ವಾಲ್ಮೀಕಿ ಜಾತ್ರೆಯ ಕುರಿತು ಪೂರ್ವಭಾವಿ ಸಭೆ
ರೋಣ 13: ಪಟ್ಟಣದ ಗದಗ ರಸ್ತೆಯ ಗಡಗಿಯವರ ಪೇಟ್ರೊಲ್ ಬಂಕದಿಂದ ಜಗದ್ಗುರುಗಳು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿಗಳನ್ನ ಸ್ಕೂಟರ್/ಬೈಕ್ ರ್ಯಾಲಿಯಿಂದ ಮುಖಾಂತರ ಸ್ವಾಗತ ಮಾಡುತ್ತ ಮುಲ್ಲನಬಾವಿ ರಸ್ತೆಗಳ ಮೂಲಕ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಮಹರ್ಷಿ ವಾಲ್ಮೀಕಿ ಜಾತ್ರೆ ನಮ್ಮ ಸಮುದಾಯದ ಅಸ್ಮಿತೆ,ಕಾರಣ ಕಳೆದ ನಾಲ್ಕುವರ್ಷಗಳಿಂದ ಸಮುದಾಯವನ್ನು ಒಂದೆ ವೇದಿಕೆಗೆ ತಂದು ಆ ಮೂಲಕ ಸಮುದಾಯಕ್ಕೆ ಸಿಗಬೇಕಾದ ಸಂವಿಧಾನಿಕ ಹಕ್ಕುಗಳಿಗೆ ಆಗ್ರಹಿಸುವ ಭೃಹತ್ ವೇದಿಕೆಯಾಗಿತ್ತು.
ಇದು ನಿರಂತರವಾಗಿ ಮುಂದುವರೆಯಬೇಕು ಮಹತ್ಕಾರ್ಯ ನಿಮ್ಮೇಲ್ಲರ ಸಹಕಾರ ಬೆಂಬಲದಿಂದ ಮಹರ್ಷಿ ವಾಲ್ಮೀಕಿ ಜಾತ್ರೆ ಎಂದರೆ ಜಾಗೃತೆ (ಸಂಘಟನೆ) ಯಾವ ಸಮಾಜ ಜೀವಂತ ಇರುತ್ತದೆಯೊ ಜಾಗೃತವಾಗಿರುತ್ತದೆ ಸತ್ತ ಸಮಾಜ ಸಮಾದಿಯಾಗುತ್ತದೆ. ಆದ್ದರಿಂದ ಸಮುದಾಯ ಪ್ರತಿ ಹಂತದಲ್ಲೂ ಜಾಗೃತವಾಗಿರಬೇಕು ಮತ್ತು ಸಂಘಟಿತರಾಗಬೇಕೆಂದು ಪಾಲ್ಗೊಂಡ ವಾಲ್ಮೀಕಿ ಜನಾಂಗದವರಿಗೆ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬಸವಂತಪ್ಪ ಹೆಚ್ ತಳವಾರ ರೋಣ ತಾಲೂಕ ಮಹರ್ಷಿ ವಾಲ್ಮಕೀ ನಾಯಕ ಸಂಘದ ಅಧ್ಯಕ್ಷರು, ಬಸವರಾಜ ತಳವಾರ ಉಪಾಧ್ಯಕ್ಷರು, ಶ್ರೀಧರ ನಾಯಕ ಪ್ರಧಾನ ಕಾರ್ಯದರ್ಶಿ,ಎಮ್ಎಮ್,ಕಲ್ಯಾಶಾಣಿ ಗೌರವಾಧ್ಯಕ್ಷರು, ಶಿವಕುಮಾರ ತಳವಾರ ಖಜಾಂಚಿ, ಸಂತೋಷ ಪ. ಕಡಿವಾಲರ ಪುರಸಭೆ ಸದಸ್ಯರು.ಹನುಮಪ್ಪ ಹೊಂಬಳ, ವಾಯ್.ಬಿ.ಚೋಳಣ್ಣವರ, ಲಕ್ಷ್ಮಣ್ಣ ಗೌಡಣ್ಣವರ,ಬಲವಂತಪ್ಪ ತಳವಾರ ಕುಮಾರ ಬೇವಿನಗಿಡದ, ಉಮೇಶಗೌಡ ಗೌಡರ ಪರಸು ಜಿಗಳೂರು, ಭೀಮಪ್ಪ ಹ ತಳವಾರ, ಹನಮಪ್ಪ ತಳವಾರ, ಉಮೇಶ ತಳವಾರ, ಶಿವಾನಂದ ಹರಹುಣಶಿ, ರಮೇಶ ಬೇವಿನಗಿಡದ, ಬಾಳಪ್ಪ ಜಾವುರ, ಅಂದಪ್ಪ ತಳವಾರ, ಆರಿ್ಬ,ತಳವಾರ ಸೇರಿದಂತೆ ರೋಣ ತಾಲೂಕಿನ ಸುತ್ತಲಿನ ಎಲ್ಲ ಹಳ್ಳಿಗಳಿಂದ ಬಂದ ಹಿರಿಯರು,ಯುವಕರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಶ್ವಿಗೊಳಿಸಿದರು.ಕೊನೆಯಲ್ಲಿ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.