ಬಳ್ಳಾರಿ

ರಾಷ್ಟ್ರಕವಿ ಕುವೆಂಪು, ಜಕಣಾಚಾರಿ ಸಂಸ್ಮರಣಾ ಜಯಂತಿಯ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆ

ರಾಷ್ಟ್ರಕವಿ ಕುವೆಂಪು, ಜಕಣಾಚಾರಿ ಸಂಸ್ಮರಣಾ ಜಯಂತಿಯ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆ

ಬಳ್ಳಾರಿ 21: ರಾಷ್ಟ್ರಕವಿ ಕುವೆಂಪು ಜಯಂತಿ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಜಯಂತಿಯನ್ನು ಯಾವುದೇ ಜಾತಿ ಸೀಮಿತಗೊಳಿಸದೇ ಎಲ್ಲಾ ಸಮುದಾಯವರ್ಗದವರು ಜೊತೆಗೂಡಿ ಇವರ ಜಯಂತಿಯನ್ನು ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಅವರು ಹೇಳಿದರು. 

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 

ರಾಷ್ಟ್ರಕವಿ ಕುವೆಂಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಆವರಣದಲ್ಲಿ ಡಿ.29ರಂದು ಬೆಳಗ್ಗೆ 9ಕ್ಕೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಚಿತ್ರಕಲಾ ಪ್ರದರ್ಶನ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಸಭೆಯಲ್ಲಿ ಅವರು ತಿಳಿಸಿದರು.   

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಜಯಂತಿಯು 2022ನೇ ಜ.01ರಂದು ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಲಾಗುವುದು. ಶಿಲ್ಪಕಲಾ ಪ್ರದರ್ಶನ ಏರಿ​‍್ಡಸಿ ವಿಜೇತರಾದವರಿಗೆ ಸನ್ಮಾನ ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ