ಮಹಲಿಂಗಪುರ

ಜೆಸಿ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ: ಪತ್ರಿಕೆಗಳು ಮತ್ತು ಪತ್ರಕರ್ತರ ವೇಷ ಧರಿಸಿ ವಿಶೇಷ ಗೌರವ

ಜೆಸಿ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ: ಪತ್ರಿಕೆಗಳು ಮತ್ತು ಪತ್ರಕರ್ತರ ವೇಷ ಧರಿಸಿ ವಿಶೇಷ ಗೌರವ

ಮಹಾಲಿಂಗಪುರ 12: ಸ್ಥಳೀಯ ಜೆಸಿ ಶಾಲೆಯ ಪುಟ್ಟ,ಪುಟ್ಟ ಮಕ್ಕಳು ದಿನ ಪತ್ರಿಕೆಗಳ ವೇಷ ಹಾಗೂ ಪತ್ರಕರ್ತರ ವೇಷ ಧರಿಸಿ ಪ್ರತಿ ಪತ್ರಿಕೆಗಳು ಮತ್ತು ಪತ್ರಕರ್ತರ ಹಿರಿಮೆ ಗರಿಮೆಗಳನ್ನು ಪ್ರಸ್ತುತಪಡಿಸಿ ಮಹಾಲಿಂಗಪುರದ ಪತ್ರಕರ್ತರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿ ಗಮನ ಸೆಳೆದರು. 

ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆಯ ವೇಷವನ್ನು ಮೊಹಮ್ಮದ್ ಬೂದಿಹಾಳ ಧರಿಸಿ ಉಳಿದಂತೆ ನಾಡಿನ ಪ್ರಖ್ಯಾತ ಪತ್ರಿಕೆಗಳ ವೇಷವನ್ನು ಮಕ್ಕಳು ಧರಿಸಿದ್ದರು. 

ಶಾಲೆಯ ಪ್ರೌಢ ವಿಭಾಗದ ವರ್ಷಿತಾ ಉತ್ತಂಗಿ, ಸಾಕ್ಷಿ ಗೊಂದಿ, ಭವಾನಿ ಚಿಮ್ಮಡ, ಅನುಶ್ರೀ ಹುದ್ದಾರ, ವೇದಿಕಾ ಜಾನಕೂನವರ, ಕೃಪಾ ಕುರಹಟ್ಟಿ  ‘ಪತ್ರಿಕೆಗಳು ಸಂವಿಧಾನದ ಸಾರಥಿ’ ಎಂಬ ವಿಷಯದ ಮೇಲೆ ಸಂವಾದ ನಡೆಸಿ, ಟಿ.ವಿ., ಮೊಬೈಲ್‌ಗಳು ಅತಿರೇಕ,ಭಯಾನಕ, ಉತ್ಪ್ರೇಕ್ಷಿತ ವರದಿ ಭಿತ್ತರಿಸುತ್ತಾ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ದು, ಸದಾ ಶಾಂತ, ಸೌಮ್ಯವಾಗಿ ವರದಿ ಭಿತ್ತರಿಸುವ ಪತ್ರಿಕೆಗಳು ಸರ್ವರ ಪ್ರೀತಿಯ ಮಾಧ್ಯಮವಾಗಿದ್ದು, ಸ್ವಸ್ಥ ಸಾಮಾಜ, ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಪತ್ರಿಕೆಗಳನ್ನು ಓದಲೇಬೇಕೆಂದು ತಿಳಿಸಿದರು.  

ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಪತ್ರಕರ್ತರಾದ ಜಯರಾಮ ಶೆಟ್ಟಿ, ಚಂದ್ರಶೇಖರ ಮೋರೆ, ಲಕ್ಷ್ಮಣ ಕಿಶೋರಿ, ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿದರು. ಜಿಲ್ಲಾ ಕಾನಿಪ ಸದಸ್ಯ ಎಸ್‌.ಎಸ್‌.ಈಶ್ವರ​‍್ಪಗೋಳ, ಕಾರ್ಯದರ್ಶಿ ಹನಮಂತ ನಾವಿ, ಮಹೇಶ ಆರಿ,ಮೀರಾ ತಟಗಾರ, ನಾರನಗೌಡ ಉತ್ತಂಗಿ, ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ, ನಿರ್ದೇಶಕರಾದ ಈಶ್ವರ ಮುರಗೋಡ, ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ ಮತ್ತು ಗುರುವೃಂದ , ವಿದ್ಯಾರ್ಥಿಗಳಿದ್ದರು. 

ವರ್ಷಿಣಿ ಸಗರಿ ಮತ್ತು ಸಂಗಡಿಗರು  ಪ್ರಾರ್ಥಿಸಿ, ಸೌಮ್ಯ ಕೌಜಲಗಿ, ಸಂಜನಾ ಮಡ್ಡೆನ್ನವರ ನಿರೂಪಿಸಿದರು. 


ಸುದ್ದಿ ಓದಿ