ವಿವಿಧ ಗಣ್ಯರ, ಸಾಹಿತಿಗಳ, ಕಾರ್ಯಕರ್ತರ, ಮುಖಂಡರ ಪೂರ್ವಭಾವಿ ಸಭೆ
ಮುದ್ದೇಬಿಹಾಳ 09: ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು 67ನೇ ಜನ್ಮ ದಿನಾಚರಣೆಯನ್ನು ತಾಲೂಕಿನ ಹಾಗೂ ಪಟ್ಟದ ಎಲ್ಲ ನಾಗರಿಕರು ಒಟ್ಟಾಗಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ವಿಭಿನ್ನ ರೀತಿಯಲ್ಲಿ ಆಚರಸುವ ಮೂಲಕ ಗೌರವಿಸೋಣ ಎಂದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಅಬ್ದುಲಗಫೂರ ಮಕಾನದಾರ, ಶರಣು ಸಜ್ಜನ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕ ನಾಡಗೌಡರ ಗ್ರಹ ಕಚೇರಿಯಲ್ಲಿ ಪಟ್ಟಣದ ವಿವಿಧ ಗಣ್ಯರ, ಸಾಹಿತಿಗಳ,ಕಾರ್ಯಕರ್ತರ, ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಅತ್ಯಂತ ಸರಳ ಸಜ್ಜನಕೆ ವ್ಯಕ್ತಿತ್ವದ ಹಿರಿಯ ರಾಜಕಾರಿಣಿಗಳು ಮಾತ್ರವಲ್ಲದೇ ಜಾತ್ಯಾತೀತ ಮನೋಭಾವ ಉಳ್ಳುವರು ಯಾವತ್ತಿಗೂ ಆಡಂಭರದ ಹಾಗೂ ವೈಭವಿಕರಣದ ಜೀವನ ನಡೆಸಿದವರಲ್ಲ ಮಾತ್ರವಲ್ಲದೇ ತಮ್ಮ 40 ವರ್ಷ ರಾಜಕೀಯ ಜೀವನದಲ್ಲಿ ಯಾವದೊಂದು ಕಪ್ಪು ಚುಕ್ಕೆ ಇಲ್ಲದೇ ಜನ ಮೆಚ್ಚುವ ಹಾಗೇ ಜೀವನ ನಡೆಸಿದವರು, ಹಾಗಾಗಿ ಅವರು ತಮ್ಮ ಜನ್ಮ ದಿನಾಚರಣೆ ಅದ್ದೂರಿ ಮಾಡಬೇಡಿ ಎಂದು ಹೇಳುತ್ತಿದ್ದಾರೆ ಆದರೇ ಅವರ ಅಪಾರ ಅಭಿಮಾನಿ ಬಳಗ, ತಾಲೂಕಿನ ಎಲ್ಲ ಗಣ್ಯರು, ರಾಜಕೀಯ ಮುಖಂಡರು ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಸೇರಿಕೊಂಡು ಅವರ ಸಾತ್ವೀಕ ಗುಣವನ್ನು ಮೆಚ್ಚಿ ಇಂದು ಎಲ್ಲರೂ ಸೇರಿಕೊಂಡು ನಾಡಗೌಡ 67ನೇ ಜನ್ಮದಿನಾಚರಣೆಯನ್ನು ಅತ್ತಂತ ಅರ್ಥಪೂರ್ಣವಾಗಿ, ಆಚರಿಸಲು ತಿರ್ಮಾನಿಸಲಾಗಿದೆ.
ಈ ವೇಳೆ ಕೆಪಿಸಿಸಿ ವೈದ್ಯಕೀಯ ಘಟಕದಿಂದ ಪಟ್ಟಣದ ಪಿಎಲ್ ಡಿ ಬ್ಯಾಂಕ ಆವರಣದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಭಿರ ಹಾಗೂರಕ್ತದಾನ ಶಿಬಿರ, ಬಡ ರೋಗಿಗಳಿಗೆ ಹಾಲು ಹಣ್ಣು ವಿತರಣೆ, ಕೆಲ ಬಡಕುಟುಂಭಗಳಿಗೆ ವಸ್ತ್ರದಾನ ಹೀಗೆ ಹಲವು ರೀತಿ ಸಾಮಾಜಿಕ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ತಾಲೂಕಿನ ಪಕ್ಷದ ಕಾರ್ಯಕರ್ತರು, ಸಾಹಿತಿಗಳು, ಗಣ್ಯ ಉದ್ಯಮಿಗಳು, ಮುಖಂಡರು ಈ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸುವ ಮೂಲಕ ಯಶಶ್ವಿಗೊಳಿಸಬೇಕು ಎಂದರು. ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ ಬಿ ನಾವದಗಿ, ಶಶಿಕಾಂತ ಮಾಲಗತ್ತಿ, ದಾನಪ್ಪ ನಾಗಠಾಣ, ತಾಲೂಕಾ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜು ಕಲಬುರ್ಗಿ, ನ್ಯಾಯವಾದಿ ಆರ್ ಬಿ ಪಾಟೀಲ,ಮಹಾಂತೇಶ ಗಂಗನಗೌಡ, ಬಸನಗೌಡ ನಾಲತವಾಡ, ಮಲ್ಲು ಅಪರಾಧಿ, ಬಾಪುಗೌಡ ಪೀರಾಪುರ,ಸಂಗಣ್ಣ ಬಿರಾದಾರ(ಜಟಿಸಿ) ಗಣೇಶ ಅನ್ನಿಗೌನಿ,ರಾಜೇಂದ್ರಗೌಡ ರಾಯಗೊಂಡ,ಕುಂಟಪ್ಪ ಗೊಳಿ,ಶ್ರೀಕಾಂತ ಚಲವಾದಿ, ಲಾಡ್ಲೇಮಶ್ಯಾಕ ನಾಯ್ಕೋಡಿ, ಮುತ್ತಿನಶೇಟ್ಟಿ ಗೂಳಿ, ಶ್ರೀಶೈಲ ಮರೋಳ, ರಾಜು ಕೊಂಗಿ, ಮಹಾಂತೇಶ ಗಂಗನಗೌಡರ, ಅಧಿತ ಶೇಟ್ಟಿ, ಅವರೇಶ ಗೂಳಿ ಸೇರಿದಂತೆ ಹಲವರು ಇದ್ದರು.