ಮಹಾಲಿಂಗೇಶ್ವರರ ಮೋಡಿ ದಾಖಲೆಗಳ ಕನ್ನಡಅನುವಾದಿತಕೃತಿ ಲೋಕಾರ್ಪಣೆ
ಶ್ರೀಮಠದ ಬಗ್ಗೆ ಹೊಸಬೆಳಕು ; ಮಹಾಲಿಂಗೇಶ್ವರ ಅಭಿಮತ
ಮಹಾಲಿಂಗಪುರ : ಇದುವರೆಗೆ ಮೋಡಿ ಲಿಪಿಯಲ್ಲಿದ್ದ ಸ್ಥಳೀಯ ಮಹಾಲಿಂಗೇಶ್ವರ ಮಠದ ಏಕ ಸಾಮಿತ್ವ, ಗುರು ಪರಂಪರೆ, ಮುಧೋಳದ ಘೋರೆ್ಡ ಮಹಾರಾಜರು ಮಠಕ್ಕೆ ನೀಡಿದ ಭೂಮಿಯದಾನ ಪತ್ರ, ಸನ್ನದು ಪತ್ರಗಳು, ಉಯಿಲು ಪತ್ರಗಳು, ಢಪಳಾಪುರ ಮಠದ ನೋಂದಣಿ ಪತ್ರ, ನಿಕಾಲು ಪತ್ರಗಳು, ಚಿಮ್ಮಡದಜಮೀನುದಾಖಲೆ, ಮಠದಲ್ಲಿರುವ ತಾಳೆಗರಿಗಳ ಹಸ್ತಪ್ರತಿಗಳು ಹೀಗೆ ಮಠಕ್ಕೆ ಸೇರಿದ ಐತಿಹಾಸಿಕ ಅಮೂಲ್ಯ ದಾಖಲೆಗಳ ಕನ್ನಡಅನುವಾದಿತಡಾ.ಸಂಗಮೇಶಕಲ್ಯಾಣಿ ವಿರಚಿತಕೃತಿ‘ಮೋಡಿದಾಖಲೆಯಲ್ಲಿ ಜಗದ್ಗುರು ಮಹಾಲಿಂಗೇಶ್ವರ ಸಂಸ್ಥಾನ ಮಠ,ಮಹಾಲಿಂಗಪುರ’ ಎಂಬ ಕೃತಿಯನ್ನು ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಲೋಕಾರೆ್ಣಸೋಮವಾರಮಾಡಿದರು.
ಪ್ರಥಮ ಶ್ರಾವಣ ಸೋಮವಾರಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಶ್ರೀ ಮಹಾಲಿಂಗೇಶ್ವರದೇವಾಲಯದಲ್ಲಿಬೆ. 5 ಗಂಟೆಗೆಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿಕೃತಿ ಬಿಡುಗಡೆ ಮಾಡಲಾಯಿತು.ಅವರ ಮತ್ತೊಂದುಕೃತಿಅವ್ವ ಹೇಳಿದ ಕಥೆಗಳು ಇದೇ ಸಂದರ್ಭದಲ್ಲಿ ಬಿಡುಗಡೆಯಾಯಿತು. ಶಿಕ್ಷಕ ಬಸವರಾಜ ಮೇಟಿ, ಮಠದಉಸ್ತುವಾರಿಅಧಿಕಾರಿಈಶ್ವರಅರ್ಚಕರಾದ ಸಿದ್ದಯ್ಯ, ಶ್ರೀಶೈಲ, ಮಂಜುನಾಥಇದ್ದರು.
1. ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷವಾಗಿರುವ ಬೆಳೆಯುವ ಜಡೆಯಒಡೆಯಶ್ರೀ ಮಹಾಲಿಂಗೇಶ್ವರ ಮಠದಲ್ಲಿದ್ದ ಮೋಡಿ ಲಿಪಿಯ ದಾಖಲೆಗಳನ್ನು ಕನ್ನಡಕ್ಕೆ ಅನುವಾದಿಸಿ ಬೆಳಕು ಚೆಲ್ಲಿದ ಸಾಹಿತಿಡಾ. ಸಂಗಮೇಶ ಕಲ್ಯಾಣಿಯವರಕಾರ್ಯ ಅವಿಸ್ಮರಣೀಯ
-ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ಮಹಾಲಿಂಗೇಶ್ವರ ಸಂಸ್ಥಾನ ಮಠ, ಮಹಾಲಿಂಗಪುರ.
2. ಶ್ರೀ ಮಹಾಲಿಂಗೇಶ್ವರ ಮಠದ ದಾಖಲೆಗಳ ಮೇಲೆ ಬೆಳಕು ಚೆಲ್ಲಿದ ಈ ಕೃತಿಯ ಪ್ರತಿಗಳು ಪ್ರತಿಯೊಬ್ಬ ಭಕ್ತನಿಗೆ ಸಿಗುವಂತಾಗಬೇಕು ಹಾಗಾಗಿ ಇನ್ನಷ್ಟು ಪ್ರತಿಗಳು ಮುದ್ರಣವಾಗಲಿ
-ಶಿವಾನಂದ ತಿಪ್ಪಾ, ಮುಖಂಡರು.
3. ಜಂಗಮರು ಮತ್ತು ಜಗದ್ಗುರುಗಳಿಂದ ಆಶಿರ್ವಾದ ಪಡೆಯಬೇಕೇ ವಿನಃ ಮತ್ತೇನನ್ನುಅಪೇಕ್ಷಿಸಬಾರದು-ಸಾಹಿತಿಡಾ. ಸಂಗಮೇಶ ಕಲ್ಯಾಣಿಎಂದು ಹೇಳಿದರು.