ಮಹಲಿಂಗಪುರ

ನೇಕಾರರನ್ನು ಭಿಕ್ಷುಕರಂತೆ ನೋಡದೇ ಕಾರ್ಮಿಕರಿಗಿರುವ ಸೌಲಭ್ಯ ನೀಡಿ: ಉಮಾಶ್ರೀ

ನೇಕಾರರನ್ನು ಭಿಕ್ಷುಕರಂತೆ ನೋಡದೇ ಕಾರ್ಮಿಕರಿಗಿರುವ ಸೌಲಭ್ಯ ನೀಡಿ: ಉಮಾಶ್ರೀ
ಮಹಾಲಿಂಗಪುರ, ಸರ್ಕಾರಕ್ಕೆ ನೇಕಾರರ ಸಮಸ್ಯೆಗಳ ಅರಿವು ಹಾಗೂ ಪರಿಹಾರಕ್ಕಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಉಮ

ಮಹಾಲಿಂಗಪುರ 28 : ನೇಕಾರರನ್ನು ಭಿಕ್ಷುಕರಂತೆ ನೋಡದೇ ಕಾರ್ಮಿಕರಿಗಿರುವ ಸೌಲಭ್ಯ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಸರಕಾರವನ್ನು ಒತ್ತಾಯಿಸಿದರು. 

ಶುಕ್ರವಾರ ಮಧ್ಯಾಹ್ನ ಸ್ಥಳೀಯ ಬನಶಂಕರಿ ದೇವಿ ದೇವಸ್ಥಾನದ ಆವರಣದಲ್ಲಿ ನೇಕಾರರ ಸಮಸ್ಯೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಐದು ವರ್ಷಗಳಲ್ಲಿ ಅತಿವೃಷ್ಟಿ-ಅನಾವೃಷ್ಟಿ ಹಾಗೂ ಕಳೆದೆರಡು ವರ್ಷಗಳ ಕೊರೋನಾ ಸಂಕಷ್ಟದಿಂದ ನರಳಾಡುತ್ತಿರುವ ನೇಕಾರನ ಬದುಕು ತತ್ತರಿಸಿ ನೇಕಾರರು ರಾಜ್ಯಾದ್ಯಂತ ನೇಣಿಗೆ ಶರಣಾಗುತ್ತಿದ್ದು ರಾಜ್ಯ ಭಾಜಪ ಸರ್ಕಾರ ಇವರ ಸಮಸ್ಯೆಗಳ ಕಡೆಗೆ ಗಮನ ಹರಿಸದೆ ಅವರ ಕುಟುಂಬಕ್ಕೆ ಪರಿಹಾರವನ್ನೂ ಕೂಡ ನೀಡದೆ ತಾತ್ಸಾರ ಭಾವನೆ ತೋರುತ್ತ ಪಾರದರ್ಶಕ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು. 

ಕೊರೋನಾ ವೈರಸ್ ರೋಗದಿಂದ ಬೃಹತ್ ಕೈಗಾರಿಕೆಗಳನ್ನು ಹೊರತುಪಡಿಸಿದರೆ ಕೆಚ್ ಡಿಸಿ, ಖಾದಿ ಗ್ರಾಮೋದ್ಯೋಗ, ಪಾಲಿಷ್ಟರ್, ರೇಷ್ಮೆ, ಸಣ್ಣ ಹಾಗೂ ಗುಡಿ ಕೈಗಾರಿಕೆಗಳಲ್ಲದೇ ನೇಕಾರ ಹಾಗೂ ಮಾಲೀಕರು ಕೇಂದ್ರದ ನೋಟ್ ಬ್ಯಾನ್ ಹಾಗೂ ಜಿಎಸ್ಟಿಯ ಬರೆಯಿಂದಲೂ ನಲುಗಿ ಹೋಗಿದ್ದು, ಅರ್ಹ ಫಲಾನುಭವಿಗಳಿಗೆ ಕುಟುಂಬ ಒಂದಕ್ಕೆ 10ಸಾವಿರ ರೂಗಳನ್ನು ನೀಡಬೇಕಲ್ಲದೆ ಮತ್ತು ಅಂದಿನ ಸಿದ್ದರಾಮಯ್ಯ ಸರ್ಕಾರ ನೇಕಾರರ ಬಗ್ಗೆ ಕೈಗೊಂಡ ಸಾಲ ಹಾಗೂ ಬಡ್ಡಿ ಸಂಪೂರ್ಣ ಮನ್ನಾ ಮಾಡಿದಂತೆ ತಮ್ಮ ಸರ್ಕಾರವೂ ಕಂತುಗಳನ್ನು ತುಂಬಲಿಕ್ಕೆ 01ವರ್ಷದ ಕಾಲಾವಧಿ ಮತ್ತು ಇದಕ್ಕೊಂದು ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ಅಧ್ಯಯನ ಮಾಡಿಸಿ ನೇಕಾರಿಕೆ ಹಾಗೂ ನೇಕಾರ ಪುನಶ್ಚೇತನಗೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.  

ಕಾಂಗ್ರೆಸ್ ನೇತಾರರಾದ ಮಲ್ಲಪ್ಪ ಭಾವಿಕಟ್ಟಿ, ಶಂಕರ್ ಸೊನ್ನದ್, ರಾಜೇಂದ್ರ ಭದ್ರನ್ನವರ್ ಮಾತನಾಡಿ ಇಂದಿನ ಬೆಲೆಗಳ ಅನುಸಾರವಾಗಿ ಪ್ರತಿ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕೆಂದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ್ ದೇಸಾರಹಟ್ಟಿ, ಮಲ್ಲಪ್ಪ ಸಿಂಗಾಡಿ, ಜಾವೇದ್ ಭಾಗವಾನ, ಈಶ್ವರ ಚಮಕೇರಿ, ಲಕ್ಕಪ್ಪ ಸಂಶಿ, ರಾಜು ಬಾವಿಕಟ್ಟಿ, ಸಿದ್ದು ಬೇನೂರ್, ಸತ್ಯಪ್ಪ ಮಗದುಮ್, ಶ್ರೀಶೈಲಪ್ಪ ಮೇನಿ, ಚಿದಾನಂದ ಗಾಳಿ, ಹೊಳೆಪ್ಪ ಬಾಡಿಗಿ, ವಿನೋದ್ ಸಿಂಪಿ, ದಾದಾ ಕರೋಶಿ, ಬಸವರಾಜ್ ಭೂದೋಡಗಿ, ಶಿವಾನಂದ್ ಮೂಡಲಗಿ, ಶಿವಾನಂದ ನಾಗರಾಳ ಇನ್ನು ಮುಂತಾದವರಿದ್ದರು. 

ಪ್ರತಿ ಸಲ ಸರ್ಕಾರಗಳು ನೇಕಾರರನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿವೆಯೇ ಹೊರತು, ನೇಕಾರರ ಪರ ಕಾಳಜಿ ತೋರಿಲ್ಲ. ಕಳೆದೆರಡು ವರ್ಷಗಳ ಕೊರೋನಾದಿಂದ ನೇಕಾರಿಕೆಯ ಬಟ್ಟೆಗಳಿಗೆ ಗ್ರಾಮೀಣ ಪ್ರದೇಶವೇ ಮಾರುಕಟ್ಟೆ. ಬಟ್ಟೆ ವ್ಯಾಪಾರಕ್ಕೆ ನಿಷೇಧವಿರುವುದರಿಂದ ಮಾರಾಟವಿಲ್ಲದೆ ಮಾಲೀಕರು, ಕೆಲಸವಿಲ್ಲದೇ ನೇಕಾರರು ಬೀದಿಪಾಲಾಗಿದ್ದಾರೆ. ಕೇಂದ್ರ ಸರ್ಕಾರ ದೇಶದ ಕಚ್ಚಾ ನೂಲನ್ನು ಹೊರದೇಶಕ್ಕೆ ರಫ್ತು ಮಾಡಿದರ ಪರಿಣಾಮ ಸ್ಥಳೀಯರಿಗೆ ಒಂದು ಬಂಡಲ್ ನೂಲಿಗೆ 500 ರಿಂದ 1ಸಾವಿರ.ರೂಗಳಿಗೆ ಏರಿಕೆ ಕಂಡು ಮಾರುಕಟ್ಟೆಯಲ್ಲಿ ನಮ್ಮ ಬಟ್ಟೆ ದರ ದುಬಾರಿಯಾಗಿ ಇತರ ಕಂಪನಿಗಳ ಪೈಪೋಟಿಯಲ್ಲಿ ಮಾರಾಟವಾಗದೇ ನಷ್ಟ ಅನುಭವಿಸುವಂತಾಗಿದೆ. ನೇಕಾರರಿಗೆ ಮಾಜಿ ಸಚಿವೆ ಉಮಾಶ್ರೀ ಅವರು ತಮ್ಮ ಅವಧಿಯಲ್ಲಿ 1ಸಾವಿರ ಕೋಟಿ ಹಣ ಒದಗಿಸಿದ್ದರು. ಪ್ರಸ್ತುತ ಸರ್ಕಾರ ನೇಕಾರ ಹಾಗೂ ರೈತ ಸರ್ಕಾರದ ಎರಡು ಕಣ್ಣುಗಳಿದ್ದಂತೆ ಎನ್ನುವುದು ಭಾಷಣಕಷ್ಟೇ ಸೀಮಿತ. ಶಾಸಕ ಸಿದ್ದು ಸವದಿ ಹೆಚ್ಚಿನ ಅನುದಾನ ತರುವುದರೊಂದಿಗೆ ನೇಕಾರರ ಪರ ಕೆಲಸ ಮಾಡಿ ತೋರಿಸಲಿ.  

ನೀಲಕಂಠ ಮುತ್ತೂರ್‌. ಜಿಲ್ಲಾ ನೇಕಾರ ನೇತಾರ. 

ಸುದ್ದಿ ಓದಿ