ಬಳ್ಳಾರಿ

2014ರಲ್ಲಿ ಮೋದಿಯವರು ನೀಡಿರುವ ಭರವಸೆಗಳು ಈಡೇರಿಲ್ಲ: ಉಗ್ರಪ್ಪ ವಾಗ್ದಾಳಿ

2014ರಲ್ಲಿ ಮೋದಿಯವರು ನೀಡಿರುವ ಭರವಸೆಗಳು ಈಡೇರಿಲ್ಲ: ಉಗ್ರಪ್ಪ ವಾಗ್ದಾಳಿ

ಬಳ್ಳಾರಿ 04: ಭಾರತದ ಹಿಂದಿ ಭಾಷಿಕರು ಮಾತ್ರ ದೇಶದಲ್ಲಿ ಮೋದಿ ನಾಯಕತ್ವ ಒಪ್ಪಿರುತ್ತಾರೆ . ಹಿಂದಿ ಯೇತರ ಭಾಷಿಕರು ಬಿಜೆಪಿ ಮತ್ತು ಮೋದಿ ನಾಯಕತ್ವ  ದೇಶದಲ್ಲಿ ಗುಜರಾತ್ ಸೇರಿ ಹಿಂದಿ ಭಾಷಿಕರು ಶೇಕಡ 45ರಷ್ಟಿದ್ದಾರೆ ಅವರನ್ನ ಬಿಟ್ಟರೆ ಶೇಕಡ 55 ಹಿಂದಿ ಯೇತರಭಾಷಿಕರಿದ್ದಾರೆ. ಅವರಲ್ಲಿ ದಕ್ಷಿಣ ಭಾರತದ ರಾಜ್ಯಗಳ ದ್ರಾವಿಡ ಭಾಷಿಕರಿದ್ದಾರೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಹಿಂದಿ ಭಾಷೆ ಕರು ಕಾರಣ ಎಂದ ಅವರು ದಕ್ಷಿಣ ಭಾರತದಲ್ಲಿ ತೆಲಂಗಾಣದಲ್ಲಿ ಬಿಜೆಪಿಯನ್ನು ಲೆಕ್ಕಕ್ಕೆ ಇಲ್ಲದಂತೆ ಮಾಡಿದೆ ಎಂದು ಮಾಜಿ ಸಂಸದರಾದ ವಿ ಎಸ್ ಉಗ್ರಪ್ಪ ಹೇಳಿದರು.ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಏರಿ​‍್ಡಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸ್ವತಂತ್ರ ಬಂದಾಗಿನಿಂದ ಈವರೆಗಿನ ಲೋಕಸಭಾ ಚುನಾವಣೆಗಳು ವಿಷಯಾಧಾರಿತವಾಗಿ ನಡೆದಿವೆ. ಆದರೆ ಈ ಬಾರಿ 2024ರ ಚುನಾವಣೆಗಳಿಗೆ ಯಾವುದೇ ವಿಷಯ ಮುಂದಿಲ್ಲ ಈ ಹಿಂದೆ 2014ರಲ್ಲಿ ಮೋದಿಯವರು ನೀಡಿರುವ ಭರವಸೆಗಳು ಈಡೇರಿಲ್ಲ ಕಪ್ಪು ಹಣ ತರಲಿಲ್ಲ ಯುವ ಜನರಿಗೆ ಉದ್ಯೋಗ ಕೆಲಸವಿಲ್ಲ ಭ್ರಷ್ಟಾಚಾರ ನಿಲ್ಲಲಿಲ್ಲ ಬಂಡವಾಳ ಶಾಹಿಗಳ ಪರವಾದ ಇವರ ಸರಕಾರದ ನೀತಿಗಳು ಜನ ವಿರೋಧಿಯಾಗಿವೆ. ಆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಮತ ಪಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ  ಪಕ್ಷದ ಮುಖಂಡರಗಳಾದ ವೆಂಕಟೇಶ್ ಹೆಗಡೆ, ಗಚ್ಚಿಮನಿ ತಿಪ್ಪೇಶ್, ಅಸುಂಡಿನಾಗರಾಜ್ ಗೌಡ, ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ