23 ರಂದು ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ
ಶಿಗ್ಗಾವಿ ಃ ಇದೇ ನ. 23 ರಂದು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ರಾಜನಹಳ್ಳಿಯ 6 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಷರ್ಿ ವಾಲ್ಮೀಕಿ ಬೇಡ ನಾಯಕ ಹಿತಾಭಿವೃದ್ಧಿ ಸಂಘದ ತಾಲೂಕ ಅಧ್ಯಕ್ಷ ಬಸನಗೌಡ ರಾಮನಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ರಾ ಮಹೋತ್ಸವದ ಅಂಗವಾಗಿ ರಾಜನಹಳ್ಳಿ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಲಿದ್ದು ಅಂದು ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಅದ್ದರಿಂದ ತಾಲೂಕ ವಾಲ್ಮೀಕಿ ಸಮಾಜದ ಬಾಂಧವರು, ಸಮಾಜದ ನೌಕರರು, ಯುವ ಸೇನೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಯಲ್ಲಪ್ಪ ತಳವಾರ, ಯಲ್ಲಪ್ಪ ಹಂಚಿನಮನಿ, ಮಂಜುನಾಥ ವಾಲ್ಮೀಕಿ, ಚಂದ್ರಗೌಡ ಪಾಟೀಲ್, ಹನಮಂತಪ್ಪ ಗುಳೇದ, ಸುಮೀತ ಮರೆಣ್ಣನವರ, ಕೀರಣ ಗುಗೆಲ್ಲೂರ, ಫಕ್ಕೀರೇಶ ವಾಲ್ಮೀಕಿ, ಈರನಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು