ಮಹಲಿಂಗಪುರ

ಟೊಣಪಿನಾಥ ಸ್ವಾಮಿಜಿ ಉತ್ಸವ, ಪ್ರವಚನಕ್ಕೆ ಕಾರ‌್ಯಕ್ರಮ

ಟೊಣಪಿನಾಥ ಸ್ವಾಮಿಜಿ ಉತ್ಸವ, ಪ್ರವಚನಕ್ಕೆ ಕಾರ‌್ಯಕ್ರಮ

ಮಹಾಲಿಂಗಪುರ 31: ಸ್ಥಳೀಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಟೊಣಪಿನಾಥ ಸ್ವಾಮಿಜಿ ಬೆಳ್ಳಿ ಮೂರ್ತಿಯ ಉತ್ಸವವನ್ನು ಇತ್ತಿಚೆಗೆ ಆಚರಿಸಲಾಯಿತು. 

ಶುಭ ಶ್ರಾವಣ ಮಾಸ ಆರಂಭಗೊಂಡಿರುವ ಈ ಸಂದರ್ಭದಲ್ಲಿ ಮಲ್ಲಯ್ಯ ಸ್ವಾಮಿ ದೇವಸ್ಥಾನದಿಂದ ಊರಿನ ಮುತ್ತೈದೆಯರ ಕುಂಬ ಮೇಳದೊಂದಿಗೆ ಆಗಮಿಸಿದ ಸ್ವಾಮಿಜಿಗಳ ಬೆಳ್ಳಿ ಮೂರ್ತಿಯನ್ನು ಟೊನಪಿನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. 

 ಇದರ ಪ್ರಯುಕ್ತ ದೇವಸ್ಥಾನದಲ್ಲಿ ಆಗಷ್ಟ 18 ರಿಂದ 28, 11 ದಿವಸಗಳ ವರೆಗೆ ಸಿದ್ಧೇಶ್ವರ ಸ್ವಾಮೀಜಿಗಳ ಪರಮ ಶಿಷ್ಯರಾದ ಆತ್ಮಾರಾಮ ಸ್ವಾಮಿಜಿಗಳು ಪ್ರವಚನ ನಡೆಸಿಕೊಟ್ಟರು. 

ಪ್ರವಚನ ಕಾರ್ಯಕ್ರಮದ ಕೊನೆಯ ದಿವಸ ಸಂಜೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ, ಪತ್ರಕರ್ತರನ್ನು ಹಾಗೂ ಕಾರ್ಯಕ್ರಮಕ್ಕೆ ತನು ಮನ ಧನ ಸಮರೆ​‍್ಣ ಮಾಡಿದ ಮಹನಿಯರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಅಲ್ಲದೆ ಊರಿನ ಹಲವಾರು ಜನ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ