ಗರ್ಭಿಣಿ ಬಾಣಂತಿಯರು ಅತ್ಯುತ್ತಮ ಆಹಾರದೊಂದಿಗೆ ಆರೋಗ್ಯದ ಕಾಳಜಿ ವಹಿಸಿ : ಈಶ್ವರ ಮಮದಾಪೂರ
ಗರ್ಭಿಣಿ ಬಾಣಂತಿಯರು ಅತ್ಯುತ್ತಮ ಆಹಾರದೊಂದಿಗೆ ಆರೋಗ್ಯದ ಕಾಳಜಿ ವಹಿಸಿ : ಈಶ್ವರ ಮಮದಾಪೂರ
ಗೋಕಾಕ,07: ಗರ್ಭಿಣಿ ಹಾಗೂ ಬಾಣಂತಿಯರು ಅತ್ಯುತ್ತಮ ಆಹಾರದೊಂದಿಗೆ ಆರೋಗ್ಯದ ಕಾಳಜಿ ವಹಿಸಿಕೊಂಡರೆ ಹುಟ್ಟಿದ ಮಕ್ಕಳು ಕೂಡ ಆರೋಗ್ಯ ಪೂರ್ಣವಾಗಿರುತ್ತವೆ. ಈ ನಿಟ್ಟಿನಲ್ಲಿ ಕಾಲ ಕಾಲಕ್ಕೆ ವೈದ್ಯರು ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮಾರ್ಗದರ್ಶನದೊಂದಿಗೆ ತಮ್ಮ ಹಾಗೂ ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕವಿ , ಶಿಕ್ಷಕ ಈಶ್ವರ ಮಮದಾಪೂರ ಹೇಳಿದರು.
ಗೋಕಾಕ ತಾಲೂಕು ಕನಸಗೇರಿ ಟಗರಿತೋಟದ ಅಂಗನವಾಡಿ ಶಾಲೆಯಲ್ಲಿ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮೊಲೆ ಹಾಲು ಸತ್ವ ಪೂರ್ಣವಾಗಿದ್ದು ಮಗುವಿಗೆ ಪೂರ್ಣ ಪ್ರಮಾಣದಲ್ಲಿ ಹಾಲುಣಿಸುವುದರಿಂದ ಮಗು ಆರೋಗ್ಯವಾಗಿ ಬೆಳೆಯಲು ಅನುಕೂಲವಾಗುತ್ತದೆ ಆದ್ದರಿಂದ ಬಾಣಂತಿಯರು ಮಗುವಿಗೆ ಪೂರ್ಣ ಪ್ರಮಾಣದಲ್ಲಿ ಹಾಲುಣಿಸಬೇಕೆಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ಪದ್ಮಾ ಟಗರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ದ್ರೌಪದಿ ಹಳಗೂರಿ ಫಕೀರಮ್ಮ ಉಪಸ್ಥಿತರಿದ್ದರು. ಗರ್ಭಿಣಿ ಹಾಗೂ ಬಾಣಂತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.