ರಾವ್ ಬಹದ್ದೂರ್ ವೈ.ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕ್ರಮ
ರಾವ್ ಬಹದ್ದೂರ್ ವೈ.ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕ್ರಮ
ಬಳ್ಳಾರಿ 26 ; ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಪುರುಷರ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಪುರುಷರ ಕ್ರಿಕೆಟ್ ಟೂರ್ನಮೆಂಟ್ಯನ್ನು ವೀ.ವಿ.ಸಂಘದ ಉಪಾಧ್ಯಕ್ಷರಾದ ಹಾಗು ಮಹಾವಿದ್ಯಾಲಯ ಆಡಳಿತಮಂಡಳಿಯ ಅಧ್ಯಕ್ಷರು ಜಾನೇಕುಂಟೆ ಬಸವರಾಜ ಪ್ರಾಂಶುಪಾಲರು ಡಾ. ಟಿ.ಹನುಮಂತ ರೆಡ್ಡಿ ಮಹಾವಿದ್ಯಾಲಯ ಧೈಹಿಕ ಶಿಕ್ಷಕ ನಿರ್ದೇಶಕ ವಿಜಯಮಹಂತೇಶ ತುಮಕೂರು ವಲಯದ ಸೆಲೆಕ್ಷನ್ ಕಮಿಟಿ ಮೆಂಬರ್ ರಾಮಚಂದ್ರ ಕಿಶೋರಬಾಬು ಬಳ್ಳಾರಿ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ಕ್ರೀಡಾ ಇಲಾಖೆಯ ಸಚಿನ್ ಪ್ರಭುಲಿಂಗ ಪಾಟೀಲ್ ಪಿಡಿಎ ಕಾಲೇಜ್ ಕಲಬುರ್ಗಿ ಇನ್ನಿತರರು ಭಾಗವಹಿಸಿದ್ದರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷರು ಜಾನೇಕುಂಟೆ ಬಸವರಾಜ ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಒಳ್ಳೆಯ ಮನೋಭಾವನೆಯಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲುವಿಗಾಗಿ ಪ್ರಯತ್ನಿಸಬೇಕು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಸೋಲೇ ಗೆಲುವಿಗೆ ಮುಖ್ಯ ಮೆಟ್ಟಿಲು ಎಂಬುದನ್ನು ಮರೆಯಬಾರದು. ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಳಗಾವಿ ಅಧಿಕಾರಿಗಳಿಗೆ ಈ ಕ್ರಿಕೆಟ್ ಟೂರ್ನಮೆಂಟ್ಗೆ ನಮ್ಮ ಮಹಾವಿದ್ಯಾಲಯವನು ಆಯ್ಕೆ ಮಾಡಿದುದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಆರಂಭದ ಮ್ಯಾಚು ಬಾಗಲಕೋಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್ ಕಲಬುರ್ಗಿ ನಡುವೆ ಜರುಗಿತು. ಭೋಧಕ ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ ಭಾಗವಹಿಸಿದ್ದರು.