ಮಹಲಿಂಗಪುರ

ಪ್ರಸಕ್ತ ವರ್ಷದ ಚೊಚ್ಚಲ ಬಜೆಟ್ ಅಧ್ಯಕ್ಷ ಸಿದ್ದುಗೌಡ ಪಾಟೀಲ್ ಮಂಡನೆ

ಪ್ರಸಕ್ತ ವರ್ಷದ ಚೊಚ್ಚಲ ಬಜೆಟ್ ಅಧ್ಯಕ್ಷ ಸಿದ್ದುಗೌಡ ಪಾಟೀಲ್ ಮಂಡನೆ
ಬೆಳಗಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿದ್ದುಗೌಡ ಪಾಟೀಲ್ ಪಟ್ಟಣಕ್ಕೆ ತಮ್ಮ ಚೊಚ್ಚಲ ಬಜೆಟ್ ಅನ್ನು ಮಂಡಿಸಿದರು.

ಮಹಾಲಿಂಗಪುರ 2: ಮುಧೋಳ ತಾಲೂಕಿನ ಸಮೀಪದ ಬೆಳಗಲಿ ಪಟ್ಟಣ ಪಂಚಾಯಿತಿಯ 202-21ನೇ ಸಾಲಿನ ಪರಿಷ್ಕ್ರುತ ಮತ್ತು 2021-22 ನೇ ಸಾಲಿಗೆ ಆಯವ್ಯಯಗಳ ಅಂದಾಜು ಮೊದಲ ಸಭೆಯು ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 30 ರಂದು ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಅವರು ಬಜೆಟ್ ಬಗೆಗೆ ವಿವರಣೆ ನೀಡುತ್ತಾ, ಬೆಳಗಲಿ ಪಟ್ಟಣ ಪಂಚಾಯತ್ ಒಟ್ಟು 6,73,57,600 ರೂ.ಗಳಲ್ಲಿ, 6,71,27,600 ಒಟ್ಟು ರೂಗಳನ್ನು ವಿವಿಧ ಬಾಬತ್ತುಗಳಲ್ಲಿ ಬಳಸಲು ಖರ್ಚ ಹಾಕಲಾಗಿ ಒಟ್ಟಾರೆ ಪಟ್ಟಣ ಪಂಚಾಯಿತಿಗೆ 02ಲಕ್ಷ 30ಸಾವಿರ ರೂ.ಗಳ ನನ್ನ ಮೊದಲ ಉಳಿತಾಯದ ಬಜೆಟ್ ಇದಾಗಿದೆ. ಇದರಲ್ಲಿ ಪ.ಜಾತಿ, ಪ.ಪಂಗಡದ ಕಲ್ಯಾಣ ನಿಧಿ 55,433ರೂ, ಸಾಮಾಜಿಕ ಕಲ್ಯಾಣ ನಿಧಿ 16,675ರೂ, ದೈಹಿಕ ಅಂಗವಿಕಲ ಕಲ್ಯಾಣ ನಿಧಿ 11,500ರೂ, ಕ್ರೀಡಾ ನಿಧಿಗೆ 2300ರೂಗಳನ್ನು ಇಡಲಾಗಿದೆ ಎಂದರು. 

ಬೆಳಗಲಿ ಪಟ್ಟಣದಲ್ಲಿ ಕಡಿಮೆ ಓಲ್ಟೇಜ್ ಹೆಚ್ಚು ಬೆಳಕು ನೀಡುವ ಆಟೋಮೆಟಿಕ್ ಎಲ್‍ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ಉದ್ಯಾನವನಗಳ ಅಭಿವೃದ್ಧಿ ಅಲ್ಲದೆ ಬಯಲು ಮುಕ್ತ ಶೌಚಕ್ಕಾಗಿ ಸಾರ್ವಜನಿಕ ಶೌಚಾಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.ಬಹಳ ವರ್ಷಗಳಿಂದ ಅಭಿವೃದ್ಧಿ ಕಾಣದೆ ಮಹಾಲಿಂಗಪೂರದಿಂದ ಬೆಳಗಲಿ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡ 21 ಸರ್ವೇ ನಂಬರ್‍ಗಳ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. 

ಈ ಬಜೆಟ್ ನಲ್ಲಿ ಪ್ರಮುಖವಾಗಿ ವಿವಿಧ ಚರಂಡಿಗಳ ಕಾಮಗಾರಿಗಳಿಗಾಗಿ 56ಲಕ್ಷ, ರಸ್ತೆಗಳು, ಕಲ್ಲುಹಾಸುಗಳು ಮತ್ತು ಪಾದಚಾರಿ ಮಾರ್ಗಗಳಿಗಾಗಿ 30ಲಕ್ಷ, ಬೀದಿ ದೀಪಗಳ ಎಸ್ ಎಫ್ ಸಿ ವಿದ್ಯುಚ್ಛಕ್ತಿ ಅನುದಾನ ಹಾಗೂ ಬೀದಿ ದೀಪಗಳು ಹಾಗೂ ಸಂಚಾರಿ ದೀಪಗಳು ಇತ್ಯಾದಿಗೆ 65ಲಕ್ಷ, ನೀರು ಸರಬರಾಜು, ಸೌಕರ್ಯ, ದುರುಸ್ತಿ, ನಿರ್ವಹಣೆ ಮತ್ತು ಇನ್ನಿತರ ಒಟ್ಟು ಅಂದಾಜು 1ಕೋ 58ಲಕ್ಷ, ವೇತನ ಭತ್ಯೆ ಸೌಲಭ್ಯಗಳು ಸೇರಿದಂತೆ 42 ಲಕ್ಷಗಳಲ್ಲದೆ ಇನ್ನಿತರೆ ಖರ್ಚಿನ ಬಾಬತ್ತು ಪಟ್ಟಣದ ಒಟ್ಟಾರೆ ಅಭಿವೃದ್ಧಿಯ ಪಕ್ಷಿನೋಟವಾಗಿದೆ ಎಂದರು.

ಸಭೆಯಲ್ಲಿ ಬೆಳಗಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಚಾಂಬರ್, ಪ.ಪಂ ಮುಖ್ಯಾಧಿಕಾರಿ ವಿ.ಎಸ್ ಕಲಾದಗಿ ಸ್ವಾಗತಿಸಿ ವಂದಿಸಿದರು. ಆಡಳಿತಾರೂಢ ಪ.ಪಂ ಸದಸ್ಯರಾದ ಅಶೋಕ್ ಸಿದ್ದಾಪುರ, ಪಾಂಡಪ್ಪ ಸಿದ್ದಾಪುರ, ಮಹದೇವ್ ಮುರನಾಳ, ಮಹಾಲಿಂಗಪ್ಪ ಪುರಾಣಿಕ, ಕಾಂಗ್ರೆಸ್ ಪಕ್ಷದ ಕರೆಪ್ಪ ಬಾವಿಮನಿ, ರೈತ ಸಂಘದ ಲಕ್ಷ್ಮಣ್ ಕಲ್ಲೋಳೆಪ್ಪಗೋಳ ಸಿಬ್ಬಂದಿಗಳಾದ ಪಿ.ಡಿ ನಾಗನೂರ, ಎಸ್ ಜಾಧವ, ಸಚಿನ್ ಕಾಸರ್, ಎಸ್ ಎಸ್ ಹರಿಜನ, ಎಸ್ ಬಿ ಚೌದರಿ, ರಾಜು ಮುಗಳಕೋಡ, ಎ.ಆರ್. ಹನಗಂಡಿ, ಸುನಂದಾ ಸೋನೋನೆ ಇನ್ನು ಮುಂತಾದವರಿದ್ದರು. 

ಸುದ್ದಿ ಓದಿ