ಲಸಿಕಾ ಅಭಿಯಾನಕ್ಕೆ ಪ್ರಕಾಶ ಕುದರಿ ಚಾಲನೆ
ಶಿಗ್ಗಾವಿ16 : ಪಟ್ಟಣದ ಸರಕಾರಿ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಇಂದು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೋವಿಡ್ ವ್ಯಾಕ್ಸಿನ್ ಚುಚ್ಚುಮದ್ದು ಅಭಿಯಾನಕ್ಕೆ ತಾಲೂಕ ದಂಡಾಧಿಕಾರಿ ಪ್ರಕಾಶ ಕುದರಿ ಚಾಲನೆ ನೀಡಿದರು.
ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ.ಪಿ.ಹೆಚ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೇವರಾಜ.ಎಸ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಕುಡಚಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಸಿ.ಪಿ.ಆಯ್ ಬಸವರಾಜ ಹಳಬಣ್ಣವರ, ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀಕಾಂತ ಸರ್ಜಾಪೂರ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಜೆ.ಎಲ್.ಕಮತರ, ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯ ಡಾ. ಲಕ್ಷ್ಮಣ ನಾಯ್ಕ, ಡಾ. ಗುರುರಾಜ, ಡಾ. ಸುಭಾಸ ಲೋಖ್ರೆ, ಡಾ. ವಿವೇಕ, ಡಾ. ಮಹೇಶ, ಡಾ.ತಬುಸುಮ್, ಡಾವಿಧ್ಯಾವತಿ, ಪ್ರಭಾರಿ ಶುಶ್ರೂಷಾ ಅಧೀಕ್ಷಕ ಅಧಿಕಾರಿ ಆರ್.ಸಾರಮ್ಮ, ಸಹಾಯಕ ಆಡಳಿತಾಧಿಕಾರಿ ಪಾಟೀಲ ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು ಮತ್ತು ಮಹಿಳಾ ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು.