ಶ್ರೀಪತಿ ಹೆಗಲೆ ಅವರಿಗೆ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ; ಜಲಾಲಪೂರ ಗ್ರಾ.ಪಂ.ಯಲ್ಲಿ ಸನ್ಮಾನ
ರಾಯಬಾಗ 05 : ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯಿತಿಯಲ್ಲಿ ಬಿಲ್ಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದ ಶ್ರೀಪತಿ ಸಿದ್ರಾಮ ಹೆಗಲೆ ಅವರನ್ನು ಬುಧವಾರ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ಹವಾಲ್ದಾರ, ಉಪಾಧ್ಯಕ್ಷೆ ಪ್ರಮೀಳಾ ಹಿಡಕಲ, ಸದಸ್ಯರಾದ ನಾಮದೇವ ಕಾಂಬಳೆ, ಮೌಲಾ ನದಾಫ, ಅಣ್ಣಾಸಾಹೇಬ ಹೆರವಾಡೆ, ಸಂಜು ಜಾಧವ, ವಿದ್ಯಾ ಜಗದಾಳೆ, ಪಾರ್ವತಿ ದಾಸರ, ಮಲ್ಲವ್ವ ಕಾಂಬಳೆ, ಪಿಡಿಒ ದತ್ತಾ ಸಾವಂತ ಸೇರಿದಂತೆ ಆನಂದ ಚೌಗಲಾ, ಪುಂಡಲೀಕ್ ಹಿಡಕಲ, ಬಾಳು ದಾಸರ ಹಾಗೂ ವಸಂತ್ ಕಾಂಬಳೆ ಉಪಸ್ಥಿತರಿದ್ದರು.