ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ
ಮುದ್ದೇಬಿಹಾಳ: ರಾಜ್ಯದಲ್ಲಿನ ಬ್ರಷ್ಟ, 40 ಪರ್ಸೇಂಟ್ ಹಾಗೂ ಕೋಮುವಾದಿ ಬಿಜೆಪಿ ಪಕ್ಷವನ್ನು ಕಿತ್ತೇಸೆದು ಮತ್ತೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು ಮತಕ್ಷೇತ್ರದ ಎಲ್ಲ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ ಎಸ್ ನಾಡಗೌಡ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ರಾಮಯ್ಯನವರು ಹೇಳುವ ಮೂಲಕ ತಾಲೂಕಿನಲ್ಲಿ ಕಾಂಗ್ರೇಸ್ ಟಿಕೇಟ್ ಗೊಂದಲಕ್ಕೆ ಪ್ರತಿಪಕ್ಷದ ತೆರೆಎಳೆದರು.
ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಸಂಜೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷವೂ ಮತಕ್ಷೇತ್ರದಲ್ಲಿ ಸದಾ ಬರಗಾಲದಿಂದ ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ಸರಕಾರ ನಿರಾವರಿ ಹೆಚ್ಚು ಅನುದಾನ ನೀಡುವ ಮೂಲಕ ಈ ಬಾಗದಲ್ಲಿ ಸಂಪೂರ್ಣ ನಿರಾವರಿ ಕಲ್ಪಿಸಿದ್ದರಿಂದಾಗಿ ಇಂದು ರೈತರು ವಿವಿಧ ವಾಣಿಜ್ಯ ಬೆಳೆಗಳನ್ನು ಬೇಳೆಯವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗಿದೆ.
ಬಿಜೆಪಿದೇಶದಲ್ಲಿ ಡಿಸೇಲ್, ಪೆಟ್ರೋಲ್, ಗ್ಯಾಸ್ ಸೇರಿದಂತೆ ಪ್ರತಿಯೊಂದರ ಬೆಲೆ ಗಗನಕ್ಕೆ ಏರಿದೆ. ಜನಸಾಮಾನ್ಯರು ಬಳಸುವ ವಸ್ತುಗಳ ಮಾತ್ರವಲ್ಲದೇ ಶಾಲಾ ಮಕ್ಕಳು ಬಳಸು ಪೇನ್ಸಿಲ್ ಮೇಲೂ ಮೇಲೆ ಕೇಂದ್ರ ಸರ್ಕಾರ ಜಿಎಸ್ಟಿ ಹಾಕುವ ಮೂಲಕ ಜನ ವಿರೋಧಿ ಸರಕಾರವಾಗಿದೆ. ಸಧ್ಯ ಪ್ರದಾನಿ ನರೇಂದ್ರ ಮೋದಿ ಕೇಂದ್ರ ಸರಕಾರ ಸಾಮಾನ್ಯ ವಸ್ತುಗಳಿಗೂ ಜಿಎಸ್ಟಿ ಹಾಕಿ. ಬಡವರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಮಾತ್ರವಲ್ಲದೇ ಜಿಎಸ್ಟಿ, ಬೆಲೆ ಏರಿಕೆ ಮಾಡುವ ಮೂಲಕ ಬಡವರ ರಕ್ತ ಹೀರುತ್ತಿದ್ದಾರೆ
ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಸ್ವಸ್ ಬ್ಯಾಂಕಿನಲ್ಲಿರುವ ಬ್ಲಾಕ್ ಮನಿಯನ್ನು ತರುವ ಮೂಲಕ ದೇಶದ ಪ್ರತಿಯೋಬ್ಬ ಪ್ರಜೆಗೂ 15 ಲಕ್ಷ ರೂಗಳನ್ನು ಬ್ಯಾಂಕ ಖಾತೆಗೆ ಹಾಕುತ್ತೇವೆ ಎಂದರು ಯಾವೂದು ಮಾಡಲಿಲ್ಲ ಜನರಿಗೆ ತಮ್ಮ ಬ್ರಷ್ಟಾಚಾರ ಗೊತ್ತಾಗಬಾರದು ಎಂದು ಬರಿ ಸುಳ್ಳನ್ನೆ ಬಂಡವಾಳ ಮಾಡಿಕೊಂಡು ಜಾತಿ ಧರ್ಮಗಳ ಮದ್ಯೆ ವೈಷಮ್ಯ ಸೃಷ್ಠಿಸಿ ಜನರಿಗೆ ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ದೇಶದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ: ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇನ್ನೊಂದೆಡೆ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ಸರಕಾರ 40 ಪರ್ಸೇಂಟ್ ಸರಕಾರವಾಗಿದೆ ಎಂದು ಗುತ್ತಿಗೆದಾರರ ಸಂಘ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದು ವರ್ಷವಾಯಿತು. ಆದರೆ ಯಾವುದೇ ತನಿಖೆಗೆ ಮುಂದಾಗಿಲ್ಲ. 'ನಾ ಖಾವೂಂಗಾ, ನಾ ಖಾನೆ ದೂಂಗಾ' ಎನ್ನುವ ಮೋದಿ ಭ್ರಷ್ಟಾಚಾರ ನಡೆದ ಬಗ್ಗೆ ತನಿಖೆ ಮಾಡಿಸಬಹುದಿತ್ತು. ಯಾಕೆ ತನಿಖೆ ಮಾಡಿಸುತ್ತಿಲ್ಲ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರಾ?
ಯಾವುದೇ ಕೆಲಸ ಆಗಬೇಕೆಂದ್ರೂ ಈಗಿನ ಸರ್ಕಾರಕ್ಕೆ 40ಅ ಕಮಿಷನ್ ಕೊಡಬೇಕು. ಈ ಮೊದಲು ಕೇಳಿರಲಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಹೀಗೆ ಆಗಿದ್ದರೆ ಸಿಬಿಐ ಗೆ ರಫರ್ ಮಾಡಿಬಿಡುತ್ತಿದ್ದೆ. ಬಿಜೆಪಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ:
ಕೇವಲ ಸುಳ್ಳು, ಹುಸಿ ದೇಶಭಕ್ತಿ ಹೆಸರಲ್ಲಿ ಜನರನ್ನು ದಾರಿ ತಪ್ಪಿಸಿ ಅಧಿಕಾರಿ ನಡೆಸುತ್ತಿದ್ದಾರೆ ಈ ಬಿಜೆಪಿಯವರು ನಮ್ಮ ಸರ್ಕಾರ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡ್ತಿವಿ ಅಂತಿದ್ರು. ಅಧಿಕಾರಕ್ಕೆ ಬಂದು ಎಷ್ಟೊ ವರ್ಷಗಳಾದ್ವು. ರೈತರ ಆದಾಯ ಹೆಚ್ಚು ಮಾಡಿದ್ದಾರಾ? ದೇಶದಲ್ಲಿ ಯಾವ ರೈತ ಸುಖವಾಗಿದ್ದಾನೆ? ಎಲ್ಲಿ ನೋಡಿದರೂ ಬೆಲೆ ಏರಿಕೆ, ಭ್ರಷ್ಟಾಚಾರದಿಂದ ದೇಶದ ರೈತ ತೀರಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ.
ಸಧ್ಯ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಾರಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ತಿರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಮತವನ್ನು ಕಾಂಗ್ರೇಸ್ ಅಭ್ಯರ್ಥಿ ಸಿ ಎಸ್ ನಾಡಗೌಡ ಕೊಟ್ಟು ಗೆಲ್ಲಿಸಿದಾಗ ಮಾತ್ರ ನನಗೆ ಬೆಂಬಲಿಸಿದಂತೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ರಾಜ್ಯದಲ್ಲಿ ಲಂಚ ತಾಂಡವವಾಡುತ್ತಿದೆ. ನಾನು ಹಣಕಾಸು ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಯಾವುದೇ ಒಬ್ಬ ಕಂಟ್ರಾಕ್ಟರ್ ನಾನು 5 ಪೈಸೆ ಲಂಚ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ರೆ ರಾಜಕೀಯ ನಿವೃತ್ತಿ ಘೋಷಿಸಿ ಸನ್ಯಾಸತ್ವ ಸ್ವೀಕರಿಸುತ್ತೇನೆ" ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆ ಜಿ ಅಕ್ಕಿಯನ್ನು ಉಚಿತವಾಗಿ ಕೋಡುತ್ತಿದ್ದೇ ಸಧ್ಯ ಬಿಜೆಪಿ ಸರಕಾರದವರು 5 ಕೆಜಿ ಮಾತ್ರ ಕೊಡುತ್ತಿದ್ದಾರೆಮತ್ತೆ ರಾಜ್ಯದಲ್ಲಿ ನಮ್ಮ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಪ್ರತಿ ಕುಟುಂಭದ ಮಹಿಳೆಗೆ 2000 ಸಾವಿರ ನೀಡುತ್ತೇವೆ, ಜೊತೆಗೆ ಗ್ರಹಜ್ಯೋತಿ ಯೋಜನೆಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ. ಜೊತೆಗೆ ಕೃಷ್ಣಾ ಸೇರಿದಂತೆ ವಿವಿಧ ನಿರಾವರಿ ಯೋಜನೆಗಳ ಅಭಿವೃದ್ಧಿಗಾಗಿ ಸುಮಾರು 2 ಲಕ್ಷ ಕೋಟಿ ಖರ್ಚು ಮಾಡಲಾಗುವುದು ಒಂಚದು ವೇಳೆ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿಯೂ ಅವರು ಘೋಷಿಸಿದರು ದಯಮಾಡಿ ಈ ಬಾರಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ" ಎಂದರು.
ಈ ವೇಳೆ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಬ, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಶಾಸಕ ಜಮೀರಹಮ್ಮದ ಖಾನ್, ಮಾಜಿ ಸಚೀವ, ಎಸ್ ಸಿ ಮಾಹಾದೇವಪ್ಪ, ಕಾಂಗ್ರೇಸ್ ಅಭ್ಯರ್ಥಿ ಮಾಜಿ ಸಚೀವ ಸಿ ಎಸ್ ನಾಡಗೌಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವಿಧಾನಪರಿಷತ್ ಸದಸ್ಯ ಪ್ರಕಾಶ ರಾಥೋಡ, ಮಲ್ಲಿಕಾರ್ಜುನ ಮದರಿ, ಗಫೂರಸಾಬ ಮಕಾನಂದಾರ, ಗುರು ತಾರನಾಳ, ಬಾಪುರಾಯ ದೇಸಾಯಿ, ಗೋವಾ ಕನ್ನಡಿಗರ ಹೋರಾಟದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನೀಲಮ್ಮ ಮೇಟಿ ಸೇರಿದಂತೆ ಹಲವರು ಇದ್ದರು.ವಾಯ್ ಎಚ್ ವಿಜಯಕರ ನಿರೂಪಿಸಿದರು.