪ್ರಾಣ ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸರಕಾರಿ ಉದ್ಯೋಗ, ರಾಜ್ಯ ಶಿಕ್ಷಣಕ್ಕೆ ನೀಡುವ ವಿದ್ಯಾರ್ಥಿ ವೇತನವನ್ನು ಮರು ಆರಂಭಿಸುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಕೆ.ಗಾಳೆಪ್ಪ, ಎಂ.ಆನಂದ, ಬಿ.ಮೈಲಮ್ಮ, ಕೆ.ರಮೇಶ್, ಬಸವರಾಜ, ಕೆ.ರಾಮಣ್ಣ, ರೇಣುಕಾ,ಎಸ್.ಹುಲಿಗೆಮ್ಮ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.