ಮಹಲಿಂಗಪುರ

ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ಸೇವೆ

ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ಸೇವೆ

ಬಸವೇಶ್ವರ ಮಾಲಕರು- ಚಾಲಕರ ಸಂಘದ ವತಿಯಿಂದ  

ಮಹಾಲಿಂಗಪುರ 24: ನಗರದ ಬೆಳಗಲಿ ಮಾರ್ಗದಲ್ಲಿ ಮೊದಲ ಬಾರಿಗೆ ಬಸವೇಶ್ವರ ಮಾಲಕರು ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಎರಡು ದಿನ ನಿರಂತರವಾಗಿ ತಮ್ಮ ಸ್ವಯಂ ಪ್ರೇರಣೆಯಿಂದ ಶ್ರೀಶೈಲ್ ಮಲ್ಲಿಕಾರ್ಜುನ ದರ್ಶನ ತೆರಳುವ ಪಾದಯಾತ್ರೆಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ತಮ್ಮ ದೈವ ಭಕ್ತಿಯನ್ನು ಮೆರೆದಿದ್ದಾರೆ. 

ಮಾಲಕರು ಮತ್ತು ಚಾಲಕರ ಸಂಘದ ಮುಖಂಡರಾದ ಮಹಾದೇವ ಉತ್ನಾಳ, ರಾಘು ಅನೆಪ್ಪಗೊಳ, ಸಂಗು ಮಾದರ, ಮಹಾಲಿಂಗ ಕಬ್ಬೂರ, ಚೆನ್ನಗಿರಿ ಚೌಗಲಾ, ಮಲ್ಲಿಕಾರ್ಜುನ ಸೈದಾಪುರ, ಶಂಕರ ಚಂಡೊಲ, ಗೋಪಾಲ ಯಾದವಾಡ,ಸಾಗರ ಮಾದರ, ಮಲ್ಲಿಕ ನದಾಫ, ದಾನೇಶ ಕರಿಗಾರ, ಲಾಲಸಾಬ್ ಹವಾಲ್ದಾರ, ಸೈಯದ್ ಪೆಂಡಾರಿ, ಲಕ್ಷಣ ದೊಡಮನಿ ಮಹಾಲಿಂಗ ಚೌಗಲಾ, ಬಾಳಪ್ಪ ಮಾಗಿ, ಮಹಾಲಿಂಗ ದೊಡಮನಿ, ಪ್ರದೀಪ ತಡಸಲ, ರಾಜು ಕೊಗಟನೂರ, ಸಂತೋಷ ಬಂಡಿವಡ್ಡರ, ಶಿವಪ್ಪ ಬನ್ನುರ, ಸೇರಿದಂತೆ ಇನ್ನೂ ಹಲವಾರು ಚಾಲಕರು ಮಾಲಕರು ಭಾಗಿಯಾಗಿದ್ದರು. 


ಸುದ್ದಿ ಓದಿ