ಚಿಕ್ಕೋಡಿ

ಉನ್ನತ ಗುರಿ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ'

ಉನ್ನತ ಗುರಿ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ'

ಮಾಂಜರಿ 16: ಸಮಾಜದ ಏಳೆಗಾಗಿ ಹಾಗೂ ತಮ್ಮ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಯುಪಿಎಸ್ ಸಿ, ್ಘ ಕೆ ಪಿ ಎಸ್ ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿ ಉತ್ತಮವಾದ ಜೀವನ ರೂಪಿಸಿಕೂಂಡು ಜೊತೆಗೆ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದ ಚಿಕ್ಕೋಡಿಯ ಕೆಎಲ್‌ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಎಂ.ಸಿ.ಎ.ವಿಭಾಗಮುಖ್ಯಸ್ಥರು ಡಾ.ಸುನೀಲ ಸಿ.ಸಿಂಧೆ ಹೇಳಿದರು. 

ಅವರು ಶನಿವಾರರಂದು  ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆ.ಎಲ್‌.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯ,  ಅಂಕಲಿ.2025-2026 ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ಹಾಗೂ ಎನ್‌.ಎಸ್‌. ಎಸ್‌. ಚಟುವಟಿಕೆಗಳ ಸಮಾರೋಪ ಮತ್ತು ಬಿ.ಎ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ  ಸುರೇಶ್ ಎಸ್ ಪಾಟೀಲ್  ವಹಿಸಿದರು.  

ಪ್ರಾಚಾರ್ಯರಾದ ಎಂ.ಎಸ್‌. ಕಾನಡೆಯವರು  ಅಧ್ಯಕ್ಷೀಯ ಪರ ನುಡಿಗಳನ್ನಾಡುತ್ತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜೀವನ ಸುಲಭವಲ್ಲ ಆದರೆ ಅಭ್ಯಾಸ, ಶಿಸ್ತು, ಆತ್ಮವಿಶ್ವಾಸ ಮತ್ತು ಸಹನೆಯಿಂದ ನಾವು ಎಲ್ಲಾ ಕಷ್ಟಳನ್ನು ಜಯಿಸಬಹುದು. ಹಾಗೆಯೇ ಶಿಕ್ಷಣವೆಂದರೆ ಕೇವಲ ಅಂಕಗಳು ಮತ್ತು ವಿಷಯಗಳಲ್ಲ, ನಿಜವಾದ ಶಿಕ್ಷಣವು ಮೌಲ್ಯಗಳು ತಂಡದ ಮನೋಭಾವ, ಆತ್ಮವಿಶ್ವಾಸ, ಜವಾಬ್ದಾರಿ, ಮತ್ತು ಮಾನವೀಯತೆಯನ್ನು ಕಲಿಸುತ್ತದೆ ಎಂದು ಹೇಳಿದರು. ಪ್ರೊ. ಆರ್‌. ಎ. ಕೆರಗುಟೆ ಸ್ವಾಗತಿಸಿದರು. ಪ್ರೊ.ಪಿ.ಎ.ಕಾಟೆ ವಂದಿಸಿದರು. ಪ್ರೊ. ಎಸ್‌. ಬಿ. ಬೊಮ್ಮನ್ನವರ್ ಅತಿಥಿಗಳ ಪರಿಚಯವನ್ನು ಮಾಡಿದರು. ಪ್ರೊ. ಎಲ್‌.  ರಾ. ಮೇತ್ರಿ ವಾರ್ಷಿಕ ವರದಿಯನ್ನು ಓದಿದರು. ಪ್ರೊ. ಬಿ.ಎ ವಾಗ್ಮರೆ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಿದರು. 

ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರವನ್ನು ಬಿಕಾಂ ತೃತೀಯ ವರ್ಷದ ವಿದ್ಯಾರ್ಥಿನಿಯಾದ ಕವಿತಾ ಹಿಡಕಲ್ ಅವರು ಪಡೆದುಕೊಂಡರು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕ ಪುರಸ್ಕಾರವನ್ನು ನಾಗರಾಜ್ ಹೊಂಡಪ್ಪನವರ್ ಹಾಗೂ ಅತ್ಯುತ್ತಮ ಸೇವಾ ಸೇವಕಿ ಪುರಸ್ಕಾರವನ್ನು ಶ್ರೀದೇವಿ ಆಲಾಜ ಅವರು ಪಡೆದುಕೊಂಡಿದ್ದಾರೆ. ಕ್ರೀಡಾ ವಿಭಾಗದಲ್ಲಿ ಜನರಲ್ ಚಾಂಪಿಯನ್ನಾಗಿ ಓಂಕಾರ್  ಸಾಳುಂಕೆ ಮತ್ತು ನಿಖಿಲ್ ಕೋಳಿ, ಸುಶ್ಮಿತಾ ಪಿರಾಜೆ ಅವರು ಪಡೆದುಕೊಂಡಿದ್ದಾರೆ.

ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು ಪ್ರೊ. ಎನ್‌. ಆರ್‌. ಉಮರಾಣಿ, ಕ್ರೀಡಾಗದ ಮುಖ್ಯಸ್ಥರು ವಾಯ್‌. ಬಿ ಮಾಚಕನೂರ, ಸಂಸ್ಕೃತಿ ಶಾಲೆಯ ಮುಖ್ಯಸ್ಥರಾದ ಮಾಹುವಾ ಮೇಡಂ, ಶಾರದಾ ದೇವಿ ಕೋರೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊಫೆಸರ್ ಪಿ. ಎನ್‌.ತಳವಾರ  ಶಾರದಾ ಕೋರೆ ಪ್ರೌಢಶಾಲೆಯ ಮುಖ್ಯಸ್ಥರಾದ ಜೆ.ಎಸ್‌. ತಮಗೊಂಡ ಹಾಗೂ ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ