ಮುದ್ದೆಬಿಹಾಲ್

ಫೆ.21ರಂದು ಪ್ರಜಾಧ್ವನಿ ಕಾರ್ಯಕ್ರಮ

ಫೆ.21ರಂದು ಪ್ರಜಾಧ್ವನಿ ಕಾರ್ಯಕ್ರಮ

------------- 

 ಮುದ್ದೇಬಿಹಾಳ: ಇದೇ ದಿ.21 ರಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಪ್ರಜಾಧ್ವನಿ ಕಾರ್ಯಕ್ರಮ ನಡೆಸಲಾಗುತ್ತಿದೆ ಈ ವೇಳೆ ಸುಮಾರು 25 ಸಾವಿರಕ್ಕಿಂತ ಅಧಿಕ ಕಾರ್ಯಕರ್ತರು, ಹಾಗೂ ಪಧಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ವೈ ಎಚ್ ವಿಜಯಕರ ಹಾಗೂ ತಾಲೂಕಾ ಬ್ಲಾಕ್ ಕಾಂಗ್ರೇಸ್ ಘಟಕದ ಅಧ್ಯಕ್ಷ ಗುರು ತಾರನಾಳ ಹೇಳಿದರು. 


  ಪಟ್ಟಣದ ವಿ ಬ್ಹಿ ಸಿ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು  ಕಳೇದ ಐದು ವರ್ಷಗಳಿಂದ ಮತಕ್ಷೇತ್ರದಲ್ಲಿನ ಅರಾಜಕತೆ, ಬ್ರಷ್ಟಾಚಾರ, ಸಾಮಾನ್ಯಜನರ ಜನರ ಮೇಲೆ ಆಗುತ್ತಿರುವ ಧೌರ್ಜನ್ಯದಂತ ಕೆಟ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಮುಂಬರುವ ಚುನಾವಣೆಯಲ್ಲಿ ಮತಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ಉದ್ದೇಶ ಇದಾಗಿದೆ.  

ಜೊತೆಗೆ ನಿನ್ನೇ ಬಿಜೆಪಿ ಸರಕಾರ ಸಚೀವ ಆಸ್ವಥ್ ನಾರಾಯಣರವರು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಟಿಪ್ಪುನ ಹೇಗೆ ಹೊಡೆದು ಹಾಕಲಾಯಿತೋ ಅದರಂತೆ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಮುಗಿಸಬೇಕು ಎಂದು ಪ್ರಚೋಧನಾ ಹೇಳಿಕೆಯನ್ನು ಮುದ್ದೇಬಿಹಾಳ ತಾಲೂಕಾ ಬಲವಾಗಿ ಖಂಡಿಸುತ್ತದೆ. 

ಸಿದ್ರಾಮಯ್ಯನವರು ಒಬ್ಬ ಹಿರಿಯ ಹಾಗೂ ಅನುಭವಿ, ರಾಜಕಾರೀಣಿ ಮಾತ್ರವಲ್ಲದೇ ಹಲವಾರು ಹುದ್ದೇಗಳನ್ನು ಅಲಂಕರಿಸಿದ್ದಲ್ಲದೇ ಒಂದುಬಾರಿ ಮುಖ್ಯಮಂತ್ರಿಯಾಗಿದ್ದವರು. ಅಂಥವರ ಬಗ್ಗೆ ಇಷ್ಟು ಕೆಳಮಟ್ಟದ ಹಾಗೂ ಪ್ರಚೋಧನಾ ಹೇಳಿಕೆ ನೀಡುವುದು ಸರಿಯಲ್ಲ ಕಾರಣ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಮದ್ಯ ವಹಿಸಿ ಸಧ್ಯ ಸಚೀವ ಅಶ್ವತ ನಾರಾಯಣ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಜೊತೆಗೆ ಈ ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು. 

 ಸಧ್ಯ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾಲಘಟ್ಟದಲ್ಲಿ ಮತ್ತೆ ರಾಜ್ಯದಲ್ಲಿ ಟಿಪ್ಪು ವಿಷಯವನ್ನು ಮುಂದೆ ಮಾಡಿ ವಿನಾಕಾರಣ ಗೊಂದಲವನ್ನು ಸೃಷ್ಠಿಸುವ ಮೂಲಕ ಜನರ ದಾರಿ ತಪ್ಪಿಸುವ ಹುನ್ನಾರ ಬಿಜೆಪಿಯವರದ್ದಾಗಿದೆ ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಜನರು ಈ ಬಾರಿ ತಿರಸ್ಕರಿಸಲು ತಿರ್ಮಾನಿಸಿದ್ದಾರೆ ಈ ನಿಟ್ಟಿನಲ್ಲಿ ಇದೇ ದಿ, 21 ಮಂಗಳವಾರದಂದು ವಿಬಿಸಿ ಹೈಸ್ಕೂಲ ಮೈದಾನದಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮ ಜರುಗಲಿದೆ. ಈ ವೇಳೆ ಮಾಜಿಮುಖ್ಯಮಂತ್ರಿ ಸಿದ್ರಾಮಯ್ಯನವರು, ಸೇರಿದಂತೆ ರಾಜ್ಯದ ಅನೇಕ ನಾಯಕರು ಮುಖಂಡರು ಬಾಗವಹಿಸಲಿದ್ದು ಕಾರಣ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆನೀಡಿದರು. 

  ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000,  ಹಾಗೂ ಪ್ರತಿ ಮನೆಗೂ ಪ್ರತಿ ಕುಟುಂಬಕ್ಕೂ 200 ಯುನಿಟ್ ವಿದ್ಯುತ್ ಉಚಿತದ ಭರವಸೆ ಕಾರ್ಡಗಳನ್ನು  ಮನೆ ಮನೆಗೆ ವಿತರಿಸಲು ಬಿಡುಗಡೆ ಮಾಡಲಾಯಿತು.  


ಈ ಸಂದರ್ಭದಲ್ಲಿ  ಕೆಪಿಸಿಸಿ ಸದಸ್ಯ ಬಾಪುರಾವ್ ದೇಸಾಯಿ. ಯುವ ಕಾಂಗ್ರೇಸ್ ಗೌರವಾಧ್ಯಕ್ಷ ರಾಹುಲ್ ನಾಡಗೌಡ, ಪಿಂಟು ಸಾಲಿಮನಿ, ರಾಜ್ಯ ಎನ್ ಎಸ್ ಯೂ ಐ ಪ್ರದಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ತಾಲೂಕಾ ಯೂವ ಕಾಂಗ್ರೇಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಪುರಸಭೆ ಸದಸ್ಯ ರಿಯಾಜ ಢವಳಗಿ, ಅಬೂಬ್ಕರ ಹಡಗಲಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ಬೀರ​‍್ಪ ಯರಝರಿ, ಗೋಪಿ ಮಡಿವಾಳರ,ಕಾಂತು ಚಲವಾದಿ,ಸಿಕಂದರ್ ಜಾನ್ವೇಕರ,ಅಶೋಕ ಪಾದಕಟ್ಟಿ, ಬಸವರಾಜ ಬಜಂತ್ರಿ,ರಿಸಾಲ್ದಾರ,ಹರೀಶ ಬೇವೂರ,ದಾವಕ್ ಗೊಳಸಂಗಿ, ಸುಹೇಬ ಪಟೇಲ,ಲಕ್ಷಣ ಚವ್ಹಾಣ,ಶಭೀರ ಮಕಾನದಾರ, ತೊಶೀಫ ನಾಯ್ಕೋಡಿ,ನಿಸಾರ ಮಮದಾಪೂರ,ರಮಜಾನ ನದಾಫ,ಚಿನಿವಾರ,ಅಸ್ಪಾಕ ಢವಳಗಿ,ರಫೀಕ ಅಲ್ತಾಫ, ಮುಲ್ಲಾ ಹಲವರು ಇದ್ದರು. 


ಸುದ್ದಿ ಓದಿ