ಪ್ರಾದೇಶಿಕ ಸ್ಥಿರತೆ, ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ: ಸಚಿವ ಸಂಜಯ್ ಸೇಠ್‌

ಪ್ರಾದೇಶಿಕ ಸ್ಥಿರತೆ, ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ: ಸಚಿವ ಸಂಜಯ್ ಸೇಠ್‌

ನೌಕಾನೆಲೆಯಲ್ಲಿ ಪ್ರಗತಿಯನ್ನು ಪರೀಶೀಲಿಸಿದ ರಕ್ಷಣಾ ಇಲಾಖೆಯ ರಾಜ್ಯಮಂತ್ರಿ 

ಕಾರವಾರ 22: ಪ್ರಾದೇಶಿಕ ಸ್ಥಿರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ ನೀಡುವುದಾಗಿ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸಂಜಯ್ ಸೇಠ್ ಹೇಳಿದರು.ಇಲ್ಲಿನ ಸೀಬರ್ಡ ಐಎನ್ ಎಸ್ ಕದಂಬನೌಕಾನೆಲೆಗೆರಕ್ಷಣಾ ಇಲಾಖೆಯ ರಾಜ್ಯ ಮಂತ್ರಿ ಸಂಜಯ್ ಸೇಠ್ ಎರಡು ದಿನಗಳ ಕಾಲ ಭೇಟಿ ನೀಡಿ, ಪ್ರಗತಿ ಪರೀಶೀಲನೆ ನಡೆಸಿದರು.  

ಮಂಗಳವಾರವೇ ಕರ್ನಾಟಕದ ನೇವಲ್ ಬೇಸ್ ಕಾರವಾರಕ್ಕೆಬಂದಿದ್ದಅವರನ್ನು ನೌಕಾನೆಲೆಯವೈಸ್ ಅಡ್ಮಿರಲ್ ತರುಣ್ ಸೋಬ್ತಿ, ನೌಕಾಪಡೆಯ ಉಪ ಮುಖ್ಯಸ್ಥರು ಮತ್ತು ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್, ಫ್ಲಾಗ್ ಆಫೀಸರ್‌ ಕಮಾಂಡಿಂಗ್‌ ಬರಮಾಡಿಕೊಂಡರು. ದೇಶದ ಕಡಲ ಭದ್ರತೆ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ರಾಜ್ಯ ರಕ್ಷಣಾ ಸಚಿವರು ಪರೀಶೀಲಿಸಿದರು ಎಂದು ನೇವಿ ಹೇಳಿದೆ. 

ಗಾರ್ಡ ಆಫ್‌ಆನಾರ್ ನೀಡಿಕೆ ;ರಾಜ್ಯ ರಕ್ಷಣಾ ಸಚಿವ ಸಂಜಯ್ ಸೇಠಗೆಓಪಚಾರಿಕ ಗಾರ್ಡ್‌ ಆಫ್ ಆನರ್ ನೀಡಲಾಯಿತು. ಅವರ ಭೇಟಿಯ ಸಮಯದಲ್ಲಿ, ನೇವಲ್‌ ಬೇಸ್‌ನ ಕಾರ್ಯಾಚರಣೆಯ ಸಾಮರ್ಥ್ಯಗಳು, ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳ ಕಾಮಗಾರಿ ಕುರಿತು ಸಚಿವರಿಗೆ ವಿವರಿಸಲಾಯಿತು.1961ರ ವಿಮೋಚನಾ ಕಾರ್ಯಾಚರಣೆಯ ಸಮಯದಲ್ಲಿ ಅಂಜದೀಪ್ ದ್ವೀಪದ ವಿಮೋಚನೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನೌಕಾಪಡೆಯ ಸಿಬ್ಬಂದಿಗೆ ಇದೇ ವೇಳೆ ಅವರು ಗೌರವ ಸಲ್ಲಿಸಿದರು. ಭಾರತದ ಅತಿದೊಡ್ಡ ನೌಕಾ ಮೂಲಸೌಕರ್ಯ ಯೋಜನೆಯಾದ ಪ್ರಾಜೆಕ್ಟ್‌ ಸೀಬರ್ಡ್‌ನ್ನು ಸಚಿವರು ಪರೀಶೀಲಿಸಿದರು. ಈ ಯೋಜನೆಯು ಭಾರತೀಯ ನೌಕಾಪಡೆಯ ನೀಲಿ-ನೀರಿನ ಸಾಮರ್ಥ್ಯಗಳನ್ನು ಹೆಚ್ಚಿಸುವ ಮಹತ್ವದ ಯೋಜನೆಯಾಗಿದೆ.ಏಷ್ಯಾದ ಅತ್ಯಂತ ಮುಂದುವರಿದ ನೌಕಾ ನೆಲೆಗಳಲ್ಲಿ ಒಂದಾಗಿದ್ದು, ನೌಕಾ ನೆಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆ ಸಹ ಇದೆ. ನಂತರ ಅಮದಳ್ಳಿಯಲ್ಲಿರುವ ನೇವಲ್ ಸಿವಿಲಿಯನ್ ಹೌಸಿಂಗ್ ಕಾಲೋನಿಗೆ ಭೇಟಿ ನೀಡಿದ ಅವರು ಭಾರತೀಯ ನೌಕಾಪಡೆಯ ರಕ್ಷಣಾ ನಾಗರಿಕರೊಂದಿಗೆ ಸಂವಾದ ನಡೆಸಿದರು.  

ಸಶಸ್ತ್ರ ಪಡೆಗಳ ಕಲ್ಯಾಣವನ್ನುಸರ್ಕಾರ ಗಮನಿಸುತ್ತದೆ ಎಂದುಅವರು ಒತ್ತಿಹೇಳಿದರು. ಯಾವುದೇ ಕಾರ್ಯಾಚರಣೆ ಅಥವಾ ಮೂಲಸೌಕರ್ಯ ಸವಾಲುಗಳನ್ನು ಎದುರಿಸುವಲ್ಲಿ ಸರ್ಕಾರದ ನಿರಂತರ ಬೆಂಬಲ ಇದೆ ಎಂದರು.ಸಚಿವ ಸಂಜಯ್ ಸೇಠ್ ಅವರು ಪಶ್ಚಿಮ ನೌಕಾಪಡೆಯ ಪುರುಷರು ಮತ್ತು ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ನೌಕಾಪಡೆಯ ಬಲವನ್ನು ಅವರು ಶ್ಲಾಘಿಸಿದರು,ಭಾರತೀಯ ನೌಕಾಪಡೆಯ ಮಹಿಳೆಯರು ಮತ್ತು ಪುರುಷರು ಮತ್ತು ರಕ್ಷಣಾ ನಾಗರಿಕರಿಗೆ ಅತ್ಯುತ್ತಮವಾದದ್ದನ್ನು ಕೊಡಲುಉತ್ತೇಜಿಸುವುದಾಗಿ ಅವರು ಹೇಳಿದರು. 


ಸುದ್ದಿ ಓದಿ