ಮಹಲಿಂಗಪುರ

ಕಾನಿಪ ಸಂಘದಿಂದ ಜು.26ರಂದು ಪತ್ರಿಕಾ ದಿನಾಚರಣೆ

ಕಾನಿಪ ಸಂಘದಿಂದ ಜು.26ರಂದು ಪತ್ರಿಕಾ ದಿನಾಚರಣೆ

ಮಹಾಲಿಂಗಪುರ: ವಿವಿಧ ಕಾರ್ಯ ಚಟುವಟಿಕೆಗಳಿಂದ ಅಗ್ರ ಸ್ಥಾನಗಳನ್ನು ಪಡೆದ ಶಾಲಾ ಮಕ್ಕಳಿಗೆ ಬಹುಮಾನ ಹಾಗೂ ಸಾಮಾಜಿಕವಾಗಿ ಉತ್ತಮ ಕಾರ್ಯ ನಿರ್ವಹಿಸಿದ ಪತ್ರಿಕಾ ವರದಿಗಾರರಿಗೆ ' ಪತ್ರಿಕಾ ಮಿತ್ರ ' ಪ್ರಶಸ್ತಿಯನ್ನು ಬುಧವಾರ ಸ್ಥಳೀಯ ಕಾನಿಪ ಸಂಘದ ಪತ್ರಿಕಾ ದಿನಾಚರಣೆಯ ಅಂಗವಾಗಿ ಏರಿ​‍್ಡಸಿರುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಮಹೇಶ್ ಆರಿ ತಿಳಿಸಿದ್ದಾರೆ.  

ಜುಲೈ 26ರಂದು ಬುಧವಾರ ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಮುಂಜಾನೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಅಧ್ಯಕ್ಷತೆಯನ್ನು ಸ್ಥಳೀಯ ಕಾನಿಪ ಸಂಘದ ಅಧ್ಯಕ್ಷ ಮಹೇಶ್ ಆರಿ ವಹಿಸಲಿದ್ದಾರೆ. 

ಮಹಾಲಿಂಗಪುರದ ಸಿದ್ಧಾರೂಢ ಮಠದ ಅಧಿಪತಿ ಸಹಜಾನಂದ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೊಂದಿ, ಕಾರ್ಯಕ್ರಮದ ಉದ್ಘಾಟಕರಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ.ತಿಮ್ಮಾಪೂರ, ಬಹುಮಾನ ವಿತರಣೆಗೆ ತೇರದಾಳ ಶಾಸಕ ಸಿದ್ದು ಸವದಿ ಅಲ್ಲದೆ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಸಮೀರವಾಡಿ ಜಿಬಿಎಲ್ ನಿರ್ದೇಶಕ ಬಾಲಚಂದ್ರ ಭಕ್ಷಿ, ರಾಜ್ಯ ಕಾನಿಪ ಸಂಘದ ಸದಸ್ಯ ಮಹೇಶ್ ಅಂಗಡಿ, ಜಿಲ್ಲಾಧ್ಯಕ್ಷ ಆನಂದ ದಲಭಂಜನ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ್, ಮಾಜಿ ಸದಸ್ಯ ಜಿಪಂ ಮಹಾಂತೇಶ ಹಿಟ್ಟಿನಮಠ, ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ, ಕಾರ್ಯದರ್ಶಿ ಮೀರಾ ತಟಗಾರ ಹಾಗೂ ಸಂಘದ ಕಾನೂನು ಸಲಹೆಗಾರ ಮಲ್ಲು ಸಂಗಣ್ಣವರ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. 

ಪತ್ರಿಕಾ ಮಿತ್ರ ಪ್ರಶಸ್ತಿ ಪುರಸ್ಕೃತರು : ರಬಕವಿ/ ಬನಹಟ್ಟಿ ಪ್ರಜಾವಾಣಿ ವಿಶ್ವಜ ಕಾಡದೇವರ, ಜಮಖಂಡಿಯ ಕೋಟೆ ಕರ್ನಾಟಕ ಡಾ.ಟಿ ಪಿ.ಗಿರಡ್ಡಿ, ಲೋಕಾಪುರ ಕನ್ನಡ ಪ್ರಭ ಶ್ರೀನಿವಾಸ ಬಬಲಾದಿ, ಚಿಮ್ಮಡದ ವಿಜಯ ಕರ್ನಾಟಕ ಇವರು ಪ್ರತಿ ವರ್ಷ ಸ್ಥಳೀಯ ಕಾನಿಪ ಸಂಘ ನೀಡುವ ಪತ್ರಿಕಾ ಮಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 


ಸುದ್ದಿ ಓದಿ