ಕೃಷಿ ಪದ್ಧತಿಯಲ್ಲಿ ಸುಧಾರಣೆಯೊಂದಿಗೆ ಸಂರಕ್ಷಿಸಿ: ರಾಜಯೋಗಿನಿ ಬಿ.ಕೆ.ಶಿವಲೀಲಾ
ಮಹಾಲಿಂಗಪುರ : ರಸಗೊಬ್ಬರ, ಕಲುಷಿತ ನೀರು, ಕಸ ಕಡ್ಡಿ, ಹೇರಳ ಕೀಟನಾಶಕ ಬಳಸುವುದರೊಂದಿಗೆ ಮಣ್ಣು ಮಲೀನಗೊಂಡಿದೆ ಎಂದು ಸ್ಥಳೀಯ ಬ್ರಹ್ಮಕುಮಾರಿ ಈಶ್ವರಿ ಕೇಂದ್ರದ ರಾಜಯೋಗಿನಿ ಬಿ.ಕೆ.ಶಿವಲೀಲಾ ಅಕ್ಕನವರು ಖೇದ ವ್ಯಕ್ತಪಡಿಸಿದರು.
ಅವರು ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಮಣ್ಣಿನ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.ಪರಿಶುದ್ದವಾದ ಪ್ರಕೃತಿಯ ಮಣ್ಣು ಇಂದು ನಾವು ನೀವು ಎಲ್ಲರೂ ಸೇರಿ ಸಂರಕ್ಷಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿ ಐನಾಪುರದ ಸಾವಯುವ ಕೃಷಿ ತಜ್ಞ ಬಿ.ಕೆ.ಲಕ್ಷ್ಮಣ ದೇವಪೂಜೆ ಅವರು ಮಾತನಾಡಿ, ಪ್ರಕೃತಿಯ ಕೊಡುಗೆಯನ್ನು ಧೈವದತ್ತವಾದ ಅಂಶವೆಂದು ಪರಿಗಣಿಸಿ ನಾವು ಕರ್ತವ್ಯ ಎಸಗಬೇಕೆ ವಿನಃ ನಮ್ಮ ಅತಿ ಆಸೆಯ ಕಾರಣ ಭೂಮಿಯಿಂದ ಹೆಚ್ಚಿನ ಇಳುವರಿಗೆ ದುಸ್ಸಾಹಸ ಪಡಬಾರದು ಮತ್ತು ಕೃಷಿ ಕರ್ಮಯೋಗಿ ಎನಿಸಿಕೊಳ್ಳಲು ಧರ್ಮಪಾಲನೆ ಅಗತ್ಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಮಾತನಾಡಿ, ಇಂದಿನ ಸ್ಥಿತಿಯಲ್ಲಿ ನಗರ, ಪಟ್ಟಣ ಮತ್ತು ಗ್ರಾಮೀಣ ಹೊಲಗದ್ದೆಗಳಲ್ಲಿ ರೈತ ಬಾಂಧವರನ್ನು ಸೇರಿಸಿ ಮಣ್ಣಿನ ಸಂರಕ್ಷಣೆಗಾಗಿ ಪುರಸಭೆ ಮತ್ತು ಓಂ ಶಾಂತಿ ಕೇಂದ್ರದ ಸಹಯೋಗದಲ್ಲಿ ತಿಳುವಳಿಕೆ ಕಾರ್ಯಕ್ರಮ ಆಯೋಜಿಸೋಣ ಎಂದರು.
ಸಾವಯುವ ಕೃಷಿ ತಜ್ಞರಾದ ಬಾಲಚಂದ್ರ ಪಾಟೀಲ ಅವರು ಮಾತನಾಡುತ್ತಾ 1956 ರಿಂದ ಸಾವಯುವ ಕೃಷಿಯ ಉಪಯುಕ್ತತೆಯ ಮಹತ್ವ ನಾಗರಿಕರಿಗೆ ತಿಳಿಸುತ್ತಿದ್ದರು. ಅದರಿಂದ ಆಗುವ ಪ್ರಯೋಜನ ಆಧ್ಯಾತ್ಮ ಚಿಂತನೆ ರೈತ ಬೇಸಾಯ ಸುಧಾರಣೆ ಇಂದು ಅಗತ್ಯವಾಗಿದೆ ಎಂದು ನುಡಿದರು.
ಓಂ ಶಾಂತಿಯ ಕೇಂದ್ರದಿಂದ ಆಧ್ಯಾತ್ಮಕ್ಕೆ ಬಲ ಬಂದಿದೆ. ಮಣ್ಣು, ನೀರು, ನದಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಪತ್ರಕರ್ತ ಜಯರಾಮ ಶೆಟ್ಟಿಯವರು ಅಭಿಪ್ರಾಯಪಟ್ಟರು. ಬ್ರಹ್ಮಕುಮಾರಿ ರಾಜಯೋಗಿನಿ ಶಶಿಕಲಾ ಅವರು ಪ್ರಸ್ತಾವಿಕವಾಗಿ ಮಾತನಾಡಿ, ರಾಮರಾಜ್ಯದ ಕನಸಿನ ನೆನಪು ಮೂಡಿಸಿದರು. ಬಿ.ಕೆ.ಗುರುಬಸಪ್ಪ ಹುಬ್ಬಳ್ಳಿ ಸ್ವಾಗತಿಸಿದರೆ, ಬಿ.ಕೆ.ಶಿವಕನ್ಯಾ ಪರಿಚಯಿಸಿದರು ಹಾಗೂ ಕುಮಾರಿ ನಿಧಿ ಆನಂದ ಕನಕರಡ್ಡಿ ಪ್ರಾರ್ಥಿಸಿದರು.
ವರ್ಷಾ, ನಿಧಿ ಸಂತೋಷ ಕುರಿ ಭರತನಾಟ್ಯ ಪ್ರದರ್ಶನ ಮಾಡಿದರು. ವಿಶ್ವ ಮಣ್ಣಿನ ಮಹತ್ವವನ್ನು ಬಿ.ಕೆ.ಸಿದ್ದೇಶ್ವರ ಸೋನಾರ ಅರುಹಿದರು. ಗುರುಲಿಂಗಪ್ಪ ಹುಬ್ಬಳ್ಳಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಡಾ. ಹರ್ಷಿತಾ ಕನಕರಡ್ಡಿ, ಬಿ.ಕೆ.ಮಹಾದೇವ, ಬಿ.ಕೆ.ಲಕ್ಕಪ್ಪ ಬಬಲಿ, ಆನಂದ ಮುಗಳ್ಯಾಳ ಮುಂತಾದವರು ಉಪಸ್ಥಿತರಿದ್ದರು.