ಬಳ್ಳಾರಿ

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆ

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆ

ಬಳ್ಳಾರಿ 12:  ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ಮತ್ತು ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕೆಂದು ಸಿರಿಗೇರಿ ಪನ್ನರಾಜ್, ಅಧ್ಯಕ್ಷರು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ಬಳ್ಳಾರಿ ಇವರ ನೇತೃತ್ವದ ಪೂರ್ವಭಾವಿ ಸಭೆ ನಡೆಯಿತು. ನಗರದಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಪ್ರಾಂಶುಪಾಲರಾದ ಮೋನಿಕ ರಂಜನ್ ಮತ್ತು ಪ್ರಾಧ್ಯಾಪಕರಾದ ರಾಜ್ಯಶಾಸ್ತ್ರ ವಿಭಾಗದ ಹೊನ್ನೂರವಲ್ಲಿ ಮತ್ತು ಇತರೆ ಪ್ರಾಧ್ಯಾಪಕರ ಸಮ್ಮುಖದಲ್ಲಿ ಹಾಗೂ ಬಳ್ಳಾರಿಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರನ್ನು ಹಾಗೂ ಪದವಿ ಪೂರ್ವ ಕಾಲೇಜ್ ನಿರ್ದೇಶಕರನ್ನು ಮತ್ತು ಉಪನ್ಯಾಸಕರನ್ನು, ವಿದ್ಯಾರ್ಥಿಗಳನ್ನು ಭೇಟಿ ಮಾಡಲಾಯಿತು.   

ತರುವಾಯ  ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಹಾಗೂ 371 ಜೆ ಪ್ರಾಮುಖ್ಯತೆಯ ಕುರಿತು ಪ್ರಾಂಶುಪಾಲರು  ಪ್ರಾಧ್ಯಾಪಕರು , ಉಪನ್ಯಾಸಕರು,  ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರಾಜ್ಯದ ಇತರೆ ಭಾಗದಲ್ಲಿ 371 ಜೆ ವಿರುದ್ಧ  ನಡೆಯುತ್ತಿರುವ ಪಿತೂರಿಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಮುಂದಿನ ದಿನಗಳಲ್ಲಿ 371 ಜೆ ವಿರುದ್ಧವಾಗಿ ನಡೆಯುವ ಷಡ್ಯಂತ್ರವನ್ನು ಮನಗಾಣದ ಹೋದರೆ ನಾವು ಕಲ್ಯಾಣ ಕರ್ನಾಟಕದ ಶಿಕ್ಷಣ, ಉದ್ಯೋಗ, ಅಭಿವೃದ್ಧಿಯ ವಿಚಾರದಲ್ಲಿ ತುಂಬಾ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು  ತಿಳಿಸಲಾಯಿತು. ಈ ಸಂದರ್ಭದಲ್ಲಿ ನಾರಾಯಣಸ್ವಾಮಿ , ಸಂಗನಕಲ್ಲು ವಿಜಯಕುಮಾರ್, ಆಂಜನೇಯಲು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು  ಉಪಸ್ಥಿತರಿದ್ದರು. 


ಸುದ್ದಿ ಓದಿ