ಶಿರಹಟ್ಟಿ

ಪ್ರಾಥಮಿಕ ಶಾಲೆಯ ಶಿಕ್ಷಣವೇ ವಿಧ್ಯಾರ್ಥಿ ಜೀವನದ ಭದ್ರ ಬುನಾದಿ: ಕೆ ಎ ಬಳಿಗೆರ

ಪ್ರಾಥಮಿಕ ಶಾಲೆಯ ಶಿಕ್ಷಣವೇ ವಿಧ್ಯಾರ್ಥಿ ಜೀವನದ ಭದ್ರ ಬುನಾದಿ: ಕೆ ಎ ಬಳಿಗೆರ

ಶಿರಹಟ್ಟಿ 16: ಮಗುವಿನ ಶಿಕ್ಷಣದ ಆರಂಭಿಕ ಹಂತ ಅತ್ಯಂತ ಅಮೂಲ್ಯವಾದದ್ದು. ಮಗುವಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಕೇವಲ ಶಿಕ್ಷಕರದ್ದಾಗಿರದೇ ಪಾಲಕರ ಆದ್ಯ ಕರ್ತವ್ಯವಾಗಿರಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಕಸಾಪ ತಾಲ್ಲೂಕಾ ಘಟಕ ಮಾಜಿ ಅಧ್ಯಕ್ಷ ಕೆ.ಎ ಬಳಿಗೇರ ಹೇಳಿದರು.  

ಶನಿವಾರ ಪಟ್ಟಣದ ವಿಜಯನಗರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಾವು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಕೂಡ ನಮಗೆ ಭದ್ರ ಬುನಾದಿಯಾಗಿ ಪ್ರಾಥಮಿಕ ಹಂತದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಬಹಳ ಪ್ರಾಮುಖ್ಯವಾಗಿದೆ. ಅದುವೇ ನಮ್ಮ ಜೀವನದ ಭದ್ರ ಬುನಾದಿಯಾಗಿದೆ ಎಂದು ಹೇಳಿದರು. 

 ಸೇಂಟ್ ಜೋಸೆಫ್ ಶಾಲೆಯ ಪುಟ್ಟ ಮಕ್ಕಳು ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನ ನೋಡಿದರೆ ವಾಸ್ತವವಾಗಿ ಪ್ರೌಡ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕೂಡ ಮಾಡಲಾದ ವಿಜ್ಞಾನ ವಸ್ತು ಪ್ರದರ್ಶನವನ್ನು ಅದ್ಬುತವಾಗಿ ಪ್ರದರ್ಶಿಸಿ ನೋಡುಗರ ಕಣ್ಮನ ಸೆಳೆದಿದ್ದಾರೆ. ಇದೊಂದು ಅದ್ಬುತ ವಿಜ್ಞಾನ ಪ್ರದರ್ಶನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಅತ್ಯಂತ ಕಡಿಮೆ ಅವಧಿಯಲ್ಲಿ ಶಾಲೆ ಸರ್ವಾಂಗೀಣ ಪ್ರಗತಿ ಹಾಗೂ ಉನ್ನತ ಮಟ್ಟದ ಶೈಕ್ಷಣಿಕ್ನಭಿವೃದ್ದಿಗೆ ಶ್ರಮಿಸಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದು. ಇಂತಹ ಶಾಲೆ ಉತ್ತರೋತ್ತರವಾಗಿ ಬೆಳೆಯಬೇಕು ಎಂದು ಆಸಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಂಟ್ ಜೋಸೆಫ್ ಶಾಲೆ ಮುಖ್ಯಸ್ಥ ಎಸ್ ಎಸ್ ಸಾಮ್ರಾಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಭಿನವ ಪಾಲ್, ಪಟ್ಟಣ ಪಂಚಾಯಿತಿ ಸದಸ್ಯ ಹೊನ್ನಪ್ಪ ಶಿರಹಟ್ಟಿ, ಮಾಬುಸಾಬ್ ಲಕ್ಷ್ಮೇಶ್ವರ, ವಿ ಆರ್ ಚೌಹಾಣ, ಇ ಎಂ ವಡಕಣ್ಣವರ,  ಎಚ್‌.ಆರ್ ಬೆನಹಾಳ, ಶಾಲೆಯ ಮುಖ್ಯ ಶಿಕ್ಷಕಿ ಸುಖಲತಾ ಸಾಮ್ರಾಟ ಶಾಲೆಯ ಸರ್ವ ಶಿಕ್ಷಕ ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ